»   » ದೀಪಿಕಾ ಈ ಫೋಟೋ ಈಗ ವಿವಾದದ ಕೇಂದ್ರಬಿಂದು

ದೀಪಿಕಾ ಈ ಫೋಟೋ ಈಗ ವಿವಾದದ ಕೇಂದ್ರಬಿಂದು

By: ಉದಯರವಿ
Subscribe to Filmibeat Kannada

ಇದುವರೆಗೂ ಬಾಲಿವುಡ್ ಇರಲಿ ಹಾಲಿವುಡ್ ನಲ್ಲೂ ಯಾವ ನಟಿಯೂ ಕೊಡದಂತಹ ಹೇಳಿಕೆಯನ್ನು ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಕೊಡುವ ಮೂಲಕ ಎಲ್ಲರೂ ಎದೆ ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಅಬ್ಬಬ್ಬಾ ಏನು ಸ್ಟೇಟ್ ಮೆಂಟ್ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ ಇನ್ನೂ ಕೆಲವರು ದೀಪಿಕಾ ಆ ರೀತಿ ಹೇಳಬಾರದಿತ್ತು ಎಂದು ಮೂಗು ಮುರಿದಿದ್ದಾರೆ. ಆಂಗ್ಲ ಪತ್ರಿಕೆಯೊಂದು ಶಾರುಖ್ ಜೊತೆಗಿನ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಬಿಡುಗಡೆ ಸಂದರ್ಭದ ಒಂದು ವಿಡಿಯೋ ಹಾಕಿತ್ತು.

ಬಿಳಿ ವರ್ಣದ ಅನಾರ್ಕಲಿ ಸೂಟ್ ಮತ್ತು ಆಮ್ರಪಾಲಿ ಆಭರಣಗಳನ್ನು ತೊಟ್ಟ ದೀಪಿಕಾ ಅವರ ವಿಡಿಯೋವನ್ನು ದಿನಪತ್ರಿಕೆ ತಮ್ಮ ವೆಬೈಸೈಟ್‌ನಲ್ಲಿ ಹಾಕಿತ್ತು. ಆ ವಿಡಿಯೋ ಬಗ್ಗೆ ಬರೆಯಲಾಗಿದ್ದ ಸುದ್ದಿ ಏನೆಂದರೆ- 'ಓಹ್ ಮೈ ಗಾಡ್! ದೀಪಿಕಾ ಪಡುಕೋಣೆ ಅವರ ಕ್ಲೀವೇಜ್ ಶೋ' ಎಂದು. ಈ ಬಗ್ಗೆ ಕೆಂಡಾಮಂಡಲವಾದ ದೀಪಿಕಾ ಅಂದದ್ದೇನೆಂದರೆ...

ಹೌದು ನಾನು ಮಹಿಳೆ. ನನಗೆ ಸ್ತನಗಳಿವೆ...

ಹೌದು ನಾನು ಮಹಿಳೆ. ನನಗೆ ಸ್ತನಗಳಿವೆ...ಎದೆಸೀಳೂ ಇದೆ. ಇದರಿಂದ ನಿಮಗೇನಾದರೂ ತೊಂದರೆ ಇದೆಯೇ? ತಮ್ಮನ್ನು ಭಾರತದ ಅಗ್ರ ದಿನಪತ್ರಿಕೆ ಎಂದು ಹೇಳಿಕೊಳ್ಳುವವರಿಗೆ ಇದು ವಾರ್ತೆಯೇ? ಮಹಿಳೆಯರನ್ನು ಗೌರವಿಸಲು ಗೊತ್ತಿಲ್ಲದಿದ್ದರೆ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡಬೇಡಿ...!" ಎಂದಿದ್ದರು.

ದೀಪಿಕಾ ಬೋಲ್ಡ್ ಹೇಳಿಕೆಗೆ ಮೆಚ್ಚುಗೆ

ಒಟ್ಟಾರೆ ದೀಪಿಕಾ ಅವರ ಬೋಲ್ಡ್ ಹೇಳಿಕೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಸರಿ ಅದೆಲ್ಲಾ ಆಯಿತು ಮುಂದೊಂದು ದಿನ ಯಾರೋ "ಓ ಮೈ ಗಾಡ್ ದೀಪಿಕಾರ ಪ್ಯಾಂಟಿ ಶೋ" ಎಂದು ಹಾಕಿದರೆ. ಆಗಲೂ ಇದೇ ದೀಪಿಕಾ ಇದೇ ರೀತಿಯ ಹೇಳಿಕೆ ಕೊಡ್ತಾರಾ? ಎಂದು ಕೆಲವರು ಗರಂ ಆಗಿದ್ದಾರೆ.

1,500ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ

ದೀಪಿಕಾ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದ್ದರೂ 1,500ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ. #IStandWithDeepikaPadukone ಎಂಬ ಹ್ಯಾಷ್ ಟ್ಯಾಗ್ ಸಹ ಟ್ರೆಂಡಿಂಗ್ ನಲ್ಲಿದೆ. ಕೊನೆಗೆ ಇದೂ ಒಂದು ಸುದ್ದಿನಾ ಎಂಬಲ್ಲಿಗೆ
ಈ ವಿವಾದ ಬಂದು ನಿಂತಿದೆ. ಒಂದಷ್ಟು ಟ್ವೀಟ್ ಗಳನ್ನು ನೋಡಿ.

ದೀಪಿಕಾ ಪಡುಕೋಣೆ ಟ್ವೀಟ್

ಹೌದು ನಾನು ಮಹಿಳೆ. ನನಗೆ ಸ್ತನಗಳಿವೆ...ಎದೆಸೀಳೂ ಇದೆ. ಇದರಿಂದ ನಿಮಗೇನಾದರೂ ತೊಂದರೆ ಇದೆಯೇ?

ದೀಪಿಕಾದು ಸ್ಟಂಟಾ ಸ್ಟೇಟ್ ಮೆಂಟಾ?

ಅವರ ಫೈಡಿಂಗ್ ಫ್ಯಾನ್ನಿ ಚಿತ್ರ ಬಿಡುಗಡೆಯಾಗಿರುವುದು. ಇದೇ ಸಂದರ್ಭದಲ್ಲಿ ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು. ಇದು ಸ್ಟಂಟಾ ಅಥವಾ ಸ್ಟೇಟ್ ಮೆಂಟಾ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ಇದಕ್ಕೂ ಮುನ್ನ ಸಾಕಷ್ಟು ಪತ್ರಿಕೆಗಳು ಅವರ ಎದೆಸೀಳಿನ ಬಗ್ಗೆ ಬರೆದಿವೆ. ಆಗೆಲ್ಲಾ ದೀಪಿಕಾ ಚಕಾರವೆತ್ತಿರಲಿಲ್ಲ ಎಂಬುದು ಗಮನಾರ್ಹ.

English summary
After an enraged Deepika Padukone replied to a Twitter post made by a daily regarding her cleavage, tweeple took the matter in their stride and #IStandWithDeepikaPadukone started trending on Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada