For Quick Alerts
  ALLOW NOTIFICATIONS  
  For Daily Alerts

  ನಟರಾಗಿದ್ದ ಸೋನು ಸೂದ್‌ ಹೊಸ 'ಪಾತ್ರ'ಕ್ಕೆ ತಯಾರಾಗುತ್ತಿದ್ದಾರೆ

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೇವೆ ಮಾಡಿ ನಿಜ ಬದುಕಿನ ಹೀರೋ ಆಗಿರುವ ಸೋನು ಸೂದ್ ಗೆ ಹಲವಾರು ಸಿನಿಮಾಗಳ ಅವಕಾಶಗಳು ಹುಡುಕಿ ಬರುತ್ತಿವೆ.

  ವಿಲನ್ ಪಾತ್ರಗಳಿಗೆ ಖ್ಯಾತರಾಗಿದ್ದ ಸೋನು ಸೂದ್‌, ಇನ್ನು ಮುಂದೆ ತಾವು ವಿಲನ್ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಅವರಿಗೆ ನಾಯಕ ಪಾತ್ರಗಳು ಸಾಕಷ್ಟು ಹುಡುಕಿ ಸಹ ಬರುತ್ತಿವೆ. ಈ ನಡುವೆ ಮತ್ತೊಂದು ಬಡ್ತಿ ದೊರೆತಿದೆ ಸೋನು ಸೂದ್‌ಗೆ.

  ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ; ಸೋನು ಸೂದ್ ಗೆ ಮೆಗಾಸ್ಟಾರ್ ಹೀಗೆ ಹೇಳಿದ್ದೇಕೆ?

  ಹೌದು, ಸೋನು ಸೂದ್ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಪಕ ಸಹ ಆಗುತ್ತಿದ್ದಾರೆ. ಇಷ್ಟು ದಿನ ನಟನೆಗೆ ಮಾತ್ರವೇ ಸೀಮಿತರಾಗಿದ್ದ ಸೋನು ಸೂದ್ ಇನ್ನು ಮುಂದೆ ನಿರ್ಮಾಪಕರೂ ಆಗಲಿದ್ದಾರೆ.

  ತಮ್ಮ ಸಿನಿಮಾಕ್ಕೆ ತಾವೇ ಬಂಡವಾಳ

  ತಮ್ಮ ಸಿನಿಮಾಕ್ಕೆ ತಾವೇ ಬಂಡವಾಳ

  ನಿರ್ಮಾಪಕರಾಗಿ ತಮ್ಮ ಸಿನಿಮಾವನ್ನು ತಾವೇ ನಿರ್ಮಿಸುತ್ತಿದ್ದಾರೆ ಸೋನು ಸೂದ್. ನನಗೆ ಒಪ್ಪುವ ಚಿತ್ರಕತೆಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ಚಿತ್ರಕತೆ ದೊರೆತ ಕೂಡಲೇ ನಿರ್ಮಾಪಕನಾಗಲಿದ್ದೇನೆ, ನನ್ನ ಸಿನಿಮಾದಲ್ಲಿ ನಾನೇ ಮುಖ್ಯ ಪಾತ್ರದಲ್ಲಿ ನಟಿಸಲಿದ್ದೇನೆ ಎಂದಿದ್ದಾರೆ ಸೋನು ಸೂದ್.

  ಪ್ರೇರಣೆ ನೀಡುವ ಸಿನಿಮಾಗಳ ನಿರ್ಮಾಣ

  ಪ್ರೇರಣೆ ನೀಡುವ ಸಿನಿಮಾಗಳ ನಿರ್ಮಾಣ

  'ಜನರಿಗೆ ಪ್ರೇರಣೆ ನೀಡಬಲ್ಲ, ಮಾನವೀಯತೆ ಸಾರುವ, ಉತ್ತಮ ಆದರ್ಶಗಳನ್ನು ಸಾರುವ ಸಿನಿಮಾಗಳನ್ನಷ್ಟೆ ನಾನು ನಿರ್ಮಿಸುತ್ತೇನೆ' ಎಂದಿದ್ದಾರೆ ನಟ ಸೋನು ಸೂದ್. ತಮಗೆ ಈಗ ಧಕ್ಕಿರುವ ಒಳ್ಳೆಯ ಇಮೇಜನ್ನು ಹಾಗೆಯೇ ಮುಂದುವರೆಸುವ ಯೋಜನೆಯಲ್ಲಿದ್ದಾರೆ ನಟ.

  ಅಭಿಮಾನಿಯ ಪುಟ್ಟ ಹೋಟೆಲ್‌ ಹುಡುಕಿ ಬಂದ ಸೋನು ಸೋದ್

  ಹಲವು ಆಫರ್‌ಗಳು ಹುಡುಕಿ ಬಂದಿವೆ

  ಹಲವು ಆಫರ್‌ಗಳು ಹುಡುಕಿ ಬಂದಿವೆ

  ಕೊರೊನಾ ನಂತರ ಹಲವಾರು ಸಿನಿಮಾಗಳ ಆಫರ್‌ಗಳು ಸೋನು ಸೂದ್ ಗೆ ದೊರೆಯುತ್ತಿವೆ, ಆದರೆ ಸೋನು ಸೂದ್ ಅಳೆದು-ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಕೊರೊನಾ ಸಮಯದಲ್ಲಿ ಸೋನು ಸೂದ್‌ಗೆ ಸಿಕ್ಕಿರುವ ಒಳ್ಳೆಯ ಇಮೇಜ್ ಅನ್ನು ಸಿನಿಮಾ ಮೂಲಕ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ ಅವರಿಗೆ.

  ಹೊಡೆಯಲು ಹಿಂಜರೆಯುತ್ತಿದ್ದಾರೆ ಚಿರಂಜೀವಿ

  ಹೊಡೆಯಲು ಹಿಂಜರೆಯುತ್ತಿದ್ದಾರೆ ಚಿರಂಜೀವಿ

  ಕೊರೊನಾ ಗೆ ಮುಂಚೆ ಒಪ್ಪಿಕೊಂಡಿರುವ ಕೆಲವು ಸಿನಿಮಾಗಳಲ್ಲಿ ಸೋನು ಸೂದ್ ವಿಲನ್ ಆಗಿ ನಟಿಸುತ್ತಿದ್ದಾರೆ ಅದರಲ್ಲಿ ಆಚಾರ್ಯ ಸಹ ಒಂದು. ಚಿತ್ರೀಕರಣದ ಆಕ್ಷನ್‌ ದೃಶ್ಯವೊಂದರಲ್ಲಿ ನಟಿಸುವಾಗ ಸೋನು ಸೂದ್‌ ಗೆ ಹೊಡೆಯಲು ಹಿಂಜರಿಯುತ್ತಿದ್ದರಂತೆ ಮೆಗಾಸ್ಟಾರ್ ಚಿರಂಜೀವಿ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದಾರೆ.

  English summary
  Actor Sonu Sood planing to produce movies. He says he only act in lead role in his movies which he going to produce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X