Don't Miss!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- News
Occupancy Certificate Fraud: ಆಂತರಿಕ ತನಿಖೆ ನಡೆಸಲು ಬಿಬಿಎಂಪಿ ಕಟ್ಟುನಿಟ್ಟಿನ ನಿರ್ದೇಶನ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಣ್ವೀರ್ ಸಿಂಗ್ ನಗ್ನ ಅವತಾರಕ್ಕೆ ಪತ್ನಿ ದೀಪಿಕಾ ಶಾಕಿಂಗ್ ಕಮೆಂಟ್!
ನಟ ರಣ್ವೀರ್ ಸಿಂಗ್ ಸದಾ ತಮ್ಮ ವಿಭಿನ್ನ ಅವತಾರದಿಂದಲೇ ಸದ್ದು ಮಾಡುತ್ತಾ ಇರುತ್ತಾರೆ. ರಣ್ವೀರ್ ಸಿಂಗ್ ಕಾಸ್ಟ್ಯೂಮ್‌ಗಳು ಸದಾ ವಿಭಿನ್ನ ಮತ್ತು ವಿಚಿತ್ರವಾಗಿ ಇರುತ್ತವೆ. ಆಗಾಗ ಆ ವಿಚಿತ್ರ ಕಾಸ್ಟ್ಯೂಮ್‌ಗಳಿಂದಲೇ ಟ್ರೋಲ್ ಕೂಡ ಆಗುತ್ತಾರೆ. ಆದರೆ ಈಗ ಬಟ್ಟೆ ಇಲ್ಲದೆ ಬಂದು ಚರ್ಚೆಗೆ ಗ್ರಾಸವಾಗಿದ್ದಾರೆ.
ಹೌದು, ಕೆಲವು ದಿನಗಳಿಂದ ಎಲ್ಲಿ ನೋಡದರೂ ಇದೇ ಸುದ್ದಿ. ರಣ್ವೀರ್ ಸಿಂಗ್ ಬೋಲ್ಡ್ ಅವತಾರದ ಬಗ್ಗೆ ನಾನಾ ಚರ್ಚೆಗಳು ಹುಟ್ಟಿಕೊಂಡಿವೆ. ಯಾಕೆಂದರೆ ನಟ ರಣ್ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ಮಾಡಿದ್ದಾರೆ.
ದೀಪಿಕಾ
To
ಕತ್ರಿನಾ
ಕೈಫ್:
ಪಾರ್ಟಿಗಳಲ್ಲಿ
ಡಾನ್ಸ್
ಮಾಡಲು
ಕೋಟಿ
ಕೋಟಿ
ಚಾರ್ಜ್!
ಮ್ಯಾಗಜೀನ್ ಒಂದಕ್ಕಾಗಿ ಸ್ಟಾರ್ ನಟನೊಬ್ಬ ಈ ರೀತಿ ಬೆತ್ತಲಾಗಿ ಕಾಣಿಸಿಕೊಂಡಿರುವ ಅಚ್ಚರಿ ಮೂಡಿಸಿದೆ. ನಟ ರಣ್ವೀರ್ ಸಿಂಗ್ ಈ ರೀತಿ ಪೋಸ್ ನೀಡಿರುವುದು ಬಹಳ ಸದ್ದು ಮಾಡುತ್ತಿವೆ. ಈ ಬಗ್ಗೆ ಈಗ ರಣ್ವೀರ್ ಪತ್ನಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಪೂರ್ಣ
ಬೆತ್ತಲಾದ
ರಣ್ವೀರ್
ಸಿಂಗ್;
ದೀಪಿಕಾ
ಪಡುಕೋಣೆ
ಪತಿರಾಯನ
ಸಾಹಸಕ್ಕೆ
ಫ್ಯಾನ್ಸ್
ಶಾಕ್!

ರಣ್ವೀರ್ ಸಿಂಗ್ ಲುಕ್ ವೈರಲ್!
'ಪೇಪರ್' ಹೆಸರಿನ ಮ್ಯಾಗಜೀನ್‌ವೊಂದಕ್ಕೆ ಸಂಪೂರ್ಣ ಬೆತ್ತಲಾಗಿ ನಟ ರಣ್ವೀರ್ ಸಿಂಗ್ ಫೋಟೊಶೂಟ್ ಮಾಡಿಸಿದ್ದಾರೆ. ರಣ್ವೀರ್ ಸಿಂಗ್‌ರ ಈ ಬೆತ್ತಲೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ರಣ್ವೀರ್ ಸಿಂಗ್‌ರ ಈ ಬೆತ್ತಲೆ ಚಿತ್ರಗಳನ್ನು ಹಲವರು ಮೆಚ್ಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ಏನು?
ನಟ ರಣ್ವೀರ್ ಸಿಂಗ್ ಅವರಂತೆ ಪತ್ನಿ ದೀಪಿಕಾ ಪಡುಕೋಣೆ ಕೂಡ ಬಾಲಿವುಡ್‌ನ ಸೂಪರ್ ಸ್ಟಾರ್ ನಟಿ. ರಣ್ವೀರ್ ನಗ್ನ ಫೋಟೊಶೂಟ್ ಬಗ್ಗೆ ಸಾಕಷ್ಟು ತಾರೆಯರು ಮಾತನಾಡಿದ್ದಾರೆ. ಆದರೆ ಎಲ್ಲರ ಚಿತ್ತ ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಮೇಲಿತ್ತು. ದೀಪಿಕಾ ಏನು ಹೇಳ್ತಾರೆ? ಎಂಬ ಪ್ರಶ್ನೆ ಎದ್ದಿತ್ತು. ಈಗ ಈ ಬಗ್ಗೆ ದೀಪಿಕಾ ಪಡುಕೋಣೆ ಮೌನ ಮುರಿದಿದ್ದಾರೆ. ಪತಿಯ ಪರವಾಗಿಯೇ ನಿಂತುಕೊಂಡಿದ್ದಾರೆ.

ರಣ್ವೀರ್ ಫೋಟೊ ಮೆಚ್ಚಿದ ದೀಪಿಕಾ!
ರಣ್ವೀತ್ ಈ ಅವತಾರ ಎಲ್ಲೆಲ್ಲೂ ಭಾರಿ ಚರ್ಚೆಯಾಗುತ್ತಿದ್ದು, ಮಾಧ್ಯಮ ಒಂದಕ್ಕೆ ಪ್ರತಿಕ್ರಿಯೆಸಿದ ನಟಿ ದೀಪಿಕಾ ಪಡುಕೋಡೆ ಪತಿಯ ಪರವಾಗಿ ನಿಂತಿದ್ದಾರೆ. ಅಲ್ಲದೇ ಇದು ಪಬ್ಲಿಶ್ ಆಗುವ ಮೊದಲೇ ಅವರು ನೋಡಿ ಮೆಚ್ಚಿಕೊಂಡಿದ್ದರಂತೆ. " ಇದು ವಿಭಿನ್ನ ಕಾನ್ಸೆಪ್ಟ್ ಆದ ಕಾರಣ ಬಹಳ ಇಷ್ಟವಾಗಿದೆ. ಈ ಫೋಟೊ ಹಂಚಿಕೊಳ್ಳುವ ಮೊದಲೇ ನಾನು ನೋಡಿದ್ದೇನೆ. ರಣ್ವೀರ್ ಸದಾ ವಿಭಿನ್ನವಾದನ್ನು ಮಾಡಲು ಇಚ್ಛಿಸುತ್ತಾರೆ. ಅದಕ್ಕೆ ನನ್ನ ಬೆಂಬಲವಿದೆ." ಎಂದು ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿದೆ.

ರಣ್ವೀರ್ ಸಿಂಗ್‌ಗೆ ಬಾಲಿವುಡ್ ಸಾಥ್!
ಇನ್ನು ರಣ್ವೀರ್ ಸಿಂಗ್‌ರ ಬೆತ್ತಲೆ ಚಿತ್ರಗಳಿಗೆ ಮಿಶ್ರ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ನೆಗೆಟಿವ್ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಆದರೆ ಬಹುತೇಕ ಕಲಾವಿದರು ರಣ್ವೀರ್ ಸಿಂಗ್ ಪರವಾಗಿ ನಿಂತು, ಅವರ ಪ್ರಯತ್ನಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಇತ್ತೀಚೆಗಷ್ಟೇ ರಾಖಿ ಸಾವಂತ್, ಅರ್ಜುನ್ ಕಪೂರ್ ಸೇರಿದಂತೆ, ಅದರಲ್ಲಿ ತಪ್ಪೇನಿದೆ ಎಂದು ಹೇಳಿದ್ದರು.