For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರೀದೇವಿ ಪುಣ್ಯತಿಥಿ: ಅಮ್ಮನ ನೆನೆದು ಭಾವುಕರಾದ ಮಗಳು ಜಾಹ್ನವಿ

  |

  ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ ನಿಧನ ಹೊಂದಿ ಇಂದಿಗೆ ಎರಡು ವರ್ಷಗಳು ಕಳೆದಿದೆ. ಪತಿ ಬೋನಿ ಕಪೂರ್ ಮತ್ತು ಮುದ್ದಾದ ಮಕ್ಕಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ ಶ್ರೀದೇವಿ ನೆನೆಪು ಇಂದಿಗೂ ಹಸಿರಾಗೆ ಇದೆ.

  ಎರಡನೆ ವರ್ಷದ ಪುಣ್ಯ ತಿಥಿಯ ದಿನ ಮಗಳು ಜಾಹ್ನವಿ ಕಪೂರ್ ಅಮ್ಮನ ಬಗ್ಗೆ ಭಾವುಕ ಟ್ವೀಟ್ ಮಾಡಿದ್ದಾರೆ. ಅಮ್ಮನನ್ನು ಅಪ್ಪಿಕೊಂಡಿರುವ ಪುಟ್ಟ ಜಾಹ್ನವಿ ಫೋಟೋ ಶೇರ್ ಮಾಡಿದ್ದು, ಈ ಪೋಟೋ ಈಗ ವೈರಲ್ ಆಗಿದೆ. ಫೋಟೋ ಜೊತೆಗೆ "ಪ್ರತಿದಿನ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ" ಎಂದು ಬರೆದುಕೊಂಡಿದ್ದಾರೆ.

  ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀದೇವಿ ಪುತ್ರಿ.!ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀದೇವಿ ಪುತ್ರಿ.!

  2018 ಫೆಬ್ರವರಿ 24ರಂದು ಅತಿಲೋಕ ಸುಂದರಿ ಶ್ರೀದೇವಿ ದುಬೈನಲ್ಲಿ ಬಾತ್ ಟಬ್ ಗೆ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಎವರ್ ಗ್ರೀನ್ ನಟಿಯ ಸಾವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇಂದಿಗೂ ಶ್ರೀದೇವಿ ಸಾವು ಅನೇಕರಿಗೆ ನುಂಗಲಾರದ ಕಹಿ ಸತ್ಯವಾಗಿದೆ.

  ಜಾಹ್ನವಿ ಆಗಾಗ ಅಮ್ಮನ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಮ್ಮನ ಬಗ್ಗೆ ಮಾತನಾಡುವಾಗಲೆಲ್ಲ ಜಾಹ್ನವಿ ಭಾವುಕರಾಗುತ್ತಾರೆ. ಮಗಳ ಮೊದಲ ಸಿನಿಮಾ ನೋಡಬೇಕೆನ್ನುವ ದೊಡ್ಡ ಆಸೆಯಿಟ್ಟುಕೊಂಡಿದ್ದ ಶ್ರೀದೇವಿ ಕನಸು ಅವರ ಜೊತೆಯೆ ಮಣ್ಣಾಗಿದೆ. ಆದರೆ ಅಮ್ಮನ ಆಸೆಯಂತೆ ಮಗಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

  View this post on Instagram

  Miss you everyday

  A post shared by Janhvi Kapoor (@janhvikapoor) on

  ಜಾಹ್ನವಿ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಧಡಕ್ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಜಾಹ್ನವಿ ಬಳಿ ಸದ್ಯ ಗುಂಜನ್ ಸಕ್ಸೇನಾ, ಥಕ್ತ್ ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ.

  English summary
  Actress Jhanvi Kapoor Shared a Photo with her mother and said Miss you mom.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X