For Quick Alerts
  ALLOW NOTIFICATIONS  
  For Daily Alerts

  ಉಸಿರಾಟದ ಸಮಸ್ಯೆ, ಸಂಜಯ್ ದತ್‌ ಆಸ್ಪತ್ರೆಗೆ ದಾಖಲು

  |

  ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಉಸಿರಾಟದ ಸಮಸ್ಯೆ ಎದುರಿಸಿದ್ದು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಸಂಜಯ್ ದತ್ ಅವರಿಗೆ ಕೊರೊನಾ ಸೋಂಕು ತಗುಲಿರಬಹುದೆಂಬ ಅನುಮಾನದ ಮೇಲೆ ಕೋವಿಡ್ ರ್ಯಾಪಿಡ್ ಟೆಸ್ಟ್ ನಡೆಸಲಾಗಿದ್ದು, ಕೊರೊನಾ ನೆಗೆಟಿವ್ ವರದಿ ಬಂದಿದೆ.

  ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್

  ಶನಿವಾರ ಸಂಜೆ ವೇಳೆಗೆ ಸಂಜಯ್ ದತ್‌ಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ಆರೋಗ್ಯದಿಂದಿದ್ದಾರೆ ಎನ್ನಲಾಗಿದೆ.

  ಮಾಹಿತಿ ನೀಡಿದ ಸಂಜಯ್ ದತ್ ವೈದ್ಯರು

  ಮಾಹಿತಿ ನೀಡಿದ ಸಂಜಯ್ ದತ್ ವೈದ್ಯರು

  ಸಂಜಯ್ ದತ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಜಲಿಲ್ ಪರ್ಕಾರ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಸಂಜಯ್ ದತ್ ಗೆ ಇನ್ನೂ ಕೆಲವು ವೈದ್ಯಕೀಯ ಪರೀಕ್ಷೆಗಳು ಮಾಡಬೇಕಿದೆ. ಅವರ ದೇಹದಲ್ಲಿ ಆಮ್ಲಜನಕ ಪ್ರಮಾಣ ಏಕೆ ಕಡಿಮೆ ಆಯಿತು ಎಂಬುದನ್ನು ಪತ್ತೆ ಮಾಡಬೇಕಿದೆ' ಎಂದಿದ್ದಾರೆ.

  ಸಂಜಯ್ ದತ್ ಸಹೋದರಿ ಪ್ರಿಯಾ ದತ್ ನೀಡಿದ ಮಾಹಿತಿ

  ಸಂಜಯ್ ದತ್ ಸಹೋದರಿ ಪ್ರಿಯಾ ದತ್ ನೀಡಿದ ಮಾಹಿತಿ

  ಸಂಜಯ್ ದತ್ ಸಹೋದರಿ ಪ್ರಿಯಾ ದತ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, 'ಇನ್ನೂ ಕೆಲವು ದಿನಗಳ ಕಾಲ ಸಂಜಯ್ ದತ್ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ. ಎಲ್ಲಾ ಅವಶ್ಯಕತ ಪರೀಕ್ಷೆಗಳಿಗೂ ಅವರು ಒಳಗಾಗಲಿದ್ದಾರೆ. ಪ್ರಸ್ತುತ ಕೊರೊನಾ ವರದಿ ನೆಗೆಟಿವ್ ಬಂದಿದೆ' ಎಂದು ಹೇಳಿದ್ದಾರೆ.

  ಕೋವಿಡ್ ಗೆದ್ದ ಸಂಭ್ರಮದಲ್ಲಿ ನಟ ಅಭಿಷೇಕ್ ಬಚ್ಚನ್

  ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್

  ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್

  ತಮ್ಮ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ದತ್, 'ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ನನ್ನನ್ನು ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ. ನನ್ನ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಲೀಲಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಇನ್ನಿತರೆ ಸಿಬ್ಬಂದಿ ನೆರವಿನಿಂದ ಇನ್ನೆರಡು-ಮೂರು ದಿನಗಳಲ್ಲಿ ಗುಣವಾಗಿ ಮನೆಗೆ ಮರಳುತ್ತೇನೆ' ಎಂದಿದ್ದಾರೆ.

  ಅಮಿತಾಬ್ ಕುಟುಂಬ ಕೊರೊನಾ ಗೆ ತುತ್ತಾಗಿತ್ತು

  ಅಮಿತಾಬ್ ಕುಟುಂಬ ಕೊರೊನಾ ಗೆ ತುತ್ತಾಗಿತ್ತು

  ಬಾಲಿವುಡ್‌ನಲ್ಲಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಮಿತಾಬ್ ಬಚ್ಚನ್ ಕುಟುಂಬ ಕೊರೊನಾ ವೈರಸ್‌ಗೆ ತುತ್ತಾಗಿತ್ತು. ಐಶ್ವರ್ಯಾ ರೈ, ಆರಾಧ್ಯ, ಅಮಿತಾಬ್ ಬಚ್ಚನ್ , ಅಭಿಷೇಕ್ ಬಚ್ಚನ್ ಕೊರೊನಾ ವೈರಸ್‌ಗೆ ತುತ್ತಾಗಿ ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ.

  ಆಸ್ಪತ್ರೆಯಲ್ಲಿ ಕುಳಿತು ಕಣ್ಣೀರಿಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್

  English summary
  Bollywood actor Sanjay Dutt suffers from breathlessness admitted to Lilavati hospital Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X