For Quick Alerts
  ALLOW NOTIFICATIONS  
  For Daily Alerts

  ಈ ಸಿನಿಮಾ ಶೂಟಿಂಗ್ ಬಳಿಕ 'ಪೈನ್‌ಕಿಲ್ಲರ್' ಮಾತ್ರೆ ಸೇವಿಸುತ್ತಿದ್ದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್!

  |

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಕಂಟೆಂಟ್ ಇರುವ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಸಿನಿಮಾಗಳು ಥಿಯೇಟರ್‌ನಲ್ಲಿ ಮಾತ್ರ ರಿಲೀಸ್ ಆಗುತ್ತಿಲ್ಲ.

  ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮಧ್ಯೆ ಆಗಾಗ ಗ್ಲಾಮರಸ್‌ ರೋಲ್‌ಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆಯನ್ನೂ ಕದ್ದಿದ್ದಾರೆ. ಸದ್ಯ ಜಾಹ್ನವಿ ಕಪೂರ್ ನಟಿಸಿದ ಮತ್ತೊಂದು ರಿಮೇಕ್ ಸಿನಿಮಾ ಬಿಡುಗಡೆ ಸಜ್ಜಾಗಿ ನಿಂತಿದೆ.

  ಕೇದರನಾಥದಲ್ಲಿ ಸಾರಾ ಹಾಗೂ ಜಾಹ್ನವಿ ಕಪೂರ್‌ಗೆ ಸಾವಿನ ಅನುಭವ ಆಗಿತ್ತಂತೆ!ಕೇದರನಾಥದಲ್ಲಿ ಸಾರಾ ಹಾಗೂ ಜಾಹ್ನವಿ ಕಪೂರ್‌ಗೆ ಸಾವಿನ ಅನುಭವ ಆಗಿತ್ತಂತೆ!

  ಜಾಹ್ನವಿ ಕಪೂರ್ ಮಲಯಾಳಂ ಸಿನಿಮಾವೊಂದರ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಳೆ ಜಾಹ್ನವಿ ಕಪೂರ್ ಕೆಲವೊಮ್ಮೆ ನೋವು ನಿರೋಧಕ ಮಾತ್ರೆಗಳನ್ನು ಸೇವಿಸಲೇಬೇಕಿತ್ತು. ಅದ್ಯಾಕೆ ಪೈನ್‌ಕಿಲ್ಲರ್ ತೆಗೆದುಕೊಳ್ಳುತ್ತಿದ್ದರು? ಆ ಸಿನಿಮಾ ಯಾವುದು? ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಮಿಲಿ' ಪ್ರಚಾರದಲ್ಲಿ ಜಾಹ್ನವಿ ಕಪೂರ್!

  'ಮಿಲಿ' ಪ್ರಚಾರದಲ್ಲಿ ಜಾಹ್ನವಿ ಕಪೂರ್!

  ಜಾಹ್ನವಿ ಕಪೂರ್ ತನ್ನ ಹೊಸ ಸಿನಿಮಾ 'ಮಿಲಿ' ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದುವೇ 'ಮಿಲಿ'. ಈ ಸಿನಿಮಾ ಇದೇ ನವೆಂಬರ್ 4 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಜಾಹ್ನವಿ ಕಪೂರ್ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ನೀಡಿದ ಸಂದರ್ಶನದಲ್ಲಿ ಜಾಹ್ನವಿ ಕಪೂರ್ ತಮಗಾದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಶೂಟಿಂಗ್ ವೇಳೆ ಪೇನ್ ಕಿಲ್ಲರ್ ಯಾಕೆ ತೆಗೆದುಕೊಳ್ಳುತ್ತಿದ್ದೆ ಅನ್ನೋದನ್ನೂ ವಿವರಿಸಿದ್ದಾರೆ.

  "ನಾನು ಸುರಸುಂದರಿ ಅಲ್ಲದೇ ಇರಬಹುದು.. ಆದರೆ ಅದು ಸತ್ಯ.. ಬೇಕಿದ್ರೆ ರಕ್ತದಲ್ಲಿ ಬರೆದು ಕೊಡ್ತೀನಿ": ಜಾನ್ವಿ ಕಪೂರ್

  ಜಾಹ್ನವಿ ಪೈನ್ ಕಿಲ್ಲರ್ ತೆಗೆದುಕೊಳ್ಳುತ್ತಿದ್ದದ್ದು ಏಕೆ?

  ಜಾಹ್ನವಿ ಪೈನ್ ಕಿಲ್ಲರ್ ತೆಗೆದುಕೊಳ್ಳುತ್ತಿದ್ದದ್ದು ಏಕೆ?


  'ಮಿಲಿ' ಸಿನಿಮಾದ ಪಾತ್ರಕ್ಕಾಗಿ ಜಾಹ್ನವಿ ಕಪೂರ್ ಸುಮಾರು 7.5 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರಂತೆ. ಅಲ್ಲದೆ ಸಿನಿಮಾ ಶೂಟಿಂಗ್ ವೇಳೆ ಸುಮಾರು 15 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರುತ್ತಿದ್ದರು. ಇದು ಸಿಕ್ಕಾಪಟ್ಟೆ ಕಷ್ಟಕರವಾಗಿತ್ತು ಎಂದು ಜಾಹ್ನವಿ ಕಪೂರ್ ಹೇಳಿಕೊಂಡಿದ್ದಾರೆ. " ದಿನದ ಬಹುಪಾಲು ನಾನು ಫ್ರೀಜರ್ ಓಳಗೆ ಅಳುತ್ತಲೇ ಇರಬೇಕಿತ್ತು. ಇದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ನಾನು ಮನೆ ತಲುಪಿದಾಗ, ಇನ್ನೂ ಫ್ರೀಜರ್ ಒಳಗೆ ಇನ್ನೂ ಇದ್ದೀನಿ ಅಂತ ಅನಿಸಿತ್ತು. ಶೂಟಿಂಗ್ ವೇಳೆ ಆರೋಗ್ಯ ತಪ್ಪಿದಾಗ, ಸಿಕ್ಕಾಪಟ್ಟೆ ಪೈನ್‌ಕಿಲ್ಲರ್ ಮಾತ್ರೆಗಳನ್ನು ಸೇವಿಸಿದ್ದೇನೆ." ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

  ಮಲಯಾಳಂ ರಿಮೇಕ್ 'ಮಿಲಿ'

  ಮಲಯಾಳಂ ರಿಮೇಕ್ 'ಮಿಲಿ'

  ಜಾಹ್ನವಿ ಕಪೂರ್ ನಟಿಸಿದ 'ಮಿಲಿ' ಮಲಯಾಳಂ ಸಿನಿಮಾದ ರಿಮೇಕ್. ಈ ಸಿನಿಮಾವನ್ನು ಮಾಥುಕುಟ್ಟಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ ಇದು, ಮಲಯಾಲಂನ 'ಹೆಲೆನ್' ಎಂಬ ಸಿನಿಮಾದ ರಿಮೇಕ್. ಮಲಯಾಳಂನಲ್ಲೂ ಈ ಸಿನಿಮಾವನ್ನು ಮಾಥುಕುಟ್ಟಿಯವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಜಾಹ್ನವಿ ಕಪೂರ್ ಹೇಗೆ ನಿಭಾಯಿಸಿದ್ದಾರೆ ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

  ಹೇಗಿದೆ 'ಮಿಲಿ' ಸಿನಿಮಾ?

  ಹೇಗಿದೆ 'ಮಿಲಿ' ಸಿನಿಮಾ?

  ಜಾಹ್ನವಿ ಕಪೂರ್ ಅಭಿನಯದ 'ಮಿಲಿ' ಸಿನಿಮಾವನ್ನು ಓವರ್‌ಸೀನ್ ಸೆನ್ಸಾರ್‌ ಬೋರ್ಡ್‌ನ ಅಧ್ಯಕ್ಷ ಉಮೈರ್ ಸಂಧು ವೀಕ್ಷಿಸಿದ್ದಾರೆ. ಈ ಸಿನಿಮಾ ನೋಡಿ ಚಿಲ್ಲಿಂಗ್ ಅಂಡ್ ಥ್ರಿಲ್ಲಿಂಗ್ ಆಗಿದೆ ಅಂತ ಹೇಳಿದ್ದಾರೆ. ಉಮೈರ್ ಸಂಧು ಸಿನಿಮಾ ಬಗ್ಗೆ ಕೊಟ್ಟ ವಿಮರ್ಶೆ ಶೇ.80ರಷ್ಟು ವರ್ಕ್‌ಔಟ್ ಆಗಿದೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಗೂ ಮುನ್ನ ಸಿನಿಮಾ ಜಾಹ್ನವಿ ಕಪೂರ್ ಕಷ್ಟ ಪಟ್ಟಿದ್ದಕ್ಕೂ ಬೆಲೆ ಸಿಕ್ಕಂತಾಗಿದೆ.

  English summary
  Bollywood Actress Janhvi Kapoor Talks About Using Painkillers In Upcoming Movie Mili, Know More.
  Tuesday, November 1, 2022, 22:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X