»   » ಅನುಷ್ಕಾ ಶರ್ಮಾಗೆ ಕನ್ನಡ ನಂಜನಗೂಡಿನ ರಸಬಾಳೆ

ಅನುಷ್ಕಾ ಶರ್ಮಾಗೆ ಕನ್ನಡ ನಂಜನಗೂಡಿನ ರಸಬಾಳೆ

Posted By:
Subscribe to Filmibeat Kannada
ಬಾಲಿವುಡ್ ತಾರೆ ಹಾಗೂ ಪಂಜಾಬಿ ಹಲ್ವಾ ಪೂರಿ ಅನುಷ್ಕಾ ಶರ್ಮಾಗೆ ಕನ್ನಡ ಭಾಷೆ ನಂಜನಗೂಡಿನ ರಸಬಾಳೆ ಸವಿದಷ್ಟೇ ಸಲೀಸಂತೆ. "ತಮ್ಮ ಮಾತೃಭಾಷೆ ಪಂಜಾಬಿಗಿಂತಲೂ ತನಗೆ ಕನ್ನಡ ಸುಲಲಿತವಾಗಿ ಬರುತ್ತದೆ. ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತೇನೆ" ಎಂದಿದ್ದಾರೆ.

ಮೂಲತಃ ಈಕೆ ಪಂಜಾಬಿ ಕುಡಿಯಾದರೂ ಬಹಳಷ್ಟು ವರ್ಷಗಳನ್ನು ಬೆಂಗಳೂರಿನಲ್ಲೇ ಕಳೆದಿದ್ದಾರೆ. ಕರ್ನಾಟಕದ ಗಾಳಿ, ಬೆಳಕು, ಕಾವೇರಿ ನೀರು ಕುಡಿಯುವುದರ ಜೊತೆಗೆ ಕನ್ನಡ ಭಾಷೆಯನ್ನೂ ಅರಗಿಸಿಕೊಂಡಿದ್ದಾರೆ.

ಈಕೆ ಬಾಲಿವುಡ್ ತಾರೆಯಾದರೂ ನನಗೆ ಕನ್ನಡ ಬರುತ್ತದೆ ಎಂದು ಹೇಳಿಕೊಂಡು ದೊಡ್ಡತನ ಮೆರೆದಿದ್ದಾರೆ. ಆದರೆ ಈ ಹಿಂದೊಮ್ಮೆ ಕನ್ನಡ ಚಿತ್ರದ ಮೂಲಕವೇ ಬಾಲಿವುಡ್ ಗೆ ಅಡಿಯಿಟ್ಟ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಮಾತ್ರ ಕನ್ನಡದಲ್ಲಿ ಮಾತನಾಡಿದರೆ ತನಗೆ ಗೊತ್ತೇ ಇಲ್ಲದಂತೆ ನಾಟಕ ಮಾಡುತ್ತಾರೆ.

ಹೋಗ್ಲಿ ಬಿಡಿ ಈಗ ಆ ವಿಷಯ ಯಾಕೆ. ಒಟ್ಟಿನಲ್ಲಿ ಅನುಷ್ಕಾ ಶರ್ಮಾ ನನಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಹೇಳಿದ್ದಾರಲ್ಲಾ ಅಷ್ಟೇ ಸಾಕು. ಈ ಹಿಂದೊಮ್ಮೆ ಶಾರುಖ್ ಖಾನ್ ಕೂಡ ತಾನು ಬೆಂಗಳೂರಿನಲ್ಲೇ ಕಳೆದಿದ್ದೆ. ಹಾಗಾಗಿ ನನಗೂ ಕನ್ನಡ ತೋಡಾ ತೋಡಾ ಆತಾಹೈ ಎಂದಿದ್ದ.

ಅನುಷ್ಕಾ ಶರ್ಮಾ ಏನೋ ಕನ್ನಡ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರು ಈಕೆಯ ಕಾಲ್ ಶೀಟ್ ಗಾಗಿ ಏಕೆ ಒಮ್ಮೆ ಪ್ರಯತ್ನಿಸಬಾರದೋ? 'ಬ್ಯಾಂಡ್ ಬಾಜಾ ಬರಾತ್' ಬೆಡಗಿ ಇಲ್ಲೂ ಬ್ಯಾಂಡ್ ಬಜಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. (ಏಜೆನ್ಸೀಸ್)

English summary
Bollywood diva Anushka Sharma is basically a Punjabi kudi. But little less we knew that she is not very fluent in her mother-tongue rather she is good in Kannada language. Yes, as she spent many years living in Bangalore, the capital of Karnataka, the actress is fluent in Kannada.
Please Wait while comments are loading...