10 ಕೋಟಿ ರೂ. ಸಾಲಕ್ಕಾಗಿ ಆಸ್ತಿ ಅಡವಿಟ್ಟ 'ರಿಯಲ್ ಹೀರೋ' ಸೋನು ಸೂದ್
ಕೊರೊನಾ ಲಾಕ್ ಡೌನ್ ಬಳಿಕ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿ ಲಕ್ಷಾಂತರ ಕಾರ್ಮಿಕರನ್ನು ಮನೆಗೆ ಸೇರಿಸುವ ಮೂಲಕ ನಟ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಬಳಿಕ ಸೋನು ಸೂದ್ ತಮ್ಮ ಸಮಾಜಿಕ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಸೋನು ಸೂದ್ ಸಾಮಾಜಿಕ ಕೆಲಸಕ್ಕೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ರಿಯಲ್ ಹೀರೋ ಆಗಿ ಹೊರಹೊಮ್ಮಿರುವ ನಟ ಸೋನು ಸೂದ್ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದ ಸೋನು ಸೂದ್ ಇದೀಗ 10 ಕೋಟಿ ರೂ.ಗಾಗಿ ಜುಹುನಲ್ಲಿರುವ ತಮ್ಮ ಆಸ್ತಿಗಳನ್ನು ಅಡ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಸಾಮಾಜಿಕ ಕೆಲಸಕ್ಕಾಗಿ ಸೋನು ಹೆಸರಿನಲ್ಲಿದ್ದ ಒಟ್ಟು 8 ಪ್ರಾಪರ್ಟಿಗಳನ್ನು ಅಡ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಎರಡು ಶಾಪ್ 6 ಫ್ಲ್ಯಾಟ್ ಸೇರಿವೆಯಂತೆ. ಸ್ಟ್ಯಾಂಡರ್ಡ್ ಚಾಟರ್ಡ್ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದು, ಸೆಪ್ಟೆಂಬರ್ 15ರಂದು ಒಪ್ಪಂದ ಏರ್ಪಟಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ನವೆಂಬರ್ 24ರಂದು ನೋಂದಣಿ ಮಾಡಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಈ ಮುಂಬೈನ ಇಸ್ಕಾನ್ ದೇವಾಲಯದ ಸಮೀಪ ಎಬಿ ನಾಯರ್ ರಸ್ತೆಯಲ್ಲಿದ್ದು, ನೋಂದಣಿ ಶುಲ್ಕ 5 ಲಕ್ಷ ರೂ. ಪಾವತಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಆಸ್ತಿಗಳು ಸೋನು ಸೂದ್ ಮತ್ತು ಅವರ ಪತ್ನಿ ಒಡೆತನದಲ್ಲಿದೆಯಂತೆ.
ಮಾಸಿಕ ಬಾಡಿಗೆ ಪಡೆಯುವುದನ್ನು ಮುಂದುವರೆಸಿದರೆ 10ಕೋಟಿ ರೂ.ಗಳ ಅಸಲಿನ ಜೊತೆಗೆ ಬಡ್ಡಿಯನ್ನು ಪಾವತಿಸಬೇಕಾಗಬಹುದು ಎಂದು ಜೆಎಲ್ ಎಲ್ ಇಂಡಿಯಾದ ಪಶ್ಚಿಮ ಭಾರತ, ವಸತಿ ಸೇವೆಗಳ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ರಿತೇಶ್ ಮೆಹ್ತಾ ಹೇಳಿದ್ದಾರೆ.


Click it and Unblock the Notifications











