For Quick Alerts
  ALLOW NOTIFICATIONS  
  For Daily Alerts

  ರಣಬೀರ್ ಕಪೂರ್ ರಿಜೆಕ್ಟ್ ಮಾಡಿದ ಈ 6 ಸಿನಿಮಾಗಳು ಸೂಪರ್ ಹಿಟ್ ಆಗಿವೆ

  |

  ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ ಕಳೆದ ಕೆಲವು ವರ್ಷಗಳಿಂದ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ವಯಕ್ತಿಕ ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ರಣಬೀರ್ ತಂದೆಯನ್ನು ಕಳೆದುಕೊಂಡಿದ್ದಾರೆ. ಅನೇಕ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಣಬೀರ್ ತಂದೆ ರಿಷಿ ಕಪೂರ್ ಇಹಲೋಕ ತ್ಯಜಿಸಿಸಿದ್ದಾರೆ.

  ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Filmibeat Kannada

  ಸದ್ಯ ರಣಬೀರ್ ಮದುವೆ ವಿಚಾರ ಸಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಾಲಿವುಡ್ ನಟಿ ಅಲಿಯಾ ಭಟ್ ಜೊತೆ ರಣಬೀರ್ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಸಿನಿಮಾ ವಿಚಾರಕ್ಕೆ ಬಂದರೆ ರಣಬೀರ್ ಕೊನೆಯದಾಗಿ ಸಂಜು ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ರಣಬೀರ್ ಗೆ ಸಂಜು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ.

  ರಿಶಿ ಕಪೂರ್ ಅಂತಿಮ ಸಂಸ್ಕಾರದಲ್ಲಿ ಮಾನವೀಯತೆ ಮೆರೆದರೂ ಟ್ರೋಲ್ ಆದ ಆಲಿಯಾ ಭಟ್ರಿಶಿ ಕಪೂರ್ ಅಂತಿಮ ಸಂಸ್ಕಾರದಲ್ಲಿ ಮಾನವೀಯತೆ ಮೆರೆದರೂ ಟ್ರೋಲ್ ಆದ ಆಲಿಯಾ ಭಟ್

  ಸಂಜು ಸಿನಿಮಾಗೂ ಮೊದಲು ರಣಬೀರ್ ಅಭಿನಯದ ಸಾಕಷ್ಟು ಸಿನಿಮಾಗಳು ನೆಲಕಚ್ಚಿವೆ. ಈ ಸಮಯದಲ್ಲಿ ರಣಬೀರ್ ರಿಜೆಕ್ಟ್ ಮಾಡಿದ ಸಿನಿಮಾಗಳು ಬಾಲಿವುಡ್ ನಲ್ಲಿ ಸೂಪರ್ ಆಗಿವೆ. ರಣಬೀರ್ ರಿಜೆಕ್ಟ್ ಮಾಡಿರುವ ಸುಮಾರು 6 ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿವೆ. ಯಾವ ಸಿನಿಮಾಗಳು? ರಣಬೀರ್ ರಿಜೆಕ್ಟ ಮಾಡಿದ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಯಾರು? ಮುಂದೆ ಓದಿ..

  ದಿಲ್ ಧಡಕ್ ನೇ ದೋ

  ದಿಲ್ ಧಡಕ್ ನೇ ದೋ

  2015ರಲ್ಲಿ ರಿಲೀಸ್ ಆದ ಝೋಯ ಅಕ್ತಾರ್ ನಿರ್ದೇಶನದ ದಿಲ್ ಧಡಕ್ ನೇ ದೋ ಸಿನಿಮಾಗೂ ರಣಬೀರ್ ಕಪೂರ್ ಗೆ ಮೊದಲು ಆಫರ್ ಮಾಡಲಾಗಿತ್ತು. ಆದರೆ ಈ ಸಿನಿಮಾವನ್ನು ಸಹ ರಣಬೀರ್ ಕಪೂರ್ ರಿಜೆಕ್ಟ್ ಮಾಡಿದ್ದಾರೆ. ರಣಬೀರ್ ನಿರಾಕರಿಸಿದ ಜಾಗದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ಅನಿಲ್ ಕಪೂರ್, ಸೈಫ್ ಅಲಿ ಖಾನ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ಫರಾನ್ ಅಖ್ತಾರ್ ಕಾಣಿಸಿಕೊಂಡಿದ್ದಾರೆ.

  2 ಸ್ಟೇಟ್ಸ್

  2 ಸ್ಟೇಟ್ಸ್

  2014ರಲ್ಲಿ ರಿಲೀಸ್ ಆದ 2 ಸ್ಟೇಟ್ಸ್ ಸಿನಿಮಾ ಸಹ ರಣಬೀರ್ ಕಪೂರ್ ಮಾಡಬೇಕಿತ್ತು. ಅಭಿಷೇಕ್ ವರ್ಮ ನಿರ್ದೇಶನದಲ್ಲಿ ಮೂಡಿಬಂದ 2 ಸ್ಟೇಟ್ಸ್ ಸಿನಿಮಾ ಮೊದಲು ಶಾರುಖ್ ಖಾನ್ ಗೆ ಆಫರ್ ಹೋಗಿತ್ತು. ಈ ಸಿನಿಮಾ ಮಾಡಲು ಶಾರುಖ್ ಸಹ ತಯಾರಾಗಿದ್ದರು, ಆದರೆ ದಿಢೀರನೆ ಸಿನಿಮಾದಿಂದ ಹೊರಬಂದರು. ಆ ನಂತರ ಈ ಸಿನಿಮಾ ರಣಬೀರ್ ಕಪೂರ್ ಬಳಿ ಹೋಗಿತ್ತು. ಆದರೆ ರಣಬೀರ್ ಸಹ ಈ ಸಿನಿಮಾ ರೆಜೆಕ್ಟ್ ಮಾಡುತ್ತಾರೆ. ಆ ನಂತರ ಅರ್ಜುನ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯಿಸಿದ್ದಾರೆ.

  ಪತಿ ರಣ್ವೀರ್ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದಾರೆ ದೀಪಿಕಾ ಪಡುಕೋಣೆಪತಿ ರಣ್ವೀರ್ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದಾರೆ ದೀಪಿಕಾ ಪಡುಕೋಣೆ

  ಜಿಂದಗಿ ನಾ ಮಿಲೆಗಿ ದೋಬರಾ

  ಜಿಂದಗಿ ನಾ ಮಿಲೆಗಿ ದೋಬರಾ

  ಜಿಂದಗಿ ನಾ ಮಿಲೆಗಿ ದೋಬಾರಾ, ಜೋಯಾ ಅಕ್ತಾರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. 2011ರಲ್ಲಿ ರಿಲೀಸ್ ಆದ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ. ಆದರೆ ಹೃತಿಕ್ ಗೂ ಮೊದಲೆ ಈ ಸಿನಿಮಾದ ಕಥೆಯನ್ನು ರಣಬೀರ್ ಕಪೂರ್ ಗೆ ಹೇಳಲಾಗಿತ್ತಂತೆ ಆದರೆ, ರಣಬೀರ್ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.

  ಡೆಲ್ಲಿ ಬೆಲ್ಲಿ

  ಡೆಲ್ಲಿ ಬೆಲ್ಲಿ

  2011ರಲ್ಲಿ ರಿಲೀಸ್ ಆದ ಡೆಲ್ಲಿ ಬೆಲ್ಲಿ ಸಿನಿಮಾ ಅಭಿನಯ್ ಡಿಯೋ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ಆಮೀರ್ ಖಾನ್ ನಿರ್ಮಾಣದ ಈ ಸಿನಿಮಾ ಮೊದಲು ರಣಬೀರ್ ಕಪೂರ್ ಬಳಿ ಹೋಗಿತ್ತಂತೆ. ಆದರೆ ರಣಬೀರ್ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ. ನಂತರ ಇಮ್ರಾನ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

  ಬ್ಯಾಂಡ್ ಬಾಜಾ ಬಾರಾತ್

  ಬ್ಯಾಂಡ್ ಬಾಜಾ ಬಾರಾತ್

  ಬ್ಯಾಂಡ್ ಬಾಜಾ ಬಾರಾತ್, ರಣ್ವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಸಿನಿಮಾ. ರಣ್ವೀರ್ ಸಿಂಗ್ ಮೊದಲ ಸಿನಿಮಾವಿದು. ಮನೀಶ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಸಹ ಮೊದಲು ರಣಬೀರ್ ಕಪೂರ್ ಬಳಿ ಹೋಗಿತ್ತು. ಆದರೆ ಕಥೆ ಕೇಳಿ ಇಂಪ್ರೆಸ್ ಆಗದ ರಣಬೀರ್ ಕಪೂರ್ ಸಿನಿಮಾ ತರಸ್ಕರಿಸಿದ್ದಾರೆ. ಈ ಸಿನಿಮಾ ಮೂಲಕವೆ ರಣವೀರ್ ಬಾಲಿವುಡ್ ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

  English summary
  Actor Ranbir Kapoor rejected movies are superhit in Bollywood. Gully boy, 2 states, Delhi Belly and more movies are rejected by Ranbir Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X