For Quick Alerts
  ALLOW NOTIFICATIONS  
  For Daily Alerts

  ಸುಕೇಶ್ ಜೊತೆ ಮದುವೆ ಕನಸು ಕಂಡಿದ್ದ ಜಾಕ್ವೆಲಿನ್ ಫರ್ನಾಂಡಿಸ್!

  |

  200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಾಲಿವುಡ್‌ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ದಿನದಿಂದ ದಿನಕ್ಕೆ ಪ್ರಕರಣ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಆತನ ಜೊತೆಗೆ ಸಂಪರ್ಕದಲ್ಲಿದ್ದ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿಗೂ ಸಂಕಷ್ಟ ಎದುರಾಗಿದೆ. ಇನ್ನು ಸುಕೇಶ್ ಜೊತೆ ಜಾಕ್ವೆಲಿನ್ ಮದುವೆ ಆಗಲು ಮುಂದಾಗಿದ್ದಳು ಎನ್ನುವ ಕುತೂಹಲಕಾರಿ ವಿಚಾರವೂ ಈಗ ಬೆಳಕಿಗೆ ಬಂದಿದೆ.

  ತಾಜಾ ಸಮಾಚಾರದ ಪ್ರಕಾರ ಸುಕೇಶ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಆತ್ಮೀಯ ಒಡನಾಟ ಹೊಂದಿದ್ದ ಸಮಯದಲ್ಲಿ ಆತನನ್ನು ಮದುವೆ ಆಗಲು ಆಕೆ ಬಯಸಿದ್ದಳು ಅನ್ನುವ ಸಂಗತಿ ಗೊತ್ತಾಗಿದೆ. ತನ್ನ ಸ್ನೇಹಿತರ ಜೊತೆ ಈ ವಿಚಾರವನ್ನು ಆಕೆ ಹಂಚಿಕೊಂಡಿದ್ದಾಗಿ ತಿಳಿದು ಬಂದಿದೆ. "ನನ್ನ ಡ್ರೀಮ್ ಬಾಯ್ ಸಿಕ್ಕಿದ್ದಾನೆ. ಆತನನ್ನೇ ಮದುವೆ ಆಗ್ತೀನಿ" ಎಂದು ಸಾಕಷ್ಟು ಬಾರಿ ಸ್ನೇಹಿತರ ಮುಂದೆ ಪ್ರಸ್ತಾಪಿಸಿರುವ ವಿಚಾರ ಬೆಳಕಿಗೆ ಬಂದಿದೆ. ಸುಕೇಶ್‌ನ ಮುದ್ದಾಡುತ್ತಿರುವ ಫೋಟೊಗಳು ಹೊರ ಬಂದಾಗ ಆತನಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀಲಂಕಾ ಬ್ಯೂಟಿ ಹೇಳಿದ್ದಳು.

  200 ಕೋಟಿ ಸುಲಿಗೆ: ಜಾಕ್ವೆಲಿನ್ ಫರ್ನಾಂಡೀಸ್ ಬಳಿಕ ನೋರಾ ಫತೇಹಿ ವಿಚಾರಣೆ200 ಕೋಟಿ ಸುಲಿಗೆ: ಜಾಕ್ವೆಲಿನ್ ಫರ್ನಾಂಡೀಸ್ ಬಳಿಕ ನೋರಾ ಫತೇಹಿ ವಿಚಾರಣೆ

  ಸದ್ಯ ವಿಚಾರಣೆಯಲ್ಲಿ ಸುಕೇಶ್, ಜಾಕ್ವೆಲಿನ್ ಫರ್ನಾಂಡಿಸ್ ಡ್ರೀಮ್ ಮ್ಯಾನ್ ಎನ್ನುವುದು ಗೊತ್ತಾಗಿದೆ. ಸಾಕಷ್ಟು ಸಹಕಲಾವಿದರು ಸುಕೇಶ್‌ನಿಂದ ದೂರ ಇರಲು ಹೇಳಿದರೂ ಕೇಳದೇ ಆತನ ಜೊತೆ ಸುತ್ತಾಡಿದ್ದು, ತಿಳಿದುಬಂದಿದೆ. ಮತ್ತೊಂದು ಕಡೆ ನಟಿ ನೋರಾ ಫತೇಹಿನ ಕೂಡ ದೆಹಲಿ ಪೊಲೀಸ್ ಇಲಾಖೆಯ ಹಣಕಾಸು ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆತ ಬಿಎಂಡಬ್ಲ್ಯೂ ಕಾರ್ ಉಡುಗೊರೆಯಾಗಿದ್ದ ನೀಡಿದ್ದ ವಿಷಯ ತಿಳಿದು ಆಕೆಯ ಜೊತೆ ಸಂಬಂಧ ಇರಬಹುದು ಎಂದು ವಿಚಾರಣೆಗೆ ಕರೆಸಿದ್ದರು. ಸತತ 8 ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಜಾಕ್ವೆಲಿನ್ ಮತ್ತು ನೋರಾ ಇಬ್ಬರೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂಬುದು ತಿಳಿದುಬಂದಿದೆ.

  ವಿಚಾರಣೆಯಲ್ಲಿ ನನಗೂ ಸುಕೇಶ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ನೋರಾ ಹೇಳಿದ್ದಾಗಿ ವರದಿಯಾಗಿದೆ. ಸುಖೇಶ್ ನನಗೆ ಯಾವುದೇ ಕಾರು ಉಡುಗೊರೆ ಕೊಟ್ಟಿಲ್ಲ. ಚೆನ್ನೈನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಕ್ಕೆ ಆತನ ಪತ್ನಿ ಆ ಕಾರು ಕೊಟ್ಟಿದ್ದಾಗಿ ಹೇಳಿದ್ದಾಳೆ. ಇನ್ನು ನೋರಾಳನ್ನು ಸುಕೇಶ್​ ಚಂದ್ರಶೇಖರ್‌ಗೆ ಪರಿಚಯಿಸಿದ ಇನ್ನೊಬ್ಬ ಆರೋಪಿ ಪಿಂಕಿ ಇರಾನಿಯೊಂದಿಗೆ ವಿಚಾರಣೆ ನಡೆಸಲಾಗುತ್ತಿದೆ. ಸುಖೇಶ್ ಅಪರಾಧ ಇತಿಹಾಸ ಗೊತ್ತಾಗುತ್ತಿದ್ದಂತೆ ನೋರಾ ಆತನಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಳಂತೆ. ಆದರೆ ಜಾಕ್ವೆಲಿನ್ ಮಾತ್ರ ನಿರಂತರವಾಗಿ ಸುಕೇಶ್ ಸಂಪರ್ಕದಲ್ಲಿ ಇದ್ದಳು ಅನ್ನುವ ಮಾಹಿತಿ ಸಿಕ್ಕಿದೆ.

  ಕೇವಲ ರಕ್ಕಮ್ಮಾ ಅಲ್ಲ..ಇನ್ನೂ ನಾಲ್ವರು ನಟಿಯರ ಜೊತೆ ಸುಕೇಶ್​ ಲಿಂಕ್​!ಕೇವಲ ರಕ್ಕಮ್ಮಾ ಅಲ್ಲ..ಇನ್ನೂ ನಾಲ್ವರು ನಟಿಯರ ಜೊತೆ ಸುಕೇಶ್​ ಲಿಂಕ್​!

  ಈ ಬಗ್ಗೆ ANI ಜೊತೆ ಮಾತನಾಡಿದ ವಿಶೇಷ ಪೊಲೀಸ್ ಕಮಿಷನರ್, EOW, ರವೀಂದರ್ ಯಾದವ್, 'ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಕೇಶ್ ಅವರ ಅಪರಾಧ ಇತಿಹಾಸವನ್ನು ತಿಳಿದ ನಂತರವೂ ಸಂಬಂಧವನ್ನು ಮುಂದುವರೆಸಿದ್ದರು. ಇದರಿಂದಾಗಿ ಅವರು ಈಗ ಹೆಚ್ಚು ತೊಂದರೆಯಲ್ಲಿದ್ದಾರೆ. ಆದರೆ, ನೋರಾ ಫತೇಹಿ ಸುಕೇಶನ ಸತ್ಯವನ್ನು ತಿಳಿದಾಗ ತಕ್ಷಣ ಅವನಿಂದ ದೂರವಾದಳು' ಎಂದಿದ್ದಾರೆ.

  Actress Jacqueline Fernandez wanted to marry dream man Sukesh Chandrashekhar

  ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರು, ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಸಂಗಾತಿಗಳಿಗೆ ₹200 ಕೋಟಿ ವಂಚಿಸಿದ್ದಾನೆ ಎನ್ನುವ ಆರೋಪದ ಮೇಲೆ ಹಿನ್ನೆಲೆ ಸುಕೇಶ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ದೆಹಲಿ ಪೋಲೀಸ್‌ನ ಆರ್ಥಿಕ ಅಪರಾಧ ವಿಭಾಗದಿಂದ (EOW) ನಟಿಗೆ 3 ಬಾರಿ ಸಮನ್ಸ್ ನೀಡಲಾಗಿತ್ತು. ಸೆಪ್ಟೆಂಬರ್ 14ರಂದಯ ದೆಹಲಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಳು. ಜಾಕ್ವೆಲಿನ್ ಇತ್ತೀಚೆಗೆ ಸೂಪರ್ ಹಿಟ್ ಆದ 'ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಳು.

  English summary
  Actress Jacqueline Fernandez wanted to marry 'dream man' Sukesh Chandrashekhar. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X