For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ಕಾಳಜಿಯನ್ನು ಕೊಂಡಾಡಿದ ವರುಣ್ ಧವನ್

  |

  ಬಾಲಿವುಡ್ ಯುವ ನಟ ವರುಣ್ ಧವನ್‌ ಗೆ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಕೊರೊನಾದಿಂದ ಗುಣಮುಖರಾಗಿರುವ ವರುಣ್ ಧವನ್, ಕೊರೊನಾ ಅನುಭವ ಹಂಚಿಕೊಂಡಿದ್ದಾರೆ.

  ಕೊರೊನಾ ದಿಂದ ಗುಣಮುಖರಾಗಿರುವ ವರುಣ್ ಧವನ್, ಕೂಲಿ ನಂ 1 ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಮಯದಲ್ಲಿ ಸಂದರ್ಶನವೊಂದರಲ್ಲಿ ಕೊರೊನಾ ಅನುಭವ ಹಂಚಿಕೊಂಡಿರುವ ವರುಣ್ ಧವನ್, ಅಮಿತಾಬ್ ಬಚ್ಚನ್ ಕಾಳಜಿ ಬಗ್ಗೆ ಕೊಂಡಾಡಿದ್ದಾರೆ.

  ನಾನು ಕೊರೊನಾ ಸೋಂಕಿಗೆ ತುತ್ತಾಗಿ ಐಸೋಲೇಶನ್‌ನಲ್ಲಿ ಇದ್ದಾಗ ಪ್ರತಿದಿನ ನನ್ನ ಆರೋಗ್ಯದ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದುದು ಅಮಿತಾಬ್ ಬಚ್ಚನ್ ಎಂದಿದ್ದಾರೆ ಅಮಿತಾಬ್ ಬಚ್ಚನ್.

  'ನನಗೆ ಪ್ರತಿದಿನ ಕರೆ ಮಾಡಿ ನನ್ನ ಆರೋಗ್ಯದ ಮಾಹಿತಿ ಪಡೆಯುತ್ತಿದ್ದರು ಅಮಿತ್ ಜೀ. ಅವರೊಬ್ಬ ಅದ್ಭುತವಾದ ವ್ಯಕ್ತಿ' ಎಂದು ಕೊಂಡಾಡಿದ್ದಾರೆ ನಟ ವರುಣ್ ಧವನ್.

  'ಜುಗ್ ಜುಗ್ ಜಿಯೊ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಟ ವರುಣ್ ಧವನ್, ನೀತಾ ಕಪೂರ್ ಹಾಗೂ ಇತರರಿಗೆ ಕೊರೊನಾ ಸೋಂಕು ತಗುಲಿತ್ತು. 'ಚಿತ್ರೀಕರಣ ಸೆಟ್‌ನಲ್ಲಿ ನಾವು ಸಾಕಷ್ಟು ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೆವು, ಆದರೂ ಅದು ಹೇಗೆ ಕೊರೊನಾ ಸೋಂಕು ತಗುಲಿತೊ ಗೊತ್ತಿಲ್ಲ' ಎಂದಿದ್ದಾರೆ ವರುಣ್ ಧವನ್.

  ಅದೃಷ್ಟವಶಾತ್ ನನ್ನ ರೋಗನಿರೋಧಕ ಶಕ್ತಿ ಚೆನ್ನಾಗಿತ್ತು, ನನಗೆ ಏನೂ ಆಗಲಿಲ್ಲ. ಆದರೆ ಎಲ್ಲರೂ ಸಾಧ್ಯವಾದಷ್ಟು ಎಚ್ಚರಿಕೆ ಇಂದ ಇರುವುದು ಉತ್ತಮ ಎಂದಿದ್ದಾರೆ ವರುಣ್ ಧವನ್.

  ವರುಣ್ ಧವನ್, ನೀತಾ ಕಪೂರ್, ಕಿಯಾರಾ ಅಡ್ವಾಣಿ, ಪ್ರಾಜಕ್ತಾ ಅವರುಗಳಿಗೆ ಕೊರೊನಾ ಸೋಂಕು ತಗುಲಿತ್ತು. ಅನಿಲ್ ಕಪೂರ್‌ಗೂ ಕೊರೊನಾ ಆಗಿದೆ ಎನ್ನಲಾಗಿತ್ತು, ಆದರೆ ನಂತರ ಅವರ ವರದಿ ನೆಗೆಟಿವ್ ಬಂತು.

  ನಟ ಅಮಿತಾಬ್ ಬಚ್ಚನ್ ಅವರಿಗೂ ಕೊರೊನಾ ಆಗಿತ್ತು, ಆದರೆ ಅವರು ಗುಣವಾದರು. ಅಮಿತಾಬ್ ಕುಟುಂಬದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಆರಾಧ್ಯ ಗೆ ಕೊರೊನಾ ಸೋಂಕು ತಗುಲಿತ್ತು.

  English summary
  Actor Varun Dhawan said Amitabh Bachchan talked with him and give suggestions when Varun got COVID 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X