For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಕಡೆಯಿಂದ ಮತ್ತೊಂದು ಪುಣ್ಯದ ಕೆಲಸ

  |

  ಕಳೆದ ನಾಲ್ಕೈದು ತಿಂಗಳಿನಿಂದ ರಿಯಲ್ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಈಗ ಮತ್ತೊಂದು ಪುಣ್ಯದ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

  ವ್ಯಕ್ತಿಯೊಬ್ಬ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಪರದಾಡುತ್ತಿದ್ದರು. ಯಾರೊಬ್ಬರು ಸಹಾಯಕ್ಕೆ ಬಾರದಿದ್ದಾಗ ಸೋನು ಸೂದ್ ಅವರ ಮೊರೆ ಹೋದರು. ಟ್ವಿಟ್ಟರ್ ಮೂಲಕ ಸೋನು ಸೂದ್ ಬಳಿ ನೆರವಿಗಾಗಿ ಅಂಗಲಾಚಿದರು. ಸೋನು ಸೋದ್ ಸಹ ಈ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಮುಂದೆ ಓದಿ...

  ಸೆಪ್ಟೆಂಬರ್ 14 ರಂದು ಮನವಿ

  ಸೆಪ್ಟೆಂಬರ್ 14 ರಂದು ಮನವಿ

  ''ನಮಸ್ತೆ ಸೋನು ಸರ್, ನಾನು ನಿಮಗೆ ಕೆಲವು ವೈದ್ಯಕೀಯ ಸಹಾಯವನ್ನು ಕೋರುತ್ತೇನೆ. ನನಗೆ ಆದಷ್ಟು ಬೇಗ ಬಲ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯವಿದೆ. ಆದರೆ ಪ್ರಸ್ತುತ ನಾನು ಅದನ್ನು ಭರಿಸಲಾರೆ. ನೀವು ನನಗೆ ಸಹಾಯ ಮಾಡಬಹುದೇ ಎಂದು ದಯವಿಟ್ಟು ನೋಡಿ. ಅಗತ್ಯವಿದ್ದರೆ ಲಗತ್ತಿಸಲಾದ ವರದಿಗಳನ್ನು ಸಹ ನೋಡಿ'' ಎಂದು ವೈದ್ಯರ ವರದಿ ಲಗತ್ತಿಸಿ ಸೆಪ್ಟೆಂಬರ್ 14 ರಂದು ಮನವಿ ಮಾಡಿದ್ದರು.

  'ರಿಯಲ್ ಹೀರೋ' ಸೋನು ಸೂದ್ ಮತ್ತೊಂದು ಮಹತ್ವದ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ!'ರಿಯಲ್ ಹೀರೋ' ಸೋನು ಸೂದ್ ಮತ್ತೊಂದು ಮಹತ್ವದ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ!

  ಭರವಸೆ ನೀಡಿದ್ದ ನಟ

  ಭರವಸೆ ನೀಡಿದ್ದ ನಟ

  ಇದಕ್ಕೆ ಎರಡು ದಿನದ ಬಳಿಕ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್ ''ನಿಮ್ಮ ವರದಿಯನ್ನು ವೈದ್ಯರೊಂದಿಗೆ ಹಂಚಿಕೊಂಡಿದ್ದೇನೆ. ನಿಮ್ಮ ಬ್ಯಾಕ್ ಸಿದ್ಧಮಾಡಿಕೊಳ್ಳಿ, ಸೋಮವಾರ ನಿಮ್ಮ ಶಸ್ತ್ರ ಚಿಕಿತ್ಸೆ'' ಎಂದು ಭರವಸೆ ನೀಡಿದ್ದರು.

  ಇದು ಭಾನುವಾರದ ವಿಶೇಷ

  ಇದು ಭಾನುವಾರದ ವಿಶೇಷ

  ಸೋನು ಸೂದ್ ಅವರ ಸಹಾಯದ ಪರಿಣಾಮ ಅರ್ಜುನ್ ಚೌಹಣ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಈ ಕುರಿತು ಸ್ವತಃ ಸೋನು ಸೂದ್ ಮಾಹಿತಿ ನೀಡಿದ್ದಾರೆ. ''ಮತ್ತೊಂದು ಯಶಸ್ವಿ ಶಸ್ತ್ರ ಚಿಕಿತ್ಸೆ, ಇದು ಭಾನುವಾರದ ವಿಶೇಷ. ಕರ್ನೂಲ್‌ನ ವಿರ್ಕ್ ಆಸ್ಪತ್ರೆಯ ವೈದ್ಯ ಅಮಾನ್ ಪ್ರೀತ್ ಅವರಿಗೆ ವಿಶೇಷ ಧನ್ಯವಾದಗಳು, ನಿಮ್ಮಂತ ಸೂಪರ್ ಹೀರೋ ನಮಗೆ ಬೇಕು'' ಎಂದಿದ್ದಾರೆ.

  ಸೋನು ಸೂದ್ ಆಪ್ತ ಗೆಳತಿ, ಯಾರಿದು ನೀತಿ ಗೋಯಲ್?ಸೋನು ಸೂದ್ ಆಪ್ತ ಗೆಳತಿ, ಯಾರಿದು ನೀತಿ ಗೋಯಲ್?

  ನಾನು ರಕ್ಷಿತ್ ಶೆಟ್ಟಿ ಇಬ್ರು ಹೀಗೆ ಆಗುತ್ತೆ ಅಂತ ಅಂದುಕೊಂಡಿರ್ಲಿಲ್ಲ | Filmibeat Kannada
  ನೀವು ದೇವರ ತದ್ರೂಪಿ

  ನೀವು ದೇವರ ತದ್ರೂಪಿ

  ಈ ಬಗ್ಗೆ ಸಂತಸ ಹಂಚಿಕೊಂಡಿರುವ ಅರ್ಜುನ್ ಚೌಹಣ್ ''ಸೋನು ಸೂದ್ ಸರ್ ಕಳೆದ 4 ತಿಂಗಳುಗಳಿಂದ ನನಗೆ ಎಲ್ಲಾ ಬಾಗಿಲುಗಳು ಮುಚ್ಚಿತ್ತು. ಯಾರಿಂದಲೂ ಒಂದೇ ಒಂದು ಪ್ರತಿಕ್ರಿಯೆ ಸಿಗಲಿಲ್ಲ. ನಂತರ ನಾನು ನಿಮ್ಮ ದಯೆಯ ಬಗ್ಗೆ ಕೇಳಿದೆ. ಹಾಗಾಗಿ, ನಿಮ್ಮನ್ನು ಸಂಪರ್ಕಿಸಿದೆ. ವೈದ್ಯರೊಂದಿಗೆ ಮಾತನಾಡಿ ಕರ್ನೂಲ್‌ನಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದೀರಿ. ಇದನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ. ನೀವು ನಿಜಕ್ಕೂ ದೇವರ ತದ್ರೂಪಿ'' ಎಂದಿದ್ದಾರೆ.

  English summary
  Bollywood actor Actor Sonu sood has help to knee surgery for arjun chauhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X