»   » ಹೆಣ್ಣು ಮಗುವಿಗೆ ಜನ್ಮ ನೀಡಿದ 'ಗಜಿನಿ' ನಟಿ ಆಸಿನ್

ಹೆಣ್ಣು ಮಗುವಿಗೆ ಜನ್ಮ ನೀಡಿದ 'ಗಜಿನಿ' ನಟಿ ಆಸಿನ್

Posted By:
Subscribe to Filmibeat Kannada

ಬಹುಭಾಷಾ ನಟಿ ಆಸಿನ್ ತಾಯಿಯಾಗಿದ್ದಾರೆ. ಮೈಕ್ರೋಮ್ಯಾಕ್ಸ್ ಕಂಪನಿಯ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನ ವಿವಾಹವಾಗಿದ್ದ ನಟಿ ಈಗ ಅಮ್ಮನಾಗಿ ಪ್ರಮೋಷನ್ ಪಡೆದುಕೊಂಡಿದ್ದಾರೆ. ರಾಹುಲ್ ಶರ್ಮಾ ಅಪ್ಪನಾಗಿದ್ದಾರೆ.

ಈ ಸಂತಸವನ್ನ ಸ್ವತಃ ರಾಹುಲ್ ಶರ್ಮಾ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಕಳೆದ 9 ತಿಂಗಳಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೇವು ಎಂದು ಭಾವುಕರಾಗಿದ್ದಾರೆ.

ಇನ್ನು ನಟಿ ಆಸಿನ್ ಮತ್ತು ರಾಹುಲ್ ಶರ್ಮಾ ದಂಪತಿಗೆ ಬಾಲಿವುಡ್ ಮಂದಿ ಶುಭಾಶಯ ಕೋರುತ್ತಿದ್ದು, ನಟ ಅಕ್ಷಯ್ ಕುಮಾರ್ ಆಸಿನ್ ಮಗುವಿನ ಫೋಟೋ ರಿವಿಲ್ ಮಾಡಿದ್ದಾರೆ. ಮುಂದೆ ನೋಡಿ.....

ಹೆಣ್ಣು ಮಗುವಿಗೆ ಜನ್ಮ ನೀಡಿದ ಆಸಿನ್

ಮಂಗಳವಾರ ನಟಿ ಆಸಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪತಿ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಶುಭಕೋರಿದ ಅಕ್ಷಯ್ ಕುಮಾರ್

ನಟಿ ಆಸಿನ್ ಮತ್ತು ರಾಹುಲ್ ಶರ್ಮಾ ದಂಪತಿಗೆ ಆತ್ಮೀಯ ಸ್ನೇಹಿತರಾಗಿರುವ ನಟ ಅಕ್ಷಯ್ ಕುಮಾರ್, ಆಸ್ಪತ್ರೆಗೆ ಹೋಗಿ ದಂಪತಿಗೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೇ, ಮಗುವಿನ ಮೊದಲ ಫೋಟೋ ಕೂಡ ಬಹಿರಂಗಪಡಿಸಿದ್ದಾರೆ.

ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

ವಿಶೇಷ ಅಂದ್ರೆ, ಇದೇ ತಿಂಗಳು 26 ರಂದು ನಟಿ ಆಸೀನ್ ಅವರ 31ನೇ ಹುಟ್ಟುಹಬ್ಬವಿದೆ. ತಮ್ಮ ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಆಸಿನ್ ಕುಟುಂಬಕ್ಕೆ ಮತ್ತಷ್ಟು ಸಂಭ್ರಮ ಹೆಚ್ಚು ಮಾಡಿದೆ.

2016, ಜನವರಿಯಲ್ಲಿ ವಿವಾಹವಾಗಿದ್ದ ನಟಿ

2016ರ ಜನವರಿ ತಿಂಗಳಿನಲ್ಲಿ ನಟಿ ಆಸಿನ್ ಮತ್ತು ರಾಹುಲ್ ಶರ್ಮಾ ವಿವಾಹವಾಗಿದ್ದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದರು. ಈಗ 22 ತಿಂಗಳು ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಚಿತ್ರರಂಗದಿಂದ ದೂರವಿರುವ ಆಸಿನ್

2001 ರಲ್ಲಿ ಮಲಯಾಳಂ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಆಸಿನ್ ನಂತರ ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಗುರುತಿಸಿಕೊಂಡರು. 2008 ರಲ್ಲಿ ಅಮೀರ್ ಖಾನ್ ಅಭಿನಯದ 'ಗಜಿನಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. 'ಲಂಡನ್ ಡ್ರೀಮ್ಸ್', 'ರೆಡಿ', 'ಹೌಸ್ ಫುಲ್', 'ಬೋಲ್ ಬಚ್ಚನ್', 'ಕಿಲಾಡಿ 786', 'ಆಲ್ ಈಸ್ ವೆಲ್' ಅಂತಹ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

English summary
Actress Asin Thottumkal and her businessman husband Rahul Sharma were blessed with a daughter on Tuesday, 24 October. ಬಹುಭಾಷಾ ನಟಿ ಆಸಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X