»   » ಹಿಂದಿ ಚಿತ್ರ ಫಟ್ಟಕ್ ನಲ್ಲಿ ದಿಗಂತ್ ಫುಲ್ ಬ್ಯುಸಿ

ಹಿಂದಿ ಚಿತ್ರ ಫಟ್ಟಕ್ ನಲ್ಲಿ ದಿಗಂತ್ ಫುಲ್ ಬ್ಯುಸಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡದಲ್ಲಿ 'ಬರ್ಫಿ' ತಿಂದು ಬಾಯಿ ಸಿಹಿ ಮಾಡಿಕೊಂಡಿದ್ದ ಧೂದ್ ಪೇಡ ಅಲಿಯಾಸ್ ದಿಗಂತ್ ಅವರ ಬಾಲಿವುಡ್ ಕನಸು ಕೊನೆಗೂ ನನಸಾಗಿದೆ. ''ದಿಗಂತ'ದಷ್ಟು ಆಸೆ ಇಟ್ಟು ಕೊಂಡು ಮುಂಬೈಗೆ ಹಾರಿದ್ದ ತೀರ್ಥಹಳ್ಳಿ ಹುಡುಗನ ಹಿಂದಿ ಚಿತ್ರದ ಶೂಟಿಂಗ್ ಆರಂಭಗೊಂಡಿದೆ. ತಮಿಳಿನಲ್ಲಿ ಭಾರಿ ಸದ್ದು ಮಾಡಿದ್ದ ಕಡಿಮೆ ಬಜೆಟ್ಟಿನ ಚಿತ್ರ ಚೆನ್ನೈ 600028 ರಿಮೇಕ್ ಎನ್ನಲಾದ ಈ ಹಿಂದಿ ಚಿತ್ರಕ್ಕೆ ಫಟ್ಟಕ್ ಎಂದು ಹೆಸರಿಡಲಾಗಿದೆ.

ದಿಗಂತ್ ಜತೆಗೆ ನಟ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ ಕಪೂರ್ ನಟಿಸುತ್ತಿದ್ದಾರೆ.'ಡೇವಿಡ್' ಚಿತ್ರ ಖ್ಯಾತಿಯ ವಿಜಯ್ ನಂಬಿಯಾರ್ ಅವರ ಸಹ ನಿರ್ಮಾಣದ ಈ ಚಿತ್ರವನ್ನು ಅವರ ಸಹಾಯಕ ಯಜಾದ್ ನಿರ್ದೇಶಿಸುತ್ತಿದ್ದಾರೆ. ಸಿದ್ಧಾಂತ್ ಮೂಲ ಚಿತ್ರದಲ್ಲಿದ್ದ ಶಿವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ದಿಗಂತ್ ಅವರು ಜೈ ಪಾತ್ರಧಾರಿಯಾಗಿದ್ದಾರೆ. ಫಟಕ್ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಭರದಿಂದ ಸಾಗಿದೆ. ಇತ್ತೀಚೆಗೆ ಶೂಟಿಂಗ್ ವೇಳೆ ಸಿದ್ದಾಂತ್ ಏಣಿಯಿಂದ ಬಿದ್ದು ಗಾಯ ಮಾಡಿಕೊಂಡ ಘಟನೆ ಕೂಡಾ ನಡೆದಿತ್ತು. ಈ ಬಗ್ಗೆ ಸಿದ್ದಾಂತ್ ಟ್ವೀಟ್ ಮಾಡಿದ್ದರು.

ಈ ನಡುವೆ ದಿನಕರ್ ತೂಗುದೀಪ ನಿರ್ಮಾಣದ ಒಂದೂರಲ್ಲಿ ಒಬ್ಬ ರಾಜ ಚಿತ್ರದ ಕಥೆ ಏನಾಯ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ದಿಗಂತ್ ಹಾಗೂ ರಚಿತಾ ರಾಮ್ ಅವರ ಪ್ರಧಾನ ಭೂಮಿಕೆಯಲ್ಲಿ ಈ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ಹಬ್ಬಿತ್ತು. ದಿಗಂತ್ ಈಗ ಮುಂಬೈನಲ್ಲಿದ್ದು ಹಿಂದಿ ಚಿತ್ರ ಶೂಟಿಂಗ್ ಮುಗಿಯುವ ತನಕ ಬೆಂಗಳೂರಿಗೆ ಬರುವುದು ಕಷ್ಟ.

Doodh Peda Diganth hindi film Fattack

ಕಳೆದ ಜೂನ್ ನಲ್ಲಿ ಈ ಚಿತ್ರದ ಬಗ್ಗೆ ಮಾತುಕತೆ ನಡೆದಿತ್ತು. ಆಗಸ್ಟ್ ನಲ್ಲಿ ಶೂಟಿಂಗ್ ಆರಂಭವಾಗುತ್ತೆ ಎನ್ನಲಾಗಿತ್ತು. ನವೆಂಬರ್ ಆದರೂ ಸುದ್ದಿ ಇಲ್ಲ. ಚಿತ್ರಕಥೆಯೇ ಇನ್ನೂ ರೆಡಿಯಾಗಿಲ್ಲ ಎಂಬ ಸುದ್ದಿ ಇದೆ. ಈ ಬಗ್ಗೆ ದಿನಕರ್ ಅವರು ಏನೂ ಹೇಳಿಲ್ಲ.

ದಿಗಂತ್ ಕಹಾನಿ:1920 ಹೆಸರಿನ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಿತ್ತು. ಆಗಸ್ಟ್ ನಲ್ಲಿ ಶೂಟಿಂಗ್ ಶುರು ಎನ್ನಲಾಗಿತ್ತು. ವಿಕ್ರಮ್ ಭಟ್ ಅವರ ನಿರ್ಮಾಣದ ಈ ಚಿತ್ರ ಈ ಹಿಂದೆ ಹಿಟ್ ಆದ 1920 ಹೆಸರಿನ ಚಿತ್ರದ ಎರಡನೇ ಭಾಗವಾಗಿತ್ತು. ಆದರೆ, ಶೂಟಿಂಗ್ ನಿಂತಿದೆ. ಯಾವಾಗ ಮತ್ತೆ ಆರಂಭವೋ ಗೊತ್ತಿಲ್ಲ. ದಿಗಂತ್ ಅಂತೂ ಚಿತ್ರದಿಂದ ಹೊರ ಬಂದಿದ್ದರು.

ಈ ಮಧ್ಯೆ ದಿಗಂತ್ ಅವರು ದಿನಕರ್ ತೂಗುದೀಪ ಅವರ ಹೊಸ ಚಿತ್ರ ಒಪ್ಪಿಕೊಂಡ ಸುದ್ದಿ ಹೊರಬಿದ್ದಿತು. 1920 ಯಾಕೆ ವಿಳಂಬವಾಯಿತೋ ನನಗೆ ಗೊತ್ತಿಲ್ಲ. ನಾನು ತುಂಬಾ ತಿಂಗಳು ಕಾದೆ. ಆದರೆ, ದಿನಕರ್ ತೂಗುದೀಪ ಅವರ ಚಿತ್ರಕ್ಕೆ ಈಗಾಗಲೇ ಸಹಿ ಹಾಕಿದ್ದೇನೆ. ಹಾಗಾಗಿ ನಾನು ಮತ್ತೆ 1920 ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ದಿಗಂತ್ ಕೂಡಾ ಸ್ಪಷ್ಟಪಡಿಸಿದ್ದರು. ಬಾಲಿವುಡ್ ಕನಸು ನನಸು ಮಾಡಿಕೊಳ್ಳಲು ಹಲವು ಕನ್ನಡ ಚಿತ್ರಗಳ ಆಫರ್ ಬಿಟ್ಟಿದ್ದ ದಿಗಂತ್ ಸದ್ಯಕ್ಕಂತೂ ಹಿಂದಿ ಚಿತ್ರ ಬಿಟ್ಟು ಇತ್ತ ಬರುವುದು ಡೌಟ್.

English summary
Doodh Peda Diganth has started shooting for his Hindi film. The shooting for the film titled Fattack is underway in Mumbai. The director is Yazad and the film is being produced by Bejoy Nambiyar productions. Meanwhile, No progress in Onduralli Obba Raja Dinakar Toogudeepa production movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada