For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಇರ್ಫಾನ್ ಖಾನ್‌ಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ ದಾಖಲು

  |

  ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ನಟ ಇರ್ಫಾನ್ ಖಾನ್ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಇರ್ಫಾನ್ ಖಾನ್ 'ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿದ್ದಾರೆ | Filmibeat Kannada

  ಕೆಲವು ದಿನಗಳ ಹಿಂದಷ್ಟೇ ಇರ್ಫಾನ್ ಖಾನ್, ಜೈಪುರದಲ್ಲಿದ್ದ ತಮ್ಮ ತಾಯಿ ಸಯೀದಾ ಬೇಗಮ್ ಅವರನ್ನು ಕಳೆದುಕೊಂಡಿದ್ದರು. ಲಾಕ್‌ಡೌನ್ ಕಾರಣದಿಂದ ಬೇರೆ ಸ್ಥಳದಲ್ಲಿರುವ ಇರ್ಫಾನ್ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಡಿಯೋ ಕಾಲ್ ಮುಖಾಂತರವೇ ಅವರು ತಾಯಿಗೆ ಅಂತಿಮ ನಮನ ಸಲ್ಲಿಸಿದ್ದರು.

  ಇರ್ಫಾನ್ ಖಾನ್‌ ತಾಯಿ ವಿಧಿವಶ: ಅಂತಿಮ ದರ್ಶನವಿಲ್ಲ!ಇರ್ಫಾನ್ ಖಾನ್‌ ತಾಯಿ ವಿಧಿವಶ: ಅಂತಿಮ ದರ್ಶನವಿಲ್ಲ!

  ಸುಮಾರು ಎರಡು ವರ್ಷಗಳ ಹಿಂದೆ ಇರ್ಫಾನ್ ತಮಗೆ ಅಪರೂಪದ ಕಾಯಿಲೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಅದರ ಚಿಕಿತ್ಸೆಗಾಗಿ ಸುಮಾರು ಒಂದು ವರ್ಷ ಚಿತ್ರರಂಗದಿಂದ ದೂರವಿದ್ದರು.

  ಪ್ರಚಾರದಿಂದ ದೂರ ಇದ್ದರು

  ಪ್ರಚಾರದಿಂದ ದೂರ ಇದ್ದರು

  ಆದರೆ ಇರ್ಫಾನ್ ಅವರ ಆರೋಗ್ಯ ಇನ್ನೂ ಸುಧಾರಿಸಿರಲಿಲ್ಲ. ಮಾರ್ಚ್‌ನಲ್ಲಿ ಬಿಡುಗಡೆಯಾದ 'ಅಂಗ್ರೇಜಿ ಮೀಡಿಯಂ' ಚಿತ್ರದ ಪ್ರಚಾರ ಕಾರ್ಯಗಳಿಂದ ಅವರು ದೂರವೇ ಉಳಿಯುವಂತೆ ಆಗಿತ್ತು. ಇಂಗ್ಲೆಂಡ್‌ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆಯೂ ಇರ್ಫಾನ್ ಚಿಕಿತ್ಸೆಗೆ ಒಳಗಾಗುತ್ತಿದ್ದರು.

  ಐಸಿಯುದಲ್ಲಿ ಇರ್ಫಾನ್

  ಐಸಿಯುದಲ್ಲಿ ಇರ್ಫಾನ್

  ಈಗ ಇರ್ಫಾನ್ ಅವರ ಆರೋಗ್ಯದಲ್ಲಿ ತೀವ್ರ ಏರಿಳಿತ ಉಂಟಾಗಿದ್ದು, ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬಾಲಿವುಡ್‌ನ ಕಲಾವಿದರು, ನಿರ್ದೇಶಕರು ಹಾರೈಸಿದ್ದಾರೆ.

  ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''

  ಕಳೆದ ವಾರವೇ ದಾಖಲು

  ಕಳೆದ ವಾರವೇ ದಾಖಲು

  ಮುಂಬೈನಲ್ಲಿ ಪತ್ನಿ ಸುತಪಾ ಸಿಕ್ದಾರ್ ಹಾಗೂ ಮಕ್ಕಳಾದ ಬಾಬಿಲ್ ಮತ್ತು ಅಯಾನ್ ಜತೆ ವಾಸಿಸುತ್ತಿರುವ 54 ವರ್ಷದ ಇರ್ಫಾನ್, ಅವರನ್ನು ಕಳೆದ ವಾರವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಕಾರಣ ಅವರ ತಪಾಸಣೆ ಸಾಧ್ಯವಾಗಿರಲಿಲ್ಲ ಎಂದು ವರದಿಯಾಗಿದೆ. ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಹೊರಬಂದಿಲ್ಲ.

  ಓಟಿಟಿಯಲ್ಲಿ ಸಿನಿಮಾ

  ಓಟಿಟಿಯಲ್ಲಿ ಸಿನಿಮಾ

  'ಅಂಗ್ರೇಜಿ ಮೀಡಿಯಂ' ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನ ಮಾತನಾಡಿದ್ದ ಇರ್ಫಾನ್, ಅನಾರೋಗ್ಯದ ಕಾರಣದಿಂದ ತಾವು ಈ ಚಿತ್ರದ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೊರೊನಾ ವೈರಸ್ ಕಾರಣದಿಂದ ಚಿತ್ರಪ್ರದರ್ಶನ ನಿಂತು ಹೋಗಿತ್ತು. ಈಗ ಸಿನಿಮಾ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ.

  English summary
  Bollywood actor Irrfan Khan has been admitted to Mumbai's Kokilaben Dhirubhai Ambani hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X