For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ಬ್ರೇನ್ ಸ್ಟ್ರೋಕ್: 'ಆಶಿಖಿ' ಖ್ಯಾತಿಯ ನಟ ರಾಹುಲ್ ರಾಯ್ ಸ್ಥಿತಿ ಗಂಭೀರ

  |

  ಬಾಲಿವುಡ್ ನ ಖ್ಯಾತ ನಟ ರಾಹುಲ್ ರಾಯ್ ಚಿತ್ರೀಕರಣ ಸಮಯದಲ್ಲಿ ಬ್ರೇನ್ ಸ್ಟ್ರೋಕ್ ಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಹುಲ್ ಹೊಸ ಸಿನಿಮಾ 'ಎಲ್ ಎ ಸಿ-ಲಿವ್ ದಿ ಬ್ಯಾಟಲ್ ಇನ್ ದಿ ಕಾರ್ಗಿಲ್' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಿನಿಮಾದ ಚಿತ್ರೀಕರಣ ಕಾರ್ಗಿನಲ್ ನಲ್ಲಿ ನಡೆಯುತ್ತಿತ್ತು, ಈ ಸಮಯದಲ್ಲಿ ರಾಹುಲ್ ರಾಯ್ ಗೆ ಬ್ರೇನ್ ಸ್ಟ್ರೋಕ್ ಸಂಭವಿಸಿದೆ.

  ವಿಪರೀತ ಚಳಿಯ ನಡುವೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಪ್ರತಿಕೂಲ ವಾತಾವರಣದಿಂದ ಬ್ರೇನ್ ಸ್ಟ್ರೋಕ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮಗಳ ನಟನಾವೃತ್ತಿಯ ನಿರ್ಣಯ ಆಕೆಯ ಪತಿಯದ್ದು ಎಂದಿದ್ದ ಅಮಿತಾಬ್

  ಈ ಬಗ್ಗೆ ಮಾಹಿತಿ ನೀಡಿರುವ ಸಹೋದರ ರೋಮಿರ್ ಸೇನ್, ರಾಹುಲ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಈ ಬಗ್ಗೆ ಚಿಂತಿಸಬೇಡಿ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಸಿನಿಮಾದ ಸಹ ನಟ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ನಿಶಾಂತ್ ಸಿಂಗ್, ಇಡೀ ಸಿನಿಮಾತಂಡ ಊಟಮಾಡಿ ರಾತ್ರಿ ಮಲಗುವವರೆಗೂ ಚೆನ್ನಾಗಿಯೆ ಇದ್ದರು. ಮರುದಿನ ಶೂಟಿಂಗ್ ವೇಳೆ ಈ ಘಟನೆ ಸಂಭವಿಸಿದೆ. ಪ್ರತಿಕೂಲ ವಾತಾವರಣದಿಂದ ಹೀಗೆ ಆಗಿರುವ ಸಾಧ್ಯತೆ ಇದೆ. ಕಾರ್ಗಿಲ್ ನಲ್ಲಿ ಈಗ ಮೈನಸ್ 15 ಡಿಗ್ರಿ ಸೆಂಟಿಗ್ರೇಡ್ ಇದೆ ಎಂದಿದ್ದಾರೆ.

  'ರಾಹುಲ್ ಬೆಳಗ್ಗೆ ಸ್ವಲ್ಪ ಡಲ್ ಆಗಿದ್ದರು. ಚಿತ್ರದ ಸಂಭಾಷಣೆ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಗಮನಿಸಿದೆವು. ವಾಕ್ಯಗಳನ್ನು ಹೇಳಲು ಕಷ್ಟಪಡುತ್ತಿದ್ದರು. ಸಂಜೆ ಹೊತ್ತಿಗೆ ಅಸಮಾನ್ಯವಾಗಿ ವರ್ತಿಸಲು ಪ್ರಾರಂಭಿಸಿದರು. ಆಗ ಅವರಿಗೆ ಏನೋ ಆಗಿದೆ ಎನ್ನುವುದು ಗೊತ್ತಾಯಿತು. ತಕ್ಷಣ ಅವರನ್ನು ಕಾರ್ಗಿಲ್ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಯಿತು'

  'ನಂತರ ಬೆಳಗ್ಗೆ ಅವರನ್ನು ಮಿಲಿಟರಿ ಸಹಾಯದಿಂದ ಶ್ರೀನಗರಕ್ಕೆ ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಲಾಯಿತು. ಬಳಿಕ ಮುಂಬೈನ ನಾನಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ನಿಶಾಂತ್ ಹೇಳಿದ್ದಾರೆ. 52 ವರ್ಷದ ರಾಹುಲ್ ಆಶಿಖಿ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದರು.

  English summary
  Aashiqui Fame Actor Rahul Roy Suffering brain Stroke while filming in Kargil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X