»   » ಮೀಡಿಯಾ ಮುಂದೆ ಪತ್ನಿಗೆ ಮುತ್ತಿನ ಮಳೆ ಸುರಿಸಿದ ಆಮೀರ್ ಖಾನ್

ಮೀಡಿಯಾ ಮುಂದೆ ಪತ್ನಿಗೆ ಮುತ್ತಿನ ಮಳೆ ಸುರಿಸಿದ ಆಮೀರ್ ಖಾನ್

Posted By:
Subscribe to Filmibeat Kannada

ಅನೇಕ ಬಾಲಿವುಡ್ ಸಿನಿಮಾಗಳಲ್ಲಿ, ಹೀರೋಯಿನ್ ಜೊತೆಗಿನ ಸಖತ್ ರೋಮ್ಯಾಂಟಿಕ್ ದೃಶ್ಯಗಳಲ್ಲಿ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಆಮೀರ್ ಖಾನ್ ಅಭಿನಯಿಸಿದ್ದಾರೆ.

ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಿದರೆ, ಕ್ಯಾಮರಾ ಮುಂದೆ ನಟ-ನಟಿಯರು ಅಂಥ ದೃಶ್ಯಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ. ಆದ್ರೆ, ಅದೇ ನಟ-ನಟಿಯರು ನಿಜ ಜೀವನದಲ್ಲಿ ತಮ್ಮ ಪತ್ನಿ-ಪತಿ ಜೊತೆಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವುದು ತುಂಬಾ ವಿರಳ.

ರೀಲ್ ನಲ್ಲಿ ಲಿಪ್ ಲಾಕ್ ಮಾಡುವ ಹೀರೋಗಳು, ರಿಯಲ್ ಆಗಿ ಕ್ಯಾಮರಾ ಮುಂದೆ ಪತ್ನಿ ತುಟಿಗೆ ತುಟಿ ಒತ್ತಿರುವುದನ್ನು ನೀವು ನೋಡಿದ್ದೀರಾ.? ಇಲ್ಲ ಅಂದ್ರೆ, ಕೊಂಚ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಫೋಟೋಗಳತ್ತ ಒಮ್ಮೆ ಕಣ್ಣಾಡಿಸಿ....

ಮೀಡಿಯಾ ಮುಂದೆ ಮುತ್ತಿನ ಮಳೆ ಸುರಿಸಿದ ಆಮೀರ್

ಮುಂಬೈ ಪತ್ರಕರ್ತರು ಹಾಗೂ ಮೀಡಿಯಾ ಮುಂದೆ ಪತ್ನಿ ಕಿರಣ್ ರಾವ್ ಗೆ ಆಮೀರ್ ಖಾನ್ ಮುತ್ತಿಟ್ಟಿದ್ದಾರೆ. ಅದು ಒಮ್ಮೆ ಅಲ್ಲ, ಎರಡೆರಡು ಬಾರಿ ಕಿರಣ್ ರಾವ್ ಗೆ ಆಮೀರ್ ಚುಂಬಿಸುತ್ತಿದ್ದರೆ, ಕ್ಯಾಮರಾ ಕಣ್ಣುಗಳನ್ನು ಅದನ್ನ ಸೆರೆಹಿಡಿಯುವಲ್ಲಿ ಬಿಜಿಯಾಗಿದ್ದವು.

ಅಮೀರ್ ಖಾನ್ ಫ್ಯಾಮಿಲಿ ನೋಡುವ ಕುತೂಹಲ ನಿಮಗಿದ್ಯಾ..?

ಅಷ್ಟಕ್ಕೂ, ಅಲ್ಲಿ ಆಗಿದ್ದೇನು.?

ನಟ ಆಮೀರ್ ಖಾನ್ ತಮ್ಮ 53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಜನ್ಮದಿನದ ಪ್ರಯುಕ್ತ ಜೋಧ್ ಪುರದಿಂದ ಮುಂಬೈಗೆ ಆಮೀರ್ ಖಾನ್ ಆಗಮಿಸಿದರು. ಮುಂಬೈ ಏರ್ ಪೋರ್ಟ್ ನಲ್ಲಿ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಕೇಕ್ ಮಾಡಿ ಆಮೀರ್ ಖಾನ್ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡರು. ಆಗಲೇ ಆಮೀರ್ ಖಾನ್ ಕೊಂಚ ರೋಮ್ಯಾಂಟಿಕ್ ಆಗಿದ್ದು.

ಎಚ್‌1ಎನ್‌1 ಸೋಂಕಿನಿಂದ ಬಳಲುತ್ತಿರುವ ಅಮೀರ್ ಖಾನ್ ದಂಪತಿ

ಮಾಧ್ಯಮಗಳ ಮುಂದೆ ಲಿಪ್ ಲಾಕ್

ರೋಮ್ಯಾಂಟಿಕ್ ಮೂಡ್ ನಲ್ಲಿದ್ದ ಆಮೀರ್ ಖಾನ್, ಪತ್ನಿ ಕಿರಣ್ ರಾವ್ ತುಟಿಗೆ ತುಟಿ ಒತ್ತಿ, ತಮ್ಮ ಪ್ರೀತಿಯನ್ನ ಜಗಜ್ಜಾಹೀರು ಮಾಡಿದರು. ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಸೂಪರ್ ಸ್ಟಾರ್ ಗಳು ಈ ರೀತಿ ನಡೆದುಕೊಳ್ಳುವುದು ತೀರಾ ಅಪರೂಪ. ಹೀಗಾಗಿ, ಆಮೀರ್ ಖಾನ್ ಲಿಪ್ ಲಾಕ್ ಕಂಡ ಮಾಧ್ಯಮ ಮಿತ್ರರಿಗೆ ಸರ್ ಪ್ರೈಸ್ ಆಗಿದೆ..

ಇದೇ ಮೊದಲ ಬಾರಿ ಅಲ್ಲ

ಪಬ್ಲಿಕ್ ನಲ್ಲಿ ಪತ್ನಿ ಜೊತೆಗೆ ಆಮೀರ್ ಖಾನ್ ಲಿಪ್ ಲಾಕ್ ಮಾಡಿರುವುದು ಇದೇ ಮೊದಲ ಬಾರಿಗೆ ಅಲ್ಲ. ಚಲನಚಿತ್ರೋತ್ಸವ ಒಂದರಲ್ಲಿ ಪಾಲ್ಗೊಂಡಾಗಲೂ ಆಮೀರ್ ಖಾನ್ ಹೀಗೆ ಮಾಡಿದ್ದರು.

ಎರಡನೇ ಪತ್ನಿ

ಆಮೀರ್ ಖಾನ್ ಗೆ ಕಿರಣ್ ರಾವ್ ಎರಡನೇ ಪತ್ನಿ. ಮೊದಲ ಪತ್ನಿ ರೀನಾ ದತ್ತಗೆ ವಿಚ್ಛೇದನ ನೀಡಿದ ಬಳಿಕ, 'ಲಗಾನ್' ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಅವರನ್ನ 2005 ರಲ್ಲಿ ಆಮೀರ್ ಖಾನ್ ವರಿಸಿದರು.

English summary
Check out the pictures of Bollywood Actor Aamir Khan's lip lock with wife Kiran Rao on his 53rd birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X