For Quick Alerts
  ALLOW NOTIFICATIONS  
  For Daily Alerts

  ಐಎಎಫ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ನಟಿ ಕಂಗನಾ ರಣಾವತ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಯೂರೋಪ್ ನಲ್ಲಿ ಹಾಟ್ ಅವತಾರ ತಾಳಿದ್ದ ನಟಿ ಕಂಗನಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಪಡ್ಡೆಗಳ ನಿದ್ದೆ ಗೆಡಿಸಿದ್ದರು. ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ನಟಿ ಕಂಗನಾ ಇದೀಗ ಸಿನಿಮಾ ವಿಚಾರವಾಗಿ ಗಮನ ಸೆಳೆಯುತ್ತಿದ್ದಾರೆ.

  ಇತ್ತೀಚಿಗಷ್ಟೆ ಧಾಕಡ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಕಂಗನಾ ಆಗಲೇ ಮತ್ತೊಂದು ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ವಾಯುಸೇನೆಯ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂದು (ಆಗಸ್ಟ್ 21) ಕಂಗನಾ ಐಎಎಫ್ ಸಮವಸ್ತ್ರ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ. ಕಂಗನಾ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಅಂದಹಾಗೆ ಇದು 'ತೇಜಸ್' ಸಿನಿಮಾದ ಫೋಟೋ. ಈ ಚಿತ್ರದಲ್ಲಿ ಕಂಗನಾ ವಾಯುಸೇನೆಯ ಪೈಲೆಟ್ ಆಗಿ ಬಣ್ಣಹಚ್ಚುತ್ತಿದ್ದಾರೆ. ಈ ಚಿತ್ರಕ್ಕಾಗಿ ಕಂಗನಾ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದು, ಅನೇಕ ದಿನಗಳ ತರಬೇತಿ ಕೂಡ ಪಡೆದಿದ್ದಾರೆ. ತೇಜಸ್ ಸಿನಿಮಾದ ಫೋಟೋ ಶೇರ್ ಮಾಡಿ ಕಂಗನಾ, "ನನ್ನ ಮುಂದಿನ ಮಿಷನ್ ತೇಜಸ್. ಇಂದಿನಿಂದ ಅರಂಭವಾಗುತ್ತಿದೆ. ಅದ್ಭುತ ತಂಡಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

  ಈ ಸಿನಿಮಾದ ಬಗ್ಗೆ ಕಂಗನಾ ಈ ಹಿಂದೆಯೇ ಮಾತನಾಡಿ ವಾಯುಸೇನೆ ಪೈಲೆಟ್ ಆಗಿ ಕಾಣಿಸಿಕೊಳ್ಳಲು ಉತ್ಸಕರಾಗಿರುವುದಾಗಿ ಹೇಳಿದ್ದರು. ತೇಜಸ್ ಒಂದು ರೋಮಾಂಚನಕಾರಿ ಕಥೆ. ಅಲ್ಲಿ ನಾನು ವಾಯುಪಡೆಯ ಪೈಟಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ದೇಶಕ್ಕಾಗಿ ಹೋರಾಡುವ ವೀರ ಯೋಧರಿಗೆ ಈ ಸಿನಿಮಾವನ್ನು ಅರ್ಪಣೆ ಮಾಡುತ್ತೇವೆ" ಎಂದು ಕಂಗನಾ ಹೇಳಿದ್ದರು.

  ತೇಜಸ್ ಸಿನಿಮಾ ಘೋಷಣೆಯಾಗಿ ಅನೇಕ ತಿಂಗಳಾಗಿದೆ. ಕಂಗನಾ ಹುಟ್ಟುಹಬ್ಬದ ದಿನ ಮೊದಲ ಲುಕ್ ರಿವೀಲ್ ಆಗಿತ್ತು. ತೇಜಸ್ ಫಸ್ಟ್ ಲುಕ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬಂದಿತ್ತು. ಬಳಿಕ ಚಿತ್ರಕ್ಕಾಗಿ ಯಾವ ರೀತಿ ತರಬೇತಿ ಪೆಡಿದ್ದರು ಎನ್ನುವ ವಿಡಿಯೋವನ್ನು ಸಹ ಶೇರ್ ಮಾಡಿದ್ದರು. ಇದೀಗ ಮತ್ತೊಂದು ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

  ಇತ್ತೀಚಿಗಷ್ಟೆ ಕಂಗನಾಗೆ ಹಾಲಿವುಡ್ ಸಿನಿಮಾದಿಂದ ಬುಲಾವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆಸ್ಕರ್ ಪ್ರಶಸ್ತಿ ವಿಜೇತ ರಸೆಲ್ ಕ್ರೋವ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುರಾವೆ ಎಂದರೆ ಇತ್ತೀಚಿಗಷ್ಟೆ ಕಂಗನಾ ಅಭಿಮಾನಿಗಳು ರಸೆಲ್ ಮತ್ತು ಕಂಗನಾ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಎಂದು ಟ್ವೀಟ್ ಮಾಡಿ ರಸೆಲ್ ಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್ ಅನ್ನು ರಲೆಸ್ ಶೇರ್ ಮಾಡಿ ಸಮ್ಮತಿ ಸೂಚಿಸಿದ್ದರು. ಬಳಿಕ ಇಬ್ಬರೂ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಕಂಗನಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಇನ್ನು ನಟಿ ಕಂಗನಾ ಬಳಿ ಅನೇಕ ಸಿನಿಮಾಗಳಿವೆ. ಇತ್ತೀಚಿಗಷ್ಟೆ ಧಾಕಡ್ ಸಿನಿಮಾ ಮುಗಿಸಿದ್ದಾರೆ. ಯೂರೋಪ್‌ನಲ್ಲಿ ಚಿತ್ರೀಕರಣ ಮುಗಿಸಿ ಕೊನೆಯ ದಿನದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಂಗನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಪಾರ್ಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಧಾಕಡ್ ಮುಗಿಯುತ್ತಿದ್ದಂತೆ ತೇಜಸ್ ಸಿನಿಮಾದ ಚಿತ್ರೀಕರಣದಲ್ಲಿ ಪ್ರಾರಂಭಿಸಿದ್ದಾರೆ. ನಟನೆ ಜೊತೆಗೆ ಮತ್ತೆ ನಿರ್ದೇಶನಕ್ಕೂ ಇಳಿದಿದ್ದಾರೆ. 'ಎಮರ್ಜೆನ್ಸಿ' ಹೆಸರಿನಲ್ಲಿ ಸಿನಿಮಾ ಘೋಷಣೆ ಮಾಡಿದ್ದು, ನಿರ್ದೇಶನದ ತಯಾರಿ ನಡೆಸುತ್ತಿದ್ದಾರೆ.

  English summary
  Bollywood Actress Kangana Ranaut done air force Uniform as she shoots Tejas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X