For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಇಶಾ ಗುಪ್ತ ಮದುವೆ.! ಹೌದೇನು.?

  By Harshitha
  |

  ಇತ್ತೀಚೆಗಂತೂ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಸಿಪ್ ಕಾಲಂನಲ್ಲೇ ಹೆಚ್ಚು ಸುದ್ದಿ ಆಗ್ತಿದ್ದಾರೆ. ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ರನ್ನ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗುಸುಗುಸು ಮೊದಲು ಕೇಳಿಬಂದಿತ್ತು.

  ಆದ್ರೀಗ, ಹಾರ್ದಿಕ್ ಪಾಂಡ್ಯ ಹೆಸರು ಬಾಲಿವುಡ್ ಬ್ಯೂಟಿ ಇಶಾ ಗುಪ್ತ ಸುತ್ತ ಗಿರಕಿ ಹೊಡೆಯುತ್ತಿದೆ. ಎಲ್ಲಿ ಅವ್ರಾಮ್ ನಿಂದ ಬ್ರೇಕಪ್ ಆದ್ಮೇಲೆ ಇಶಾ ಗುಪ್ತರನ್ನ ಹಾರ್ದಿಕ್ ಪಾಂಡ್ಯ ಲವ್ ಮಾಡ್ತಿದ್ದಾರೆ ಎನ್ನಲಾಗಿದೆ.

  ಪಾರ್ಟಿಯೊಂದರಲ್ಲಿ ಮೀಟ್ ಮಾಡಿದ ಬಳಿಕ ಇಶಾ ಗುಪ್ತ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಸ್ನೇಹ ಬೆಳೆದಿದೆ. ಅದೇ ಸ್ನೇಹ ಇದೀಗ ಪ್ರೀತಿಗೆ ತಿರುಗಿದೆ ಎಂಬುದು ಗಾಸಿಪ್ ಪಂಡಿತರ ಮಾತು.

  ಇದರಲ್ಲಿ ಸುಳ್ಳೆಷ್ಟು.? ನಿಜವೆಷ್ಟು.? ಹಾರ್ದಿಕ್ ಪಾಂಡ್ಯ ಜೊತೆ ಇಶಾ ಗುಪ್ತ ಡೇಟ್ ಮಾಡ್ತಿರೋದು ನಿಜವೇ.? ಈ ಪ್ರಶ್ನೆಗಳಿಗೆ ಸ್ವತಃ ಇಶಾ ಗುಪ್ತ ಸ್ಪಷ್ಟನೆ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಮದುವೆ ಬಗ್ಗೆ ಇಶಾ ಗುಪ್ತ ಮಾತು...

  ಮದುವೆ ಬಗ್ಗೆ ಇಶಾ ಗುಪ್ತ ಮಾತು...

  ''ಸದ್ಯಕ್ಕೆ ನಾನು ಮದುವೆ ಆಗುತ್ತಿಲ್ಲ. ಮದುವೆ ಆಗುವಾಗ ಖಂಡಿತ ನಾನು ಹೇಳುವೆ'' ಎಂದಷ್ಟೇ ಹೇಳುವ ಮೂಲಕ ಎಲ್ಲಾ ರೂಮರ್ ಗಳಿಗೂ ಪ್ರತಿಕ್ರಿಯೆ ಕೊಟ್ಟಿದ್ದಾರೆ ಇಶಾ ಗುಪ್ತ.

  ಛೇ.. ಕನ್ನಡಿಗ ಕೆ.ಎಲ್.ರಾಹುಲ್ 'ಬ್ರೋ'ಗೆ ಹೀಗಾಗಬಾರದಿತ್ತು.!ಛೇ.. ಕನ್ನಡಿಗ ಕೆ.ಎಲ್.ರಾಹುಲ್ 'ಬ್ರೋ'ಗೆ ಹೀಗಾಗಬಾರದಿತ್ತು.!

  ಇನ್ನೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ತಿದ್ದಾರೆ.!

  ಇನ್ನೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ತಿದ್ದಾರೆ.!

  ಹಾಗ್ನೋಡಿದ್ರೆ, ಇಶಾ ಗುಪ್ತ ಹಾಗೂ ಹಾರ್ದಿಕ್ ಪಾಂಡ್ಯ ಇನ್ನೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕಮಿಟ್ಮೆಂಟ್ ಗೆ ಇಬ್ಬರೂ ರೆಡಿ ಆಗಿಲ್ಲ.

  ಮಾಧ್ಯಮಗಳ ಕಣ್ತಪ್ಪಿಸಿ....

  ಮಾಧ್ಯಮಗಳ ಕಣ್ತಪ್ಪಿಸಿ....

  ವರದಿಗಳ ಪ್ರಕಾರ, ಇಶಾ ಗುಪ್ತ ಹಾಗೂ ಹಾರ್ದಿಕ್ ಪಾಂಡ್ಯ ಆಗಾಗ ಒಟ್ಟಿಗೆ ಊಟ ಮಾಡಲು ಹೋಟೆಲ್ ಗಳಿಗೆ ಭೇಟಿ ಕೊಡುತ್ತಿದ್ದಾರೆ. ತಮ್ಮ ರಿಲೇಶನ್ ಶಿಪ್ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆಗಬಾರದು ಎಂಬ ಕಾರಣಕ್ಕೆ, ಎಲ್ಲಾ ಪ್ಲಾನ್ ಗಳನ್ನೂ ಗುಟ್ಟಾಗಿ ಮಾಡ್ತಿದ್ದಾರಂತೆ.

  ಕ್ರಿಕೆಟರ್-ನಟಿಯರ ಪ್ರೇಮ್ ಕಹಾನಿ

  ಕ್ರಿಕೆಟರ್-ನಟಿಯರ ಪ್ರೇಮ್ ಕಹಾನಿ

  ಹಾಗ್ನೋಡಿದ್ರೆ, ಕ್ರಿಕೆಟರ್ ಹಾಗೂ ನಟಿಯರ ನಡುವಿನ ಪ್ರೇಮ್ ಕಹಾನಿ ಹೊಸದಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟ್ಯಾಗೋರ್, ಯುವರಾಜ್ ಸಿಂಗ್-ಹಜೇಲ್ ಕೀಚ್, ಜಹೀರ್ ಖಾನ್-ಸಾಗರೀಕ ಘಟ್ಗೆ, ಹರ್ಭಜನ್ ಸಿಂಗ್-ಗೀತಾ ಬಸ್ರಾ, ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮ ಜೋಡಿಯಂತೆ ಹಾರ್ದಿಕಾ ಪಾಂಡ್ಯ ಹಾಗೂ ಇಶಾ ಗುಪ್ತ ಕೂಡ ಆಗಬಹುದು.

  English summary
  Bollywood Actress Esha Gupta speaks about her marriage rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X