For Quick Alerts
  ALLOW NOTIFICATIONS  
  For Daily Alerts

  ಬಿಪಾಶ ಪ್ರೆಗ್ನೆಂಟ್ ಅಂತೆ.! ಶುಭಾಶಯ ಹೇಳುವುದಕ್ಕು ಮುಂಚೆ ಈ ಸ್ಟೋರಿ ಓದಿ

  By Bharath Kumar
  |

  ಬಾಲಿವುಡ್ ನಟಿ ಬಿಪಾಶ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಪಾಶ ಪ್ರೆಗ್ನೆಂಟ್ ಎಂಬ ಸುದ್ದಿ ವೈರಲ್ ಆಯಿತು. ಕಳೆದ ವರ್ಷ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ ಚೊಚ್ಚಲ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎಂಬ ಸಂತಸ ಬಾಲಿವುಡ್ ನಲ್ಲಿ ಸೃಷ್ಟಿಯಾಯಿತು.

  ಆದ್ರೆ, ಈ ಸಂಭ್ರಮ ಹೆಚ್ಚು ಕಾಲ ಇರಲಿಲ್ಲ. ಯಾಕಂದ್ರೆ, ಅದು ನಿಜ ಅಲ್ಲ, ಸುಳ್ಳು ಸುದ್ದಿ ಎಂದು ಗೊತ್ತಾಯಿತು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಬಿಪಾಶ ಅವರ ವಕ್ತಾರ '' ಕರಣ್ ಸಿಂಗ್ ಗ್ರೋವರ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, ಅವರನ್ನ ಬಿಪಾಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ, ಬಿಪಾಶ ಗರ್ಭೀಣಿ ಎಂಬ ಸುದ್ದಿ ಹರಿಡಿದೆ. ಇದು ಬೇಸರದ ಸಂಗತಿ'' ಎಂದಿದ್ದಾರೆ.

  ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಿಪಾಶಾ ದಂಪತಿಗೆ ಫುಲ್ ಕ್ಲಾಸ್.!ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಿಪಾಶಾ ದಂಪತಿಗೆ ಫುಲ್ ಕ್ಲಾಸ್.!

  ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ಬಿಪಾಶ '' ನಾನು ಮಗುವಿಗೆ ಜನ್ಮ ನೀಡುವುದು ಅತಿ ಖುಷಿಯಾದ ವಿಚಾರ. ಆದ್ರೆ, ನಿಮ್ಮನ್ನ ನಿರಾಸೆ ಮಾಡುತ್ತಿದ್ದೇನೆ. ಸದ್ಯಕ್ಕೆ ನಾನು ತಾಯಿಯಾಗುತ್ತಿಲ್ಲ. ಅಂತಹ ಯೋಜನೆಯೂ ಈಗಿಲ್ಲ. ಅಂತಹ ಸಂದರ್ಭ ಬಂದರೇ, ನಾನು ಎಲ್ಲರೊಂದಿಗೂ ಹಂಚಿಕೊಳ್ಳುತ್ತೇನೆ'' ಎಂದು ವದಂತಿಗೆ ಬ್ರೇಕ್ ಹಾಕಿದ್ದಾರೆ.

  ಇದಕ್ಕು ಮುಂಚೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ಬಿಪಾಶ ''ನಮ್ಮಿಬ್ಬರಿಗೂ ಮಗು ಅಂದ್ರೆ ಇಷ್ಟ. ಆದ್ರೆ, ಇನ್ನು ಸ್ವಲ್ಪ ದಿನ ಅಂತಹ ಯೋಚನೆ ಇಲ್ಲ. ಯಾಕಂದ್ರೆ, ಮಗು ಆದ್ಮೇಲೆ ಸಂಪೂರ್ಣವಾಗಿ ಮಗುವಿಗೆ ಸಮಯ ನೀಡಬೇಕು. ಹೀಗಾಗಿ ನಾವು ನಿರ್ಧರಿಸಿದ್ದೇವೆ'' ಎಂದು ಹೇಳಿಕೊಂಡಿದ್ದರು.

  ಬಿಕಿನಿಯಲ್ಲಿ ಗಮನಸೆಳೆದ 38ರ ಹಾಟ್ ಬ್ಯೂಟಿ ಬಿಪಾಶಾ!ಬಿಕಿನಿಯಲ್ಲಿ ಗಮನಸೆಳೆದ 38ರ ಹಾಟ್ ಬ್ಯೂಟಿ ಬಿಪಾಶಾ!

  Actress Bipasha Basu not pregnant

  ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶ ಬಸು 2016ರ ಏಪ್ರಿಲ್ ತಿಂಗಳಲ್ಲಿ ವಿವಾಹವಾಗಿದ್ದರು. ಬಾಲಿವುಡ್ ನ ಸೂಪರ್ ದಂಪತಿಗಳ ಪೈಕಿ ಇವರಿಬ್ಬರ ಜೋಡಿ ಕೂಡ ಒಂದಾಗಿದೆ.

  English summary
  The latest reports of Bipasha Basu's pregnancy, when she was clicked outside the hospital with her husband, Karan Singh Grover, on Tuesday. However, the actress refuted the rumours and told SpotboyE, "I am not pregnant, please end this speculation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X