»   » ಐಶ್ವರ್ಯಾ ರೈ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ಐಶ್ವರ್ಯಾ ರೈ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada

ಬಾಲಿವುಡ್ ತಾರೆ ಐಶ್ವರ್ಯಾ ರೈ ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗಿದ್ದಾರೆ. ಇಷ್ಟು ದಿನ ಅವರು ತನ್ನ ಮಗಳು ಆರಾಧ್ಯ ಬಚ್ಚನ್ ಲಾಲನೆ ಪಾಲನೆಯಲ್ಲೇ ಕಳೆದುಹೋಗಿದ್ದರು. ಅವರ ಅಭಿಮಾನಿಗಳು ಇನ್ನೇನು ಐಶ್ವರ್ಯಾ ರೈ ಅವರನ್ನು ತೆರೆಯ ಮೇಲೆ ನೋಡುವ ಆಸೆಗೆ ಎಳ್ಳುನೀರು ಬಿಟ್ಟಿದ್ದರು.

ಐಶ್ವರ್ಯಾ ರೈ ಈಗ ಆಕ್ಷನ್ ಗೆ ಮರಳಿದ್ದಾರೆ. ಈ ಹಿಂದೆ ಮಣಿರತ್ನಂ ಅವರ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ಠುಸ್ ಆಯಿತು. ಐಶೂ ಅಭಿಮಾನಿಗಳಿಗೂ ಆಶಾಭಂಗವಾಯಿತು. ಇದರ ಬೆನ್ನಹಿಂದೆಯೇ ಐಶ್ವರ್ಯಾ ರೈ ಬಾಲಿವುಡ್ ಚಿತ್ರ ಪ್ರಕಟವಾಗಿ ಮತ್ತೆ ಅಭಿಮಾನಿಗಳ ಮುಖ ಅಗಲಿಸಿದೆ. [ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ]


ಐಶ್ವರ್ಯಾ ರೈ ಬಾಲಿವುಡ್ ಚಿತ್ರಕ್ಕೆ 'ಜಝ್ಬಾ' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ನಿರ್ಮಿಸಿ, ಆಕ್ಷನ್ ಕಟ್ ಹೇಳುತ್ತಿರುವವರು ಸಂಜಯ್ ಗುಪ್ತ. ಈ ಹಿಂದೆ ಅವರು ಜಾನ್ ಅಬ್ರಹಾಂ ಜೊತೆ 'ಶೂಟೌಟ್ ಅಟ್ ವಡಾಲಾ' ಚಿತ್ರವನ್ನು ನಿರ್ದೇಶಿಸಿದ್ದರು.

ಈ ಚಿತ್ರದಲ್ಲಿ ಐಶ್ವರ್ಯಾ ಅವರದು ಔಟ್ ಅಂಡ್ ಔಟ್ ಆಕ್ಷನ್ ಪಾತ್ರ. ನಮ್ಮ ಮಾಲಾಶ್ರೀ ಅವರಂತೆ ಐಶ್ವರ್ಯಾ ರೈ ಕೂಡ ಇನ್ನು ಮುಂದೆ ಡಿಶುಂ ಡಿಶುಂ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಡ್ಯೂಪ್ ಬಳಸದೆ ಐಶೂ ಅಭಿನಯಿಸುತ್ತಿರುವುದು ವಿಶೇಷ. ಅವರು ಇನ್ನು ಮುಂದೆ ಹೀರೋಯಿನ್ ಅಲ್ಲ ಹೀರೋ ಎಂದಿದ್ದಾರೆ ಚಿತ್ರದ ನಿರ್ದೇಶಕರು.

ಬಚ್ಚನ್ ಕುಟುಂಬದ ಸೊಸೆ 'ಧೂಮ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ಸ್ಟಂಟ್ ಮಾಡಿದ್ದರು. ಈಗ ಸಂಪೂರ್ಣವಾಗಿ ಆಕ್ಷನ್ ಪ್ರಧಾನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಐಶ್ವರ್ಯಾ ರೈ ಅಭಿಮಾನಿಗಳಿಗೆ ಹಾಗೂ ಆಕ್ಷನ್ ಪ್ರಿಯರಿಗೆ ಚಿತ್ರ ಖಂಡಿತ ನಿರಾಸೆಪಡಿಸಲ್ಲ ಎಂದಿದ್ದಾರೆ. (ಏಜೆನ್ಸೀಸ್)

English summary
Actress Aishwarya Rai who had taken a long break from acting owing to her motherhood duties has decided to start acting. The 'Dhoom 2' actress has signed a film titled as 'Jazba' to be produced and directed by Sanjay Gupta whose last film was 'Shoot out at Wadala' with John Abraham in the lead role.
Please Wait while comments are loading...