»   » ಆರ್ಥಿಕ ಸಂಕಷ್ಟದಿಂದ ಬೀದಿಗೆ ಬಿದ್ದ ನಟ ಅಭಯ್

ಆರ್ಥಿಕ ಸಂಕಷ್ಟದಿಂದ ಬೀದಿಗೆ ಬಿದ್ದ ನಟ ಅಭಯ್

Posted By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನಟ ಅಭಯ್ ಡಿಯೋಲ್ ಈ ವರ್ಷ ಆರಂಭಿಸಿದ ಸ್ವಂತ ನಿರ್ಮಾಣ ಸಂಸ್ಥೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಅವರ ನಿರ್ಮಾಣದ ಬಾಲಿವುಡ್ 'One By Two' ಚಿತ್ರ ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗಿದ್ದು ಇದೀಗ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಚಿತ್ರಕ್ಕಾಗಿ ಸಾಕಷ್ಟು ಸಾಲವನ್ನೂ ಮಾಡಿದ್ದರಂತೆ ಅಭಯ್. ತನ್ನ ಮುಂಬೈನ ಜುಹು ಫ್ಲ್ಯಾಟನ್ನೂ ಅಡವಿಟ್ಟಿದ್ದರಂತೆ. ಆದರೆ ಇದೀಗ ಸಾಲ ತೀರಿಸಲಾಗದೆ ಅವರ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ ಸಾಲಕೊಟ್ಟ ಬ್ಯಾಂಕ್. ಈಗಾಗಲೆ ಮನೆಯ ಮುಂದೆ ಸಾರ್ವಜನಿಕ ಪ್ರಕಟಣೆಯನ್ನೂ ತೂಗುಹಾಕಲಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Abhay Deol Gets Destroyed Financially; Sells House

ದೇವಿಕಾ ಭಗತ್ ನಿರ್ದೇಶನದ 'ಒನ್ ಬೈ ಟು' ಚಿತ್ರ ಬಾಕ್ಸ್ ಆಫೀಸಲ್ಲಿ ಮಣ್ಣುಮುಕ್ಕಿತು. ಇದೀಗ ಚಿತ್ರದ ಅಸಲು ಬರದೆ ಅಭಯ್ ಡಿಯೋಲ್ ದಿವಾಳಿಯಾಗಿದ್ದಾರೆ. ಅವರ ಜುಹು ಫ್ಲ್ಯಾಟ್ ಹೆಚ್ಚೆಂದರೆ ರು.2-3 ಕೋಟಿ ಬೆಲೆ ಬಾಳುತ್ತಂತೆ.

ಇನ್ನು ಈ ಚಿತ್ರದ ಮೂಲಕ ಅಭಯ್ ತನ್ನ ಗರ್ಲ್ ಫ್ರೆಂಡ್ ಪ್ರೀತಿ ದೇಸಾಯಿ ಅವರನ್ನು ಪರಿಚಯಿಸಿದ್ದರು. ಕೇವಲ ತನ್ನ ಗರ್ಲ್ ಫ್ರೆಂಡ್ ಗಾಗಿ ಮಾಡಿದ ಸಿನಿಮಾ ಈಗ ಅಭಯ್ ಬೀದಿಗೆ ಬೀಳುವಂತೆ ಮಾಡಿದೆ. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ ಅದರ ಅರ್ಧದಷ್ಟೂ ಗಳಿಸಿಲ್ಲ ಎನ್ನುತ್ತವೆ ಮೂಲಗಳು.

English summary
Dev D actor, Abhay Deol had a very bad start this year with his home production, One By Two, which turned out to be a disaster at the Box Office. It is reported that the star has taken a loan for presenting this flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada