»   » ಕ್ಯಾನ್ಸರಿಗೆ ಬಲಿಯಾದ ಪ್ರಬುದ್ಧ ಪೋಷಕ ನಟ

ಕ್ಯಾನ್ಸರಿಗೆ ಬಲಿಯಾದ ಪ್ರಬುದ್ಧ ಪೋಷಕ ನಟ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಪ್ರಬುದ್ಧ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಸೀತಾರಾಮ್ ಪಂಚಲ್ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ಸೀತಾರಾಮ್ ಅವರು ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಬುಧವಾರವಷ್ಟೇ ತಮ್ಮ ಮದುವೆಯ 26ನೇ ವಾರ್ಷಿಕೋತ್ಸವ ಸಂಭ್ರಮ ಕಂಡಿದ್ದ ಪಂಚಲ್ ಅವರ ಮನೆಯಲ್ಲೀಗ ಸೂತಕ ಆವರಿಸಿದೆ. ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೀತಾರಾಮ್ ಅವರು ಇಂದು ಬೆಳಗ್ಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸಿ, ಬೆಳಗ್ಗೆ 7.45ರ ವೇಳೆಗೆ ಕೊನೆಯುಸಿರೆಳೆದರು. ಕಿಡ್ನಿ ಕೂಡಾ ವೈಫಲ್ಯ ಕಂಡಿತ್ತು.

ಸೀತಾರಾಮ್ ಪಂಚಲ್ ಅವರು 1994ರಲ್ಲಿ ವಿವಾದಿತ ಪ್ರಶಸ್ತಿ ವಿಜೇತ ಬ್ಯಾಂಡಿಟ್ ಕ್ವೀನ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಸ್ಲಮ್ ಡಾಗ್ ಮಿಲೇನಿಯರ್, ಪೀಪ್ಲಿ ಲೈ, ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಅವರಿಗೆ ಹೆಸರು ತಂದುಕೊಟ್ಟ ಚಿತ್ರಗಳು.

ಕೆಲ ತಿಂಗಳುಗಳ ಹಿಂದೆ ಆರ್ಥಿಕ ನೆರವು ಕೋರಿ, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ "Brothers, please help me, I am suffering from cancer, your actor brother, Sitaram Panchal." ಎಂಬ ಸಂದೇಶವನ್ನು ಅವರ ಪುತ್ರ ರೋಹಿತ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೀತಾರಾಮ್ ಗೆ ಆರ್ಥಿಕ ನೆರವು

ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದ ಸೀತಾರಾಮ್ ಅವರ ಚಿಕಿತ್ಸೆಗಾಗಿ ಬೇಕಿದ್ದ ಆರ್ಥಿಕ ನೆರವನ್ನು ನೀಡಲು ಸಿನಿಮಾ ಹಾಗೂ ಟಿವಿ ಕಲಾವಿದರ ಸಂಘ ಮುಂದೆ ಬಂದಿತ್ತು. ಅನೇಕ ಸೆಲೆಬ್ರಿಟಿಗಳು ಆರ್ಥಿಕ ನೆರವು ನೀಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೀತಾರಾಮ್ ಅವರು ಮೃತಪಟ್ಟಿದ್ದಾರೆ

26ನೇ ವಿವಾಹ ವಾರ್ಷಿಕೋತ್ಸವ

ಸೀತಾರಾಮ್ ದಂಪತಿ 26ನೇ ವಿವಾಹ ವಾರ್ಷಿಕೋತ್ಸವವಿತ್ತು. ಸೀತಾರಾಮ್ ಅವರ ಮಗ ರಿಷಬ್ ಪಂಚಲ್ ಅವರು ತಂದೆ ತಾಯಿಯೊಂದಿಗಿದ್ದ ಫೋಟೋ ಕೂಡ ಅಪ್ಲೋಡ್ ಮಾಡಿದ್ದರು.

ಹರಿಯಾಣ ಸರ್ಕಾರದ ನೆರವು

ಕ್ಯಾನ್ಸರ್ ಗೆ ಆಯುರ್ವೇದಿಕ್, ಹೋಮಿಯೋಪತಿ ಔಷಧ ತೆಗೆದುಕೊಳ್ಳಲು ಆರಂಭಿಸಿದ್ದರು. ಅಲೋಪತಿ ಚಿಕಿತ್ಸೆ ತೆಗೆದುಕೊಳ್ಳಲು ಹರಿಯಾಣ ಸರ್ಕಾರ 5 ಲಕ್ಷ ರೂಪಾಯಿ ನೆರವು ನೀಡಿತ್ತು. ಆದರೆ, ಯಾವುದೇ ಚಿಕಿತ್ಸೆ ಅವರಿಗೆ ಒಗ್ಗಲಿಲ್ಲ.

ಜನಪ್ರಿಯ ಚಿತ್ರಗಳು

‘ಪಾನ್ ಸಿಂಗ್ ತೋಮರ್', ‘ಜಾಲಿ ಎಲ್ ಎಲ್ ಬಿ 2', ‘ಬಂಡಿತ್ ಕ್ವೀನ್', ‘ಸ್ಲಮ್ ಡಾಗ್ ಮಿಲಿಯನೇರ್', ‘ಪೀಪ್ಲಿ ಲೈವ್' ಮತ್ತು ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್' ಚಿತ್ರದಲ್ಲಿ ಸೀತಾರಾಮ್ ನಟಿಸಿದ್ದರು.

English summary
Peepli Live actor Sitaram Panchal breathed his last today on August 10, 2017 after a three-year long battle with kidney and lung cancer. He was 54 years old and had just celebrated his 26th wedding anniversary yesterday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada