»   » 'ಟಚ್ ಮೈ ಬಾಡಿ' ಎಂದ ಹಾಟ್ ಬ್ಯೂಟಿ ಬಿಪಾಶಾ ಬಸು

'ಟಚ್ ಮೈ ಬಾಡಿ' ಎಂದ ಹಾಟ್ ಬ್ಯೂಟಿ ಬಿಪಾಶಾ ಬಸು

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಹಾಟ್ ಅಂಡ್ ಸೆಕ್ಸಿ ಚೆಲುವೆಯರಲ್ಲಿ ಬಿಪಾಶಾ ಬಸು ಸಹ ಒಬ್ಬರು. ಬಿಕಿನಿ ಸನ್ನಿವೇಶಗಳಿಂದ ಹಿಡಿದು ಚುಂಬನ ದೃಶ್ಯಗಳಲ್ಲಿ ತನ್ನದೇ ಆದಂತಹ ಮೊಹರು ಒತ್ತಿದ ಬೆಡಗಿ. ಇದೀಗ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಬಿಪಾಶಾ ಅಭಿನಯದ 'ಅಲೋನ್' ಚಿತ್ರ ಬಾಲಿವುಡ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಜನವರಿ 26, 2015ರಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಇದೀಗ ಈ ಚಿತ್ರದ ಹಾಟ್ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಗಿದೆ. ಬಿಪಾಶಾ ಮೈಮರೆತು ಅಭಿನಯಿಸಿರುವುದನ್ನು ಈ ಹಾಟ್ ವಿಡಿಯೋದದಲ್ಲಿ ನೋಡಬಹುದು. [ಹಾಟ್ ಅಂಡ್ ಸೆಕ್ಸಿ ಅವತಾರದಲ್ಲಿ ತಾರೆ ಬಿಪಾಶಾ ಬಸು]

Actress Bipasha Basu Touch my body in alone

ಸೆಕ್ಸ್ ಹಾಗೂ ಹಾರರ್ ಮಿಳಿತ ಅಂಶಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗಿದೆ. ತನ್ನ ವೃತ್ತಿ ಬದುಕಿನಲ್ಲಿ ಅತ್ಯಂತ ಶೃಂಗಾರಭರಿತವಾಗಿ, ಬೋಲ್ಡ್ ಆಗಿ ಅಭಿನಯಿಸಿದ ಚಿತ್ರ ಇದು ಎಂದು ಸ್ವತಃ ಬಿಪಾಶಾ ಬಸು ಹೇಳಿರುವುದು ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಸಿದೆ.

ಭೂಷಣ್ ಪಟೇಲ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಬಿಪಾಶಾ ಜೊತೆಗೆ ಕರಣ್ ಸಿಂಗ್ ಗ್ರೋವರ್ ಈ ಬಾರಿ ತೆರೆ ಹಂಚಿಕೊಂಡಿದ್ದಾರೆ. ಜಾಕೀರ್ ಹುಸೇನ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸ್ಟಿಲ್ಸ್ ನೋಡಿದರೆ ಶೃಂಗಾರ ಹಾಗೂ ಭಯಾನಕ ರಸಗಳ ಸಂಗಮ ಈ ಚಿತ್ರ ಎಂಬುದು ಭಾಸವಾಗುತ್ತದೆ.

ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ನಡುವಿನ ಹಾಟ್ ಹಾಟ್ ಸನ್ನಿವೇಶಗಳು ಚಿತ್ರದಲ್ಲಿ ಎಲ್ಲರ ಗಮನಸೆಳೆಯುತ್ತಿವೆ. ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕರಣ್ ಸಿಂಗ್ ಗ್ರೋವರ್ ಅವರು 'ಅಲೋನ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ.

English summary
Titled ‘Touch my body’, there is a party number in the film where sexy Bipasha dances with hero Karan on the dance floor. In the upcoming horror flick 'Alone' where she plays as a congenial twins, Bips is soaring the temperatures high with her dare-bare acts.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada