For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಡ್ರಮ್ ಹೊತ್ತು ಎಣ್ಣೆ ತರಲು ಹೊರಟ ನಟ ಶಕ್ತಿ ಕಪೂರ್: ನೆಟ್ಟಿಗರ ಟ್ರೋಲ್

  |

  ಸುಮಾರು ಎರಡು ತಿಂಗಳ ಬಳಿಕ ಲಾಕ್ ಡೌನ್ ಸಡಿಲವಾಗುತ್ತಿದೆ. ತಿಂಗಳಿಂದ ಮನೆಯಲ್ಲಿಯೆ ಇದ್ದ ಜನ ಈಗ ನಿಧಾನವಾಗಿ ಮನೆಯಿಂದ ಹೊರಬರುತ್ತಿದ್ದಾರೆ. ಮುಂಬೈ ನಗರ ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಜನರು ಮನೆಯಿಂದ ಹೊರಬಂದು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

  ಬಾಲಿವುಡ್ ಕಲಾವಿದರು ಸಹ ತಿಂಗಳುಗಳ ಬಳಿಕ ಮನೆಯಿಂದ ಹೊರಬಂದು ಮುಂಬೈ ಬೀದಿಯಲ್ಲಿ ಓಡಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಕರೀನಾ ಕಪೂರ್ ದಂಪತಿ, ರಾಕುಲ್ ಪ್ರೀತ್ ಸಿಂಗ್, ರೀಯಾ ಚಕ್ರವರ್ತಿ ಸೇರಿದ್ದಂತೆ ಅನೇಕರು ಸಿಟಿಯಲ್ಲಿ ಓಡಾಡುತ್ತಿದ್ದಾರೆ. ಬಾಲಿವುಡ್ ನಟ ಶಕ್ತಿ ಕಪೂರ್ ತಲೆಮೇಲೆ ದೊಡ್ಡ ಡ್ರಮ್ ಹೊತ್ತುಕೊಂಡು ಮನೆಯಿಂದ ಹೊರಬಂದು ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಮುಂದೆ ಓದಿ...

  ಶ್ರದ್ಧಾ ಕಪೂರ್ ಮದುವೆ ವದಂತಿ ಬಗ್ಗೆ ಗರಂ ಆದ ಶಕ್ತಿ ಕಪೂರ್ಶ್ರದ್ಧಾ ಕಪೂರ್ ಮದುವೆ ವದಂತಿ ಬಗ್ಗೆ ಗರಂ ಆದ ಶಕ್ತಿ ಕಪೂರ್

  ತಲೆಮೇಲೆ ಡ್ರಮ್ ಹೊತ್ತು ಬಂದ ಶಕ್ತಿ ಕಪೂರ್

  ತಲೆಮೇಲೆ ಡ್ರಮ್ ಹೊತ್ತು ಬಂದ ಶಕ್ತಿ ಕಪೂರ್

  ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ತಿಂಗಳುಗಳ ಬಳಿಕ ಮನೆಯಿಂದ ಹೊರ ಬಂದಿದ್ದಾರೆ. ಶಕ್ತಿ ಕಪೂರ್ ಮನೆಯಿಂದ ಹೊರಬಂದಿರುವುದಲ್ಲದೆ, ತಲೆಮೇಲೆ ದೊಡ್ಡ ಡ್ರಮ್ ಹೊತ್ತುಕೊಂಡು ಹೊರಟಿದ್ದಾರೆ. ಶಕ್ತಿ ಕಪೂರ್ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು,'ಎಲ್ಲಿಗೆ ಹೊರಟಿದ್ದೀರಿ' ಎಂದು ಪ್ರಶ್ನೆ ಮಾಡಿದ್ದಾರೆ.

  ಎಣ್ಣೆ ತರಲು ಹೊರಟಿದ್ದಾರಂತೆ ಶಕ್ತಿ ಕಪೂರ್

  ಎಣ್ಣೆ ತರಲು ಹೊರಟಿದ್ದಾರಂತೆ ಶಕ್ತಿ ಕಪೂರ್

  ಡ್ರಮ್ ಹೊತ್ತುಕೊಂಡು ಹೋಗುತ್ತಿದ್ದ ಶಕ್ತಿ ಕಪೂರ್ ದಿಢೀರನೆ ನಿಂತು ವ್ಯಕ್ತಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾರೆ. "ನಾನು ಎಣ್ಣೆತರಲು ಹೋಗುತ್ತೀನಿ" ಎಂದು ಗಂಭೀರವಾಗಿ ಹೇಳಿ ಹೊರಟು ಹೋಗುತ್ತಾರೆ. ಶಕ್ತಿ ಕಪೂರ್ ಪ್ರತಿಕ್ರಿಯೆಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

  ಅಣ್ಣ ನನಗೂ ಎಣ್ಣೆ ತಂದುಕೊಡಿ ಅಂತಿದ್ದಾರೆ ನೆಟ್ಟಿಗರು

  ಅಣ್ಣ ನನಗೂ ಎಣ್ಣೆ ತಂದುಕೊಡಿ ಅಂತಿದ್ದಾರೆ ನೆಟ್ಟಿಗರು

  ಇಡೀ ಸಮಾಜಕ್ಕೆ ಎಣ್ಣೆ ತೆಗೆದುಕೊಂಡು ಬನ್ನಿ, ಅಣ್ಣಾ ನನಗೂ ಎಣ್ಣೆ ತಂದುಕೊಡಿ ಎಂದು ಕೇಳುತ್ತಿದ್ದಾರೆ. ಇನ್ನೂ ಕೆಲವರು ಸರಿಯಾಗಿ ಪ್ರತಿಕ್ರಿಯೆ ನೀಡಿದ್ದೀರಿ ಎಂದು ಹೇಳುತ್ತಿದ್ದಾರೆ. ಈ ವಿಡಿಯೋವನ್ನು ಶಕ್ತಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಮೆಂಟ್ ಬಾಕ್ಸ್ ನಲ್ಲಿ ತರಹೇವಾರಿ ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.

  ತನುಶ್ರೀ ದತ್ತಾ ವಿವಾದದ ಬಗ್ಗೆ ನಗುತ್ತಾ ಪ್ರತಿಕ್ರಿಯೆ ನೀಡಿದ ಶಕ್ತಿ ಕಪೂರ್ತನುಶ್ರೀ ದತ್ತಾ ವಿವಾದದ ಬಗ್ಗೆ ನಗುತ್ತಾ ಪ್ರತಿಕ್ರಿಯೆ ನೀಡಿದ ಶಕ್ತಿ ಕಪೂರ್

  ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ

  ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ

  ಮಹಾರಾಷ್ಟ್ರ ಸರ್ಕಾರ ಈಗಾಗಲೆ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಸಿನಿಮಾ, ಧಾರಾವಾಹಿ, ಜಾಹಿರಾತು ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಆದರೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಸಾಕಷ್ಟು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧವಾಗಿವೆ.

  English summary
  Actor Shakti Kapoor step out to buy liquor with huge plastic Drum.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X