For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಬೆಂಬಲಕ್ಕೆ ನಿಂತಿದ್ದ ನಟಿಗೆ ಮತ್ತೆ ಬಂಧನದ ಭೀತಿ

  By ಫಿಲ್ಮಿಬೀಟ್ ಡೆಸ್ಕ್
  |

  ರಾಜ್ ಕುಂದ್ರಾ ಪ್ರಕರಣ ಸುಲಭಕ್ಕೆ ಬಗೆಹರಿವುದಲ್ಲ ಹಲವು ದಿನಗಳ ವರೆಗೆ ಎಳೆದಾಡಿದ ಬಳಿಕವಷ್ಟೆ ಅದಕ್ಕೆ ತಾರ್ಕಿಕ ಅಂತ್ಯ ದೊರಕಲು ಸಾಧ್ಯ ಎಂದೆನಿಸುತ್ತಿದೆ.

  ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರದರ್ಶನ ಪ್ರಕರಣದಲ್ಲಿ ಕಳೆದ ತಿಂಗಳು ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅನ್ನು ಬಂಧಿಸಲಾಗಿತ್ತು. ರಾಜ್ ಕುಂದ್ರಾ ಬಂಧನದ ಬಳಿಕ ಹಲವು ನಟಿಯರು ರಾಜ್ ಕುಂದ್ರಾ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಕೆಲವರು ರಾಜ್ ಕುಂದ್ರಾ ಪರವಾಗಿಯೂ ಹೇಳಿಕೆಗಳನ್ನು ನೀಡಿದ್ದರು. ಅದರಲ್ಲಿ ಒಬ್ಬರು ನಟಿ ಗೆಹನಾ ವಶಿಷ್ಠ.

  ಆದರೆ ಈಗ ನಟಿ ಗೆಹನಾ ವಶಿಷ್ಠಗೆ ಬಂಧನ ಭೀತಿ ಎದುರಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲೆಂದು ಗೆಹನಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು ಆದರೆ ಗೆಹನಾರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ಬಂಧನ ಭೀತಿಯಲ್ಲಿದ್ದಾರೆ ನಟಿ, ಮಾಡೆಲ್ ಗೆಹನಾ.

  ಗೆಹನಾ ವಶಿಷ್ಠ ಈ ಮೊದಲೇ ಇದೇ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಫೆಬ್ರವರಿ ತಿಂಗಳಲ್ಲಿ ಒಳಾಂಗಣ ಚಿತ್ರೀಕರಣ ಸೆಟ್‌ ಮೇಲೆ ದಾಳಿ ನಡೆಸಿದ್ದ ಮುಂಬೈ ಪೊಲೀಸರು ಹಲವರನ್ನು ಬಂಧಿಸಿದ್ದರು. ಆ ಸೆಟ್‌ನಲ್ಲಿ ಅಶ್ಲೀಲ ವಿಡಿಯೋವನ್ನು ನಿರ್ದೇಶಿಸುತ್ತಿದ್ದಿದ್ದು ಗೆಹನಾ ವಸಿಷ್ಠ ಎಂದು ಪೊಲೀಸರು ಆರೋಪ ಮಾಡಿದ್ದರು. ಇದೀಗ ಎರಡನೇ ಎಫ್‌ಐಆರ್ ಅನ್ನು ಗೆಹನಾ ವಿರುದ್ಧ ದಾಖಲು ಮಾಡಿಕೊಳ್ಳಲಾಗಿದ್ದು ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಗೆಹನಾ ಬಂಧನವಾಗುವ ಸಾಧ್ಯತೆ ಇದೆ.

  ಎರಡನೇ ಎಫ್‌ಐಆರ್ ದಾಖಲಿಸಿರುವ ಮುಂಬೈ ಪೊಲೀಸ್

  ಎರಡನೇ ಎಫ್‌ಐಆರ್ ದಾಖಲಿಸಿರುವ ಮುಂಬೈ ಪೊಲೀಸ್

  ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವಸಿಷ್ಠ, ''ನಾನು ಇದೇ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಪಟ್ಟಿದ್ದೆ. ನನ್ನ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ ಇನ್ನಿತರೆ ದಾಖಲೆಗಳು ಈಗಾಗಲೇ ಪೊಲೀಸರ ಬಳಿ ಇವೆ'' ಎಂದಿದ್ದಾರೆ. ಆದರೆ ನಿರೀಕ್ಷಣಾ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಮುಂಬೈ ಪೊಲೀಸರು, ಗೆಹನಾ ವಸಿಷ್ಠ ಈ ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಹಾಗಾಗಿ ಆಕೆಯ ವಿಚಾರಣೆಯ ಅಗತ್ಯವಿದೆ'' ಎಂದಿದೆ. ನ್ಯಾಯಾಲಯವು ಗೆಹನಾ ವಸಿಷ್ಠಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

  ರಾಜ್ ಕುಂದ್ರಾ ಪರವಾಗಿ ಗೆಹನಾ ಹೇಳಿಕೆ

  ರಾಜ್ ಕುಂದ್ರಾ ಪರವಾಗಿ ಗೆಹನಾ ಹೇಳಿಕೆ

  ರಾಜ್ ಕುಂದ್ರಾ ಬಂಧನದ ನಂತರ ನಟಿ, ಮಾಡೆಲ್ ಆಗಿರುವ ಗೆಹನಾ ವಸಿಷ್ಠ, ರಾಜ್ ಕುಂದರ ಪರವಾಗಿ ಹಲವು ಬಾರಿ ಮಾತನಾಡಿದ್ದಾರೆ. ಜೊತೆಗೆ ಮುಂಬೈ ಪೊಲೀಸರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ರಾಜ್ ಕುಂದ್ರಾ ಸಂಭಾವ್ಯ ವ್ಯಕ್ತಿ, ನಾವುಗಳು ಶೃಂಗಾರದ (ಎರೊಟಿಕಾ) ವಿಡಿಯೋಗಳನ್ನು ಮಾಡುತ್ತಿದ್ದೆವು, ನನಗೆ ಸಹ ಕುಂದ್ರಾ ಎಂದೂ ಎಕ್ಸ್‌ಪೋಸ್ ಮಾಡುವಂತೆ ಹೇಳಿದವರಲ್ಲ, ನಟಿಯರಿಗೆ, ಮಾಡೆಲ್‌ಗಳಿಗೆ ಸರಿಯೆನಿಸುವ ರೀತಿಯಲ್ಲಿಯೇ ಧಿರಿಸು ಧರಿಸಲು ಕುಂದ್ರಾ ಹೇಳುತ್ತಿದ್ದರು. ಆದರೆ ಕುಂದ್ರಾ ಅನ್ನು ಸಿಕ್ಕಿ ಹಾಕಿಸುವ ಉದ್ದೇಶದಿಂದಲೇ ಅವರನ್ನು ಬಂಧಿಸಲಾಗಿದೆ'' ಎಂದಿದ್ದರು. ಅಲ್ಲದೆ ನನ್ನನ್ನು ಬಂಧಿಸುವಾಗ ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಪೊಲೀಸರು ನನ್ನ ಮನೆ ಹುಡುಕಾಟ ನಡೆಸಿದ ಬಳಿಕ ನನ್ನ ಮನೆಯಲ್ಲಿ ಇದ್ದಿದ್ದ ಆಭರಣಗಳು ನಾಪತ್ತೆಯಾಗಿವೆ'' ಎಂದಿದ್ದಾರೆ.

  ''ಏಕ್ತಾ ಕಪೂರ್, ರಾಜ್ ಕುಂದ್ರಾ ಹೆಸರು ಹೇಳುವಂತೆ ಒತ್ತಡ''

  ''ಏಕ್ತಾ ಕಪೂರ್, ರಾಜ್ ಕುಂದ್ರಾ ಹೆಸರು ಹೇಳುವಂತೆ ಒತ್ತಡ''

  ''ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಹಾಗೂ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಹೆಸರನ್ನು ಹೇಳುವಂತೆ ಮುಂಬೈ ಪೊಲೀಸರು ನನ್ನ ಮೇಲೆ ಒತ್ತಡ ಹೇರಿದ್ದರು. ಆದರೆ ನಾನು ಅವರಿಬ್ಬರ ಹೆಸರನ್ನು ಹೇಳಲಿಲ್ಲ, ನಿಮ್ಮನ್ನು ಬಂಧಿಸಬಾರದು ಎಂದರೆ ನಮಗೆ 15 ಲಕ್ಷ ಹಣ ಕೊಡಿ ಎಂದು ಲಂಚಕ್ಕೆ ಒತ್ತಾಯಿಸಿದ್ದರು'' ಎಂದು ಗೆಹನಾ ಈ ಹಿಂದೆ ಆರೋಪ ಮಾಡಿದ್ದಾರೆ. ನನ್ನ ಮನೆಯಲ್ಲಿ ಕುಳಿತುಕೊಂಡು ಪೊಲೀಸರು ನನಗೆ ಲಂಚದ ಬೇಡಿಕೆ ಇಟ್ಟರು ಎಂದು ಗೆಹನಾ ಹೇಳಿದ್ದರು.

  ಮೊದಲು ಬಂಧನವಾಗಿದ್ದ ಗೆಹನಾ

  ಮೊದಲು ಬಂಧನವಾಗಿದ್ದ ಗೆಹನಾ

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮೊದಲು ಬಂಧನಕ್ಕೆ ಒಳಗಾಗಿದ್ದೆ ಗೆಹನಾ ವಸಿಷ್ಠ. ಮಾಡೆಲ್ ಒಬ್ಬರ ದೂರಿನ ಆಧಾರದ ಮೇಳೆ ಗೆಹನಾ ಅನ್ನು ಬಂಧಿಸಲಾಯ್ತು ಆ ನಂತರ ಆ ಪ್ರಕರಣದಲ್ಲಿ ರಾಜ್ ಕುಂದ್ರಾ ಸಹ ಇರುವುದು ಗೊತ್ತಾಗಿ ರಾಜ್ ಕುಂದ್ರಾರನ್ನು ಬಂಧಿಸಲಾಯ್ತು. ತಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಗೆಹನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೋದಲ್ಲಿ ಹೇಳಿದ್ದಾರೆ.

  English summary
  Actress, Model Gehana Vasisth anticipatory bail rejected by court. Mumbai police made second FIR against Gehana and sent notice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X