»   » ಲವ್ಲಿ ತಾರೆ ಜೆನಿಲಿಯಾ ಡಿಸೋಜಾ ಸೆಕೆಂಡ್ ಇನ್ನಿಂಗ್ಸ್

ಲವ್ಲಿ ತಾರೆ ಜೆನಿಲಿಯಾ ಡಿಸೋಜಾ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada

"ನೋಡಳಿವಳು ಲವ್ಲಿ ಲವ್ಲಿ...ಮೂಳೆ ಇಲ್ಲ ಬಳುಕೋ ಬಳ್ಳಿ...ನೋಟದಲ್ಲಿ..ಕದ್ದಕಳ್ಳಿ..." ಎಂದು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೊತೆ ಹೆಜ್ಜೆ ಹಾಕಿದ ಬೆಡಗಿ ಜೆನಿಲಿಯಾ ಡಿಸೋಜಾ. ಇದೀಗ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಅವರ ಕೈಹಿಡಿದ ಮೇಲೆ ಜೆನಿಲಿಯಾ ಅವರು ಬಣ್ಣದ ಜಗತ್ತಿನಿಂದ ದೂರ ಸರಿದಿದ್ದರು. 2012ರಲ್ಲಿ ಸಪ್ತಪದಿ ತುಳಿದ ಮೇಲೆ ಗಂಡ, ಮನೆ, ಮಠ ಎಂದು ಕಳೆದುಹೋಗಿದ್ದರು. 2014ರ ನವೆಂಬರ್ ನಲ್ಲಿ ಮುದ್ದಾದ ಗಂಡು ಮಗುವನ್ನು ರಿತೇಶ್ ಕೈಗಿತ್ತಿದ್ದರು ಜೆನಿಲಿಯಾ. [ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಜೊತೆಗೆ ಜೆನಿಲಿಯಾ]

Actress Genelia D'souza wants to act again

ತಾಯ್ತನದ ಸುಖ, ದಾಂಪತ್ಯದ ಮಧುರಾನುಭವ ಸವಿದು ಇದೀಗ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳಿದ್ದಾರೆ ಜೆನಿಲಿಯಾ. ಸುಂದರವಾದ ರೂಪ, ಸಿನಿಮಾಗೆ ಒಪ್ಪುವ ಮೈಮಾಟ ಇದ್ದರೂ ಹೆಚ್ಚಾಗಿ ಈ ಬೆಡಗಿ ಕಾಣಿಸಿಕೊಂಡಿದ್ದು ಮಾತ್ರ ದಕ್ಷಿಣದ ಚಿತ್ರಗಳಲ್ಲಿ ಎಂಬುದು ವಿಶೇಷ.

ಮದುವೆಯಾಗಿ, ಮಗುವಾದ ಬಳಿಕವೂ ತಮ್ಮ ಮೈಮಾಟವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಜೆನಿಲಿಯಾ. ಈಗ ಅವರಿಗೆ ಹೀರೋಯಿನ್ ಪಾತ್ರ ಸಿಗುವುದು ಕಷ್ಟವಾದರೂ ಒಳ್ಳೆಯ ಪಾತ್ರಗಳನ್ನಂತೂ ಅವರು ನಿರೀಕ್ಷಿಸಬಹುದು.

Actress Genelia D'souza wants to act again

ಆದರೆ ರಿತೇಶ್ ದೇಶ್ ಮುಖ್ ಮನಸ್ಸು ಮಾಡಿದರೆ ತಮ್ಮ ಪತ್ನಿಯನ್ನು ಮತ್ತೆ ಹೀರೋಯಿನ್ ಮಾಡುವ ಸಾಧ್ಯತೆಗಳಿವೆ. ಅವರೇ ನಿರ್ಮಿಸುವ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಜೆನಿಲಿಯಾಗೆ ಆಲ್ ದ ಬೆಸ್ಟ್ ಹೇಳೋಣ. (ಏಜೆನ್ಸೀಸ್)

English summary
It is a wonderful news for all Genelia D'Souza's fans. Yes! the actress is planning to make her comeback. Bollywood actress Genelia D'Souza, who has been away from the big screen post her marriage to actor Riteish Deshmukh in 2012, says she is now ready to make a comeback in Bollywood and will focus on her acting career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada