ನಟಿ ಫಾತಿಮಾ ಸನಾ ಶೇಖ್ ಮತ್ತು ವಿಕ್ರಾಂತ್‌ಗೆ ಕೊರೊನಾ ಪಾಸಿಟಿವ್
ಸೆಲೆಬ್ರಿಟಿ ಲೋಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 'ದಂಗಲ್' ಖ್ಯಾತಿಯ ಫಾತಿಮಾ ಸನಾ ಶೇಖ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.
ಫಾತಿಮಾ ಸನಾ ಅವರಿಗೆ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಸೋಂಕು ಅಂಟಿಕೊಂಡಿರುವುದು ಖಚಿತವಾದ ಮೇಲೆ ಕೊರೊನಾ ನಿಯಮ ಪಾಲಿಸುತ್ತಿದ್ದೇನೆ ಹಾಗೂ ಗೃಹಬಂಧನದಲ್ಲಿದ್ದೇನೆ ಎಂದು ನಟಿ ಫಾತಿಮಾ ತಿಳಿಸಿದ್ದಾರೆ.
ಮತ್ತೊಂದೆಡೆ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿಗೂ ಕೊರೊನಾ ಸೋಂಕು ತಗುಲಿದೆ. ವಿಕ್ರಾಂತ್ ಅವರಿಗೆ ಸೋಂಕು ತಗುಲಿರುವುದು ಭಾನುವಾರ ತಿಳಿದು ಬಂದಿದ್ದು, ಎಲ್ಲರೂ ಸುರಕ್ಷಿತವಾಗಿರಿ ಎಂದು ಇನ್ಸ್ಟಾಗ್ರಾಂನಲ್ಲಿ ವಿನಂತಿಸಿಕೊಂಡಿದ್ದಾರೆ.

ಫಾತಿಮಾ ಮತ್ತು ವಿಕ್ರಾಂತ್‌ಗೂ ಮೊದಲು ಹಲವು ಸೆಲೆಬ್ರಿಟಿಗಳು ಕೊವಿಡ್ ತಗುಲಿದೆ. ಬಾಲಿವುಡ್ ನಟ ಅಮೀರ್ ಖಾನ್‌ಗೆ ಸೋಂಕು ತಗುಲಿರುವುದು ಮಾರ್ಚ್ 24 ರಂದು ತಿಳಿದಿತ್ತು.
ಆರ್ ಮಾಧವನ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಸದ್ಯ ಹೋಮ್ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಿವುಡ್ ನಟ ಪರೇಶ್ ರಾವಲ್ ಅವರಿಗೂ ಸೋಂಕು ಅಂಟಿದೆ.
ಅದಕ್ಕೂ ಮುಂಚೆ ರಣ್ಬೀರ್ ಕಪೂರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಗುಣಮುಖರಾಗಿದ್ದರು.
ಅಂದ್ಹಾಗೆ, ಫಾತಿಮಾ ಸನಾ ಅವರು ಕೊನೆಯದಾಗಿ ಅನುರಾಗ್ ಕಶ್ಯಪ್ ನಿರ್ದೇಶನದ 'ಲುಡೊ' ಮತ್ತು ಮನೋಜ್ ಬಾಜಪೇಯಿ ನಟಿಸಿದ್ದ 'ಸೂರಜ್ ಪೇ ಮಂಗಲ್ ಭಾರಿ' ಚಿತ್ರಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಈ ಎರಡು ಚಿತ್ರವೂ ಬಿಡುಗಡೆಯಾಗಿತ್ತು.


Click it and Unblock the Notifications











