For Quick Alerts
  ALLOW NOTIFICATIONS  
  For Daily Alerts

  Breaking: ಬಾಲಿವುಡ್ ಯುವ ನಟ ಸಿದ್ಧಾರ್ಥ್ ಶುಕ್ಲಾ ನಿಧನ

  |

  ಹಿಂದಿ ಚಿತ್ರರಂಗದ ಖ್ಯಾತ ಯುವ ನಟ ಸಿದ್ಧಾರ್ಥ್ ಶುಕ್ಲಾ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. 40 ವರ್ಷದ ಯುವ ನಟ ಸಿದ್ಧಾರ್ಥ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು.

  ಸಿದ್ಧಾರ್ಥ್ ಶುಕ್ಲಾ ನಿಧನರಾಗಿರುವ ಸುದ್ದಿಯನ್ನು ಮುಂಬೈನ ಕೂಪರ್ ಅಸ್ಪತ್ರೆಯ ವೈದ್ಯರು ಎಎನ್‌ಐಗೆ ಖಚಿತಪಡಿಸಿದ್ದಾರೆ. ಸಿದ್ಧಾರ್ಥ್ ಶುಕ್ಲಾಗೆ ಮುಂಜಾನೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಮುಂಬೈನ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಬದುಕಿ ಉಳಿಯಲಿಲ್ಲ.

  ಸಿದ್ಧಾರ್ಥ್ ಶುಕ್ಲಾ ಸಾವಿನ ವಿಷಯ ತಿಳಿದ ಚಿತ್ರರಂಗ ಹಾಗೂ ಅಭಿಮಾನಿ ವರ್ಗ ತೀವ್ರ ಆಘಾತದಲ್ಲಿದೆ. ನಟನ ಸಾವಿನ ಸುದ್ದಿಯಿಂದ ಅಚ್ಚರಿಗೊಳಗಾಗಿದ್ದಾರೆ. ಇನ್ನು ಸಿದ್ಧಾರ್ಥ್ ಶುಕ್ಲಾ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಬಿಟ್ಟು ಅಗಲಿದ್ದಾರೆ ಎಂಬ ಮಾಹಿತಿ ಇದೆ. ನಟ ಮನೋಜ್ ಬಾಯಪೇಯಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದು, ''ಓ ದೇವರೆ ನಿಜಕ್ಕೂ ಆಘಾತಕಾರಿ ವಿಷಯ. ಆತನನ್ನು ಕಳೆದುಕೊಂಡ ಆಪ್ತರು ಮತ್ತು ಆತ್ಮೀಯರ ನೋವನ್ನು ವಿವರಿಸಲು ಪದಗಳು ತೋಚುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದಿದ್ದಾರೆ.

  ಸಿದ್ಧಾರ್ಥ್ ಶುಕ್ಲಾ ಮಾಡೆಲ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟು ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗಷ್ಟೆ ಪ್ರಸಾರವಾದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. 'ಡ್ಯಾನ್ಸ್ ದಿವಾನೆ-3' ಕಾರ್ಯಕ್ರಮದಲ್ಲಿ ಶೆಹನಾಜ್‌ ಗಿಲ್ಲಿ ಜೊತೆ ಸೇರಿ ಭಾಗವಹಿಸಿದ್ದರು. ಅಂದ್ಹಾಗೆ, ಶೆಹನಾಜ್‌ ಗಿಲ್ಲಿ ಜೊತೆ ಸಿದ್ಧಾರ್ಥ್ ಶುಕ್ಲಾ ಪ್ರೀತಿಯಲ್ಲಿದ್ದರು ಎಂಬ ಸುದ್ದಿಯೂ ಇದೆ. ಇವರಿಬ್ಬರು ಹಲವು ವೇದಿಕೆಗಳಲ್ಲಿ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ಸಿದ್ನಾಜ್' ಎಂದು ಕರೆಯುತ್ತಿದ್ದರು.

  ಅಂದ್ಹಾಗೆ, ಬಿಗ್ ಬಾಸ್ 13ನೇ ಆವೃತ್ತಿಯ ವಿನ್ನರ್ ಆಗಿದ್ದರು ಸಿದ್ಧಾರ್ಥ್ ಶುಕ್ಲಾ. 2014ರಲ್ಲಿ ತೆರೆಕಂಡಿದ್ದ 'ಹಂಪ್ಟಿ ಶರ್ಮಾ ಕೆ ದುಲ್ಹಾನಿಯಾ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇದು ಇವರ ಚೊಚ್ಚಲ ಹಿಂದಿ ಸಿನಿಮಾ ಆಗಿತ್ತು. ಏಕ್ತಾ ಕಪೂರ್ ನಿರ್ಮಾಣದ 'ಬ್ರೋಕನ್ ಬಟ್ ಬ್ಯೂಟಿಫುಲ್ 3' ಶೋನಲ್ಲಿ ಸಿದ್ಧಾರ್ಥ್ ಶುಕ್ಲಾ ಕೊನೆಯದಾಗಿ ಕಾಣಿಸಿಕೊಂಡಿದ್ದರು.

  1980ರ ಡಿಸೆಂಬರ್ 12 ರಂದು ಸಿದ್ಧಾರ್ಥ್ ಶುಕ್ಲಾ ಮುಂಬೈನಲ್ಲಿ ಅಶೋಕ್ ಶುಕ್ಲಾ ಮತ್ತು ರಿತಾ ಶುಕ್ಲಾ ದಂಪತಿಯ ಮಗನಾಗಿ ಜನಿಸಿದರು. ಮೂಲತಃ ಉತ್ತರ ಪ್ರದೇಶದ ಅಲಹಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಕುಟುಂಬ ವಾಸವಿತ್ತು. ಸೇಂಟ್ ಕ್ಸೇವಿಯರ್ಸ್ ಪ್ರೌಡ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ರಚನಾ ಸಂಸದ್ ಸ್ಕೂಲ್ ಆಫ್ ಇಂಟಿರಿಯರ್ ಡಿಸೈನ್ ಸಂಸ್ಥೆಯಲ್ಲಿ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಪದವಿ ಪಡೆದರು.

  actor-siddharth-shukla-dies-due-to-heart-attack

  'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  2020ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಸಹ ಇದೇ ರೀತಿ ಆಘಾತ ನೀಡಿತ್ತು. ಕೊರೊನಾ ವೈರಸ್ ಆತಂಕದಲ್ಲಿದ್ದ ಸಮಯದಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಇಡೀ ಭಾರತೀಯರನ್ನು ಚಿಂತೆಗೀಡು ಮಾಡಿತ್ತು. ಈ ಸಾವನ್ನು ಈಗಲೂ ಜನರು ಮರೆಯಲಾಗದೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಕೇವಲ 40 ವರ್ಷದ ಪ್ರತಿಭಾನ್ವಿತ ಯುವ ಕಲಾವಿದ ಸಾವನ್ನಪ್ಪಿರುವುದು ನಿಜಕ್ಕೂ ನೋವಿನ ಸಂಗತಿ.

  English summary
  Actor Siddharth Shukla dead after a heart attack, Mumbai’s Cooper Hospital confirms the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X