For Quick Alerts
  ALLOW NOTIFICATIONS  
  For Daily Alerts

  Sudeep: ನೆಚ್ಚಿನ ನೃತ್ಯ ನಿರ್ದೇಶಕನಿಗೆ ಮೆಚ್ಚಿನ ಉಡುಗೊರೆ ನೀಡಿದ ಕಿಚ್ಚ ಸುದೀಪ್!

  |

  ನಟ ಕಿಚ್ಚ ಸುದೀಪ್ ಒಮ್ಮೆ ಯಾರೊಂದಿಗಾದರೂ ಸ್ನೇಹ ಬೆಳೆಸಿದ್ರು ಅಂದ್ರೆ ಅದು ಯಾವತ್ತೂ ಶಾಶ್ವತ. ಯಾವತ್ತೂ ಅವರನ್ನು ಬಿಟ್ಟುಕೊಡುವ ಜಾಯಮಾನ ಕಿಚ್ಚ ಸುದೀಪ್ ಅವರದ್ದು ಅಲ್ಲ. ಸ್ನೇಹ ಅಂತ ಬಂದ್ರೆ ಗಟ್ಟಿಯಾಗಿ ನಿಲ್ಲುವ ಸುದೀಪ್, ಸ್ನೇಹ ಎಂಬ ಪದಕ್ಕೆ ಮತ್ತೊಂದು ಹೆಸರು ಕಿಚ್ಚ ಅಂದ್ರೆ ತಪ್ಪಾಗಲಾರದು.

  ಸುದೀಪ್‌ ಸ್ನೇಹಿತರಿಗೆ ಕಷ್ಟ ಅಂದರೆ ಅವರಿಗೆ ಏನು ಬೇಕಾದರೂ ಮಾಡುವ ವ್ಯಕ್ತಿ. ಖುಷಿಯಲ್ಲೂ, ದುಃಖದಲ್ಲೂ ಸ್ನೇಹಿತರೊಟ್ಟಿಗೆ ಕಿಚ್ಚ ಸುದೀಪ್ ಇರುತ್ತಾರೆ.

  ಇಷ್ಟೆ ಅಲ್ಲ ಸ್ನೇಹಿತರನ್ನು ಖುಷಿಪಡಿಸುವಲ್ಲೂ ಕಿಚ್ಚ ಎತ್ತಿದ ಕೈ. ಸ್ನೇಹಿತರಿಗೆ ಏನು ಬೇಕು ಅನ್ನೋದನ್ನು ಚೆನ್ನಾಗಿ ಅರಿತುಕೊಂಡು ಅವರಿಗೆ ಉಡುಗೊರೆಗಳನ್ನು ನೀಡುತ್ತಾರೆ. 'ವಿಕ್ರಾಂತ್ ರೋಣ' ನೃತ್ಯ ನಿರ್ದೇಶಕನಿಗೆ ಇದೀಗ ಥಾರ್ ಜೀಪ್ ಒಂದನ್ನು ಗಿಫ್ಟ್ ನೀಡಿ ಖುಷಿ ಪಡಿಸಿದ್ದಾರೆ.

  ಜಾನಿ ಮಾಸ್ಟರ್‌ಗೆ ಸುದೀಪ್ ಸಪ್ರೈಸ್ ಗಿಫ್ಟ್

  ಕಿಚ್ಚ ಸುದೀಪ್‌ ಈ ಹಿಂದೆ ಕೂಡ ಹಲವರಿಗೆ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ. ಸುದೀಪ್‌ಗೆ ಏನಾದ್ರೂ ನೀಡಬೇಕು ಅಂತ ಫ್ಯಾನ್ಸ್ ಅಂದುಕೊಳ್ಳುತ್ತಾರೆ. ಆದರೆ ಸುದೀಪ್‌ರಿಂದಲೇ ಗಿಫ್ಟ್ ಪಡೆಯುವವರು ಇನ್ನೆಷ್ಟು ಅದೃಷ್ಟವಂತರೂ ನೀವೆ ಊಹಿಸಿ. ಆ ಅದೃಷ್ಟವಂತರಲ್ಲಿ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ಗೆ ಸುದೀಪ್ ಸಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ. ಜಾನಿ ಮಾಸ್ಟರ್‌ಗೆ ಇಷ್ಟವಾಗಿದ್ದ ಥಾರ್ ಜೀಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸುದ್ದಿಯನ್ನು ಸ್ವತಃ ಜಾನಿ ಮಾಸ್ಟರ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದು ಕಿಚ್ಚನಿಗೆ ಧನ್ಯವಾದ ತಿಳಿಸಿದ್ದಾರೆ.

  ನೆಚ್ಚಿನ ಕಾರ್ ಉಡುಗೊರೆ

  ಇನ್ನು ಈ ಹಿಂದೆ ಕೂಡ ಬಹುಕಾಲದ ಗೆಳೆಯ 'ವಿಕ್ರಾಂತ್ ರೋಣ' ಚಿತ್ರದ ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ ಗಿಫ್ಟ್ ಅನ್ನು ನೀಡಿದ್ದರು. ಮಾ.2ರಂದು ಅನೂಪ್ ಭಂಡಾರಿ 40ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆ ಸಪ್ರೈಸ್ ಒಂದನ್ನು ನೀಡಿದ್ದರು. ಅನೂಪ್ ಭಂಡಾರಿಗೆ ನೆಚ್ಚಿನ ಎಸ್‌ಯುವಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಪ್ರೈಸ್ ಕಂಡು ನಿರ್ದೇಶಕ ಅನೂಪ್ ಭಂಡಾರಿ ತುಂಬ ಸಂತಸಗೊಂಡಿದ್ದರು.

  ಕಪ್ಪು ಬಣ್ಣದ ಬುಲೆಟ್ ಬೈಕ್ ನೀಡಿದ್ದ ಸುದೀಪ್

  ಕಪ್ಪು ಬಣ್ಣದ ಬುಲೆಟ್ ಬೈಕ್ ನೀಡಿದ್ದ ಸುದೀಪ್

  ಹಲವು ವರ್ಷಗಳಿಂದ ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ಸಾಯಿ ಕಿರಣ್‌ಗೂ ಹುಟ್ಟುಹಬ್ಬದ ಪ್ರಯುಕ್ತ ಗಿಫ್ಟ್ ನೀಡಿದ್ದರು. ಸಾಯಿ ಕಿರಣ್ ಇಷ್ಟ ಪಟ್ಟಿದ್ದ ಕಪ್ಪು ಬಣ್ಣದ ಬುಲೆಟ್ ಬೈಕ್ ಕೊಡಿಸಿದ್ದರು. ಈ ಖುಷಿ ವಿಚಾರವನ್ನು ಸ್ವತಃ ಸಾಯಿ ಕಿರಣ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದರು. "ತುಂಬ ಧನ್ಯವಾದಗಳು ಅಣ್ಣ ಈ ಪ್ರೀತಿಯ ಉಡುಗೊರೆಯನ್ನು ಯಾವತ್ತೂ ಜೋಪಾನ ಮಾಡುತ್ತೇನೆ." ಎಂದಿದ್ದರು.

  ದುಬಾರಿ ಕಾರು ನೀಡಿದ್ದ ನಟ ಸುದೀಪ್

  ದುಬಾರಿ ಕಾರು ನೀಡಿದ್ದ ನಟ ಸುದೀಪ್

  ಹಾಗೇ ಕಿಚ್ ಸುದೀಪ್ ಮ್ಯಾನೆಜರ್ ಹಾಗೂ ನೆಚ್ಚಿನ ಸ್ನೇಹಿತ ಜಾಕ್ ಮಂಜು ಅವರಿಗೂ ಕಿಚ್ಚ ಸುದೀಪ್ ದುಬಾರಿ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಹೀಗೆ ತನ್ನ ಸ್ನೇಹಿತರು ಯಾವತ್ತೂ ಖುಷಿಯಾಗಿ ಇರಬೇಕು ಅನ್ನುವ ನಿಟ್ಟಿನಲ್ಲಿ ಸುದೀಪ್‌ಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಈ ಸುದ್ದಿ ತಿಳಿದು ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ.

  English summary
  Actor Sudeep surprise gift for Dance choreographer johnny master. Here is more details.
  Saturday, March 26, 2022, 9:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X