For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಸಿಲುಕಿರುವ ಸಂಜಯ್ ಕುಟುಂಬ: ಜೈಲುವಾಸದ ದಿನಗಳನ್ನು ನೆನಪಿಸಿಕೊಂಡ ದತ್

  |

  ಕಿಲ್ಲರ್ ಕೊರೊನಾ ವೈರಸ್ ಗೆ ಇಡೀ ವಿಶ್ವವೆ ಆಂತಕದಲ್ಲಿದೆ. ಜನರು ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ವಿದೇಶದಲ್ಲಿ ಇರುವವರು, ಕುಟುಂಬದಿಂದ ದೂರ ಉಳಿದವರು ದೂರದಲ್ಲಿಯೇ ಇರುವಂತ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಕುಟುಂಬ ಸಹ ವಿದೇಶದಲ್ಲಿಯೆ ಸಿಲುಕಿಕೊಂಡಿದೆ.

  ಹೌದು, ಲಾಕ್ ಡೌನ್ ಗೂ ಮುನ್ನ ದುಬೈಗೆ ತೆರಳಿದ್ದ ಸಂಜಯ್ ದತ್ ಪತ್ನಿ ಮತ್ತು ಮಕ್ಕಳು ಈಗ ಅಲ್ಲಿಯೆ ಉಳಿದುಕೊಂಡಿದ್ದಾರೆ. ಇತ್ತ ಸಂಜಯ್ ದತ್ ಒಬ್ಬೊಂಟಿಯಾಗಿದ್ದು, ಪತ್ನಿ ಮತ್ತು ಮಕ್ಕಳ ಚಿಂತೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಂಜಯ್ ದತ್ ಲಾಕ್ ಡೌನ್ ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

  ದುಬೈನಲ್ಲಿ ಪತ್ನಿ-ಮಕ್ಕಳು, ಮುಂಬೈನಲ್ಲಿ ಸಂಜಯ್ ದತ್

  ದುಬೈನಲ್ಲಿ ಪತ್ನಿ-ಮಕ್ಕಳು, ಮುಂಬೈನಲ್ಲಿ ಸಂಜಯ್ ದತ್

  ಸಂಜಯ್ ದತ್ ಪತ್ನಿ ಮಾನ್ಯತಾ ಮತ್ತು ಮಕ್ಕಳಾದ ಇಕ್ರಾ ಮತ್ತು ಶಹ್ರಾನ್ ದುಬೈನಲ್ಲಿಯೆ ಸಿಲುಕಿಕೊಂಡಿದ್ದಾರೆ. ಪತ್ನಿ ಮತ್ತು ಮಕ್ಕಳ ಸುರಕ್ಷತೆಯ ಚಿಂತೆಯಲ್ಲಿಯೇ ಸಂಜಯ್ ದತ್ ಲಾಕ್ ಡೌನ್ ಸಮಯ ಕಳೆಯುತ್ತಿದ್ದಾರೆ. ಸದ್ಯ ಮುಂಬೈನ ತಮ್ಮ ನಿವಾಸದಲ್ಲಿರುವ ಸಂಜಯ್ ದತ್ ಏಕಾಂಗಿಯಾಗಿದ್ದಾರೆ. ಕುಟುಂಬದಿಂದ ದೂರವಿದ್ದು ಏಕಾಂಗಿಯಾಗಿ ಸಮಯ ಕಳೆಯುವುದು ತುಂಬ ಕಷ್ಟವಾಗುತ್ತಿದೆಯಂತೆ.

  ಸಂಜಯ್ ದತ್ ಹೇಳಿದ್ದೇನು?

  ಸಂಜಯ್ ದತ್ ಹೇಳಿದ್ದೇನು?

  "ನನ್ನ ಕುಟುಂಬದೊಂದಿಗೆ ವಾಸ್ತವವಾಗಿ ಸಂಪರ್ಕ ಸಾಧಿಸಲು ನಾನು ಸಾಕಷ್ಟು ಸಮಯನ್ನು ಕಳೆಯುತ್ತಿದ್ದೇನೆ, ಇದು ನನ್ನ ಜೀವನದ ಪ್ರಮುಖ ವಿಷಯವಾಗಿದೆ. ಲಾಕ್ ಡೌನ್ ಘೋಷಿಸಿದಾಗ ದುರದೃಷ್ಟವಶಾತ್ ಮಾನ್ಯತಾ ಮತ್ತು ಮಕ್ಕಳು ದುಬೈನಲ್ಲಿದ್ದರು. ಈಗ ಅಲ್ಲಿಯೆ ಇರುವಂತಾಗಿದೆ" ಎಂದು ಹೇಳಿದ್ದಾರೆ.

  ಜೈಲುವಾಸ ನೆನಪಿಸಿಕೊಂಡ ಸಂಜಯ್

  ಜೈಲುವಾಸ ನೆನಪಿಸಿಕೊಂಡ ಸಂಜಯ್

  ಇದೆ ಸಮಯದಲ್ಲಿ ಸಂಜಯ್ ಈ ಹಿಂದೆ ಕಳೆದ ಜೈಲುವಾಸದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಈ ಹಿಂದೆ ನಾನು ನನ್ನ ಜೀವನದ ಅವಧಿಗಳನ್ನು ಲಾಕ್ ಡೌನ್ ನಲ್ಲಿ ಕಳೆದಿದ್ದೇನೆ. ಆಗ ಮತ್ತು ಈಗಲೂ ಸಹ ನನ್ನೊಂದಿಗೆ ಉಳಿಯುವ ಒಂದು ಆಲೋಚನೆಯಂದರೆ ನಾನು ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುವುದು" ಎಂದು ಹೇಳಿದ್ದಾರೆ.

  ಈ ಸಮಯ ನಮಗೆ ತುಂಬ ಕಲಿಸುತ್ತೆ

  ಈ ಸಮಯ ನಮಗೆ ತುಂಬ ಕಲಿಸುತ್ತೆ

  "ಇಂದಿನ ತಂತ್ರಜ್ಞಾನಕ್ಕೆ ಧನ್ಯವಾದಗಳು. ಅನೇಕ ಬಾರಿ ಅವರನ್ನು ನೋಡಬಹುದು ಮತ್ತು ಮಾತನಾಡಬಹುದು. ಆದರೂ ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಇಂತಹ ಸಮಯ ಪ್ರೀತಿ ಪಾತ್ರರ ಜೊತೆ ಕಳೆದ ಕ್ಷಣಗಳ ಮೌಲ್ಯವನ್ನು ಜನರಿಗೆ ಕಲಿಸುತ್ತೆ" ಎಂದಿದ್ದಾರೆ. ಸದ್ಯ ಸಂಜಯ್ ಪತ್ನಿ ಮತ್ತು ಮಕ್ಕಳು ಸುರಕ್ಷಿತರಾಗಿರುವುದಾಗಿ ಹೇಳಿದ್ದಾರೆ.

  ಸಿನಿಮಾಗಳಲ್ಲಿ ಸಂಜಯ್ ಬ್ಯುಸಿ

  ಸಿನಿಮಾಗಳಲ್ಲಿ ಸಂಜಯ್ ಬ್ಯುಸಿ

  ಮುಂದಿನ ಸಿನಿಮಾಗಳ ಸಂಭಾಷಣೆಯನ್ನು ಅಭ್ಯಾಸ ಮಾಡುತ್ತಿದ್ದಾರಂತೆ. ಸಂಜಯ್ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದಲ್ಲಿಯೂ ಸಂಜಯ್ ದತ್ ಕಾಣಿಸಿಕಂಡಿದ್ದಾರೆ. ಸಿನಿಮಾ ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಎದುರು ನೋಡುತ್ತಿದೆ.

  English summary
  Bollywood Actor Sanjay Dutt wife And Childrens stuck in Dubai Amid lock down.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X