For Quick Alerts
  ALLOW NOTIFICATIONS  
  For Daily Alerts

  'ನನಗಾಗಿ ಪ್ರಾರ್ಥಿಸಿ' ಎನ್ನುತ ಆಸ್ಪತ್ರೆಗೆ ತೆರಳಿದ ಸಂಜಯ್ ದತ್: ಪತಿಯ ಆರೋಗ್ಯದ ಬಗ್ಗೆ ಮಾನ್ಯತಾ ಮಾಹಿತಿ

  |

  ನಟ ಸಂಜಯ್ ದತ್ 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಸಂಜಯ್ ದತ್ ಗೆ ಮೊದಲ ಹಂತದ ಚಿಕಿತ್ಸೆ ಪ್ರಾರಂಭವಾಗಿದ್ದು ಆಸ್ಪತ್ರೆಗೆ ತೆರಳುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಸಂಜಯ್ ದತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಸಂಜಯ್ ದತ್ ಮನೆಯಿಂದ ಆಸ್ಪತ್ರೆಗೆ ತೆರಳುವಾಗ ಕ್ಯಾಮರಾ ಮುಂದೆ 'ನನಗಾಗಿ ಪ್ರಾರ್ಥಿಸಿ' ಎಂದು ಹೇಳುತ್ತ ಆಸ್ಪತ್ರೆಯ ಕಡೆ ಹೊರಟಿದ್ದಾರೆ. ಸಂಜುಬಾಬಾ ಜೊತೆಯಲ್ಲಿ ಪತ್ನಿ ಮಾನ್ಯತಾ ದತ್, ಸಹೋದರಿ ಪ್ರಿಯಾ ಸೇರಿದ್ದಂತೆ ಕುಟುಂಬದವರು ಇದ್ದಾರೆ.

  ಕ್ಯಾನ್ಸರ್ ಪೀಡಿತ ಸಂಜಯ್ ದತ್‌ಗೆ ಆತ್ಯಾಪ್ತ ಗೆಳೆಯನ ಭಾವುಕ ಪತ್ರ

  ಪತ್ನಿ ಮಾನ್ಯತಾ ದತ್ ಕಳೆದ ಕೆಲವು ತಿಂಗಳಿಂದ ದುಬೈನಲ್ಲಿದ್ದರು. ಕೊರೊನಾ ಲಾಕ್ ಡೌನ್ ಆದ ಬಳಿಕ ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗದೆ ಇಬ್ಬರು ಮಕ್ಕಳ ಜೊತೆ ದುಬೈನಲ್ಲಿಯೇ ನೆಲೆಸಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಮುಂಬೈ ಆಗಮಿಸಿದ್ದು, ಕ್ವಾರಂಟೈನ್ ಸಮಯ ಕಳೆದು ಈಗ ಪತಿಯ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.

  ಸಂಜಯ್ ದತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಪತ್ನಿ ಮಾನ್ಯತಾ ದತ್ "ಸಂಜಯ್ ದತ್ ಪ್ರಾಥಮಿಕ ಚಿಕಿತ್ಸೆಯನ್ನು ಮುಂಬೈನಲ್ಲಿ ಪೂರ್ಣಗೊಳಿಸಲಿದ್ದಾರೆ. ಕೊರೊನಾ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ಯೋಜನೆ ನಿರ್ಧಾರವಾಗಿದೆ. ಆನಾರೋಗ್ಯದ ಬಗ್ಗೆ ವದಂತಿ ಹಬ್ಬಿಸದಂತೆ ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ವೈದ್ಯರು ಅವರ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಸಂಜಯ್ ದತ್ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡುತ್ತೇವೆ" ಎಂದು ಹೇಳಿದ್ದಾರೆ.

  ಸಂಜಯ್ ದತ್ ಬೇಗ ಗುಣಮುಕರಾಗುವಂತೆ ಅಭಿಮಾನಿಗಳು ಚಿತ್ರರಂಗದ ಗಣ್ಯರು ಸಹ ಸಂಜಯ್ ದತ್ ಶೀಘ್ರದಲ್ಲಿ ಗುಣಮುಕರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಸಂಜಯ್ ದತ್ ಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಡಕ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿನಿಮಾ ಸದ್ಯದಲ್ಲಿಯೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಇನ್ನೂ ಕೆಜಿಎಫ್-2 ಭುಜ್, ಶಂಶೇರಾ, ಪೃಥ್ವಿರಾಜ್ ಸೇರಿದ್ದಂತೆ ಸಾಕಷ್ಟು ಸಿನಿಮಾಗಳು ಸಂಜಯ್ ದತ್ ಕೈಯಲ್ಲಿವೆ.

  English summary
  Bollywood Actor Sanjay Dutt is receiving preliminary treatment at Mumbai hospital. Sanjay dutt says pray for me while leaving for hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X