For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಿ ಮೆದುಳಿನಲ್ಲಿ ಏನಿಲ್ಲ', ಅವರನ್ನು ಹೊಗಳುವವರಿಗೂ ಬುದ್ದಿ ಇಲ್ಲ ಎಂದವರಾರು?

  By ಸೋನು ಗೌಡ
  |

  ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ತಮಗೆ ಸರಿ ಅಲ್ಲ ಎಂದೆನಿಸಿದ್ದನ್ನು ನೇರವಾಗಿ ಹೇಳಿ ಬಿಡುತ್ತಾರೆ. ಸಮಾಜದಲ್ಲಿನ ವ್ಯವಸ್ಥೆ ಹಾಗೂ ಯಾರ ಬಗ್ಗೆಯಾದ್ರೂ ಟೀಕೆ ಮಾಡಬೇಕು ಎಂದೆನಿಸಿದರೆ, ಬಹಿರಂಗವಾಗಿಯೇ ಟೀಕೆ ಮಾಡುತ್ತಾರೆ.

  ಅಂತಹ ದಿಟ್ಟ ನಿವೃತ್ತ ನ್ಯಾಯಾಧೀಶರು ಇದೀಗ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಬಗ್ಗೆ ಟೀಕೆ ಮಾಡಿದ್ದಾರೆ. ಅಂದಹಾಗೆ ನಿವೃತ್ತ ನ್ಯಾಯಮೂರ್ತಿ ಈ ತರ ಟೀಕೆ ಮಾಡಲು ಪ್ರಮುಖ ಕಾರಣ, ಬಿಗ್ ಬಿ ಅಮಿತಾಭ್ ಅವರನ್ನು ಮಾಧ್ಯಮದವರು ಸಿಕ್ಕಾಪಟ್ಟೆ ಹೊಗಳಿದ್ದು.[ರೇಖಾ-ಬಿಗ್ ಬಿ ರೋಮ್ಯಾನ್ಸ್ ನೋಡಿ ಕಣ್ಣೀರು ಹಾಕಿದ್ದ ಜಯಾ ಬಚ್ಚನ್]

  ಆಗಿದ್ದಿಷ್ಟೇ, ಇತ್ತೀಚಿಗಷ್ಟೇ ಅಮಿತಾಭ್ ಬಚ್ಚನ್ ಅಭಿನಯದ 'ಪಿಂಕ್' ಸಿನಿಮಾ ತೆರೆ ಕಂಡಿತ್ತು. ಅದರಲ್ಲಿ ಅಮಿತಾಭ್ ಬಚ್ಚನ್ ಅವರ ನಟನೆಯನ್ನು ಮಾಧ್ಯಮದವರು ಭಾರಿ ಪ್ರಶಂಸೆ ಮಾಡಿದ್ದಾರೆ. ಇದನ್ನು ಕಂಡ ನಿವೃತ್ತ ನ್ಯಾಯಮೂರ್ತಿ ಕಾಟ್ಜು ಅವರು ಟೀಕೆ ಮಾಡಿದ್ದಾರೆ. ಮುಂದೆ ಓದಿ....

  ಅಮಿತಾಭ್ ಮೆದುಳಿಗೆ ಕೈ ಹಾಕಿದ ಕಾಟ್ಜು'

  ಅಮಿತಾಭ್ ಮೆದುಳಿಗೆ ಕೈ ಹಾಕಿದ ಕಾಟ್ಜು'

  'ಅಮಿತಾಭ್ ಮೆದುಳಿನಲ್ಲಿ ಏನೂ ಇಲ್ಲ, ಆದರೂ ಬಹಳಷ್ಟು ಪತ್ರಕರ್ತರು ಅಮಿತಾಭ್ ಬಚ್ಚನ್ ಅವರನ್ನು ಹೊಗಳುತ್ತಿರುತ್ತಾರೆ. ಆದ್ದರಿಂದ ಅವರನ್ನು ಹೊಗಳುವ ಪತ್ರಕರ್ತರ ತಲೆಯಲ್ಲೂ ಏನೂ ಇಲ್ಲ, ಅನ್ನೋದು ನನ್ನ ಅಭಿಪ್ರಾಯ' ಅಂತ ನ್ಯಾಯಾಧೀಶರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.[ಮೊಮ್ಮಕ್ಕಳಿಗೆ ಪತ್ರ ಬರೆದ ಬಿಗ್ ಬಿ, ಇದು ಎಲ್ಲಾ ಹೆಣ್ಣುಮಕ್ಕಳಿಗೆ ಅನ್ವಯ]

  ಸಮಾಜಕ್ಕೆ ಬಿಗ್ ಬಿ ಏನು ಮಾಡಿದ್ದಾರೆ?

  ಸಮಾಜಕ್ಕೆ ಬಿಗ್ ಬಿ ಏನು ಮಾಡಿದ್ದಾರೆ?

  'ಅಮಿತಾಭ್ ಬಚ್ಚನ್ ಅವರ ಹೆಚ್ಚಿನ ಸಿನಿಮಾಗಳು ಡ್ರಗ್ಸ್ ಮತ್ತು ಇನ್ನಿತರೇ ಸಮಾಜ ಘಾತುಕ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತದೆ. ಆದ್ದರಿಂದ ಈ ವಿಚಾರಗಳು ಒಂದು ರೀತಿಯಲ್ಲಿ ಯುವ ಜನೆತಯನ್ನು ತಪ್ಪು ದಾರಿ ತುಳಿಯುವಂತೆ ಮಾಡುತ್ತದೆ. ಇದರಿಂದ ಅಮಿತಾಭ್ ಅವರು ಏನೂ ಒಳ್ಳೆ ಕೆಲಸ ಹಾಗೂ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದಂತಾಗುತ್ತದೆ' ಎಂದು ಮಾರ್ಕಂಡೇಯ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

  ಬಿಗ್ ಬಿ ದೇಶಕ್ಕೆ ಏನು ಕೊಟ್ಟಿದ್ದಾರೆ?

  ಬಿಗ್ ಬಿ ದೇಶಕ್ಕೆ ಏನು ಕೊಟ್ಟಿದ್ದಾರೆ?

  'ಅಮಿತಾಭ್ ಅವರು ಉತ್ತಮ ನಟರಾಗಿರಬಹುದು, ಆದರೆ ಅವರು ದೇಶ ಎದುರಿಸುತ್ತಿರುವ ಸಮಸ್ಯೆಗೆ ಎಂದಾದರೂ ಸೈಂಟಿಫಿಕ್ ಐಡಿಯಾ ಕೊಟ್ಟಿದ್ದಾರಾ?, ಎಂದು ಪ್ರಶ್ನೆ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದ ಮಾತ್ರಕ್ಕೆ ಸಾಲೋದಿಲ್ಲ, ದೇಶಕ್ಕಾಗಿ ಏನಾದ್ರೂ ಮಾಡಬೇಕು' ಅಂತ ಕಾಟ್ಜು ಟಾಂಗ್ ಕೊಟ್ಟಿದ್ದಾರೆ.

  ಎಲ್ಲರಂತೆ ಅಮಿತಾಭ್ ಕೂಡ

  ಎಲ್ಲರಂತೆ ಅಮಿತಾಭ್ ಕೂಡ

  ಹಿರಿಯ ನಟರಾದ ರಾಜೇಶ್ ಖನ್ನಾ, ದೇವಾನಂದ, ಶಮ್ಮಿ ಕಪೂರ್ ಅವರ ಸಿನಿಮಾಗಳಂತೆ ಅಮಿತಾಭ್ ಬಚ್ಚನ್ ಅವರ ಸಿನಿಮಾ ಕೂಡ, ಬರೀ ಜನರನ್ನು ಭ್ರಮೆಯಲ್ಲಿ ತೇಲಿಸುತ್ತವೆ. ಜನರು ತೆಪ್ಪಗೆ ಇದ್ದಾರೆ ಅಂತ ಇವರೆಲ್ಲಾ ನಮ್ಮನ್ನು ಆಳುವಂತಾಗಿದೆ' ಎಂದು ಬಹಳ ಕಟುವಾಗಿ ಕಾಟ್ಜು ಅಭಿಪ್ರಾಯ ತಿಳಿಸಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ

  ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ

  ನ್ಯಾಯಾಧೀಶ ಕಾಟ್ಜು ಅವರ ಕಟು ಅಭಿಪ್ರಾಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಬಿಗ್ ಬಿ ಅಮಿತಾಭ್ ಅವರ ಪರ ನಿಂತರೆ, ಇನ್ನೂ ಕೆಲವರು ಕಾಟ್ಜು ಹೇಳಿದ್ದೇ ಸರಿ ಎಂದಿದ್ದಾರೆ. ಅಮಿತಾಭ್ ಅವರು ಓರ್ವ ಕಲಾವಿದ, ಅವರು ಸಮಾಜಕ್ಕೆ ಕೊಡೋದು ಇರಲಿ, ಕಾಟ್ಜು ನೀವೇನು ಕೊಟ್ಟಿದ್ದೀರಿ ಅಂತ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

  ನಟ ಅಮಿತಾಭ್ ಬಚ್ಚನ್ ಕೊಟ್ಟ ಪ್ರತಿಕ್ರಿಯೆ

  ನಟ ಅಮಿತಾಭ್ ಬಚ್ಚನ್ ಕೊಟ್ಟ ಪ್ರತಿಕ್ರಿಯೆ

  ನ್ಯಾಯಾಧೀಶ ಕಾಟ್ಜು ಇಷ್ಟೆಲ್ಲಾ ಬಡಬಡಿಸಿದರೂ, ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಕೇವಲ ಒಂದೇ ಸಾಲಿನ ಉತ್ತರ ನೀಡಿದ್ದಾರೆ. 'ಹೌದು ಅವರು ಹೇಳಿದ್ದು ಅಕ್ಷರಶಃ ಸತ್ಯ, ನನ್ನ ಮೆದುಳಿನಲ್ಲಿ ಏನೇನೂ ಇಲ್ಲ, ಎಲ್ಲವೂ ಖಾಲಿಯಾಗಿದೆ' ಅಂತ ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.[ಐಶ್ವರ್ಯ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಬಿಗ್ ಬಿ ಏನಂದ್ರು?]

  English summary
  The uninitiated, Justice Markandey Katju on September 17 wrote on his social media page, "Bollywood Actor Amitabh Bachchan is a man with nothing in his head, and since most mediapersons praise him, I doubt there is anything in their heads too".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X