»   » ಹೃತಿಕ್-ಕಂಗನಾ ಬಗ್ಗೆ ಹೊಸ ಬಾಂಬ್ ಸಿಡಿಸಿದ ಕಂಗನಾ ಮಾಜಿ ಗೆಳೆಯ

ಹೃತಿಕ್-ಕಂಗನಾ ಬಗ್ಗೆ ಹೊಸ ಬಾಂಬ್ ಸಿಡಿಸಿದ ಕಂಗನಾ ಮಾಜಿ ಗೆಳೆಯ

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಹೃತಿಕ್ ರೋಷನ್ ಅವರ ನಡುವಿನ ಹಗ್ಗಜಗ್ಗಾಟದ ಸಮರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದ್ದು, ಇದೀಗ ಹೃತಿಕ್ ಬಗ್ಗೆ ಬ್ಯಾಟಿಂಗ್ ಮಾಡಲು ಕಂಗನಾ ಅವರ ಮಾಜಿ ಪ್ರಿಯಕರ 29 ವರ್ಷದ ಅಧ್ಯಾಯನ್ ಸುಮನ್ ಅವರು ಆಗಮಿಸಿದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದರೂ ಕೂಡ ನಟ ಹೃತಿಕ್ ರೋಷನ್ ಅವರು ಮಾತ್ರ ತುಟಿ ಪಿಟಕ್ ಅನ್ನದೇ ಮೌನ ತಾಳಿರುವುದನ್ನು ಕಂಡು ಕಂಗನಾ ಅವರ ಮಾಜಿ ಗೆಳೆಯ ಅಧ್ಯಾಯನ್ ಸುಮನ್ ಅವರು ಹೃತಿಕ್ ಪರವಾಗಿ ಮಾತನಾಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಕಂಗನಾ-ಹೃತಿಕ್ ವಿಚಾರದ ಕುರಿತಾಗಿ ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಸುಮನ್ ಅವರು "ಫೋಟೋಶಾಪ್ ಬಳಕೆ ಮಾಡಿ ಕಂಗನಾ ಮತ್ತು ಹೃತಿಕ್ ಅವರು ಒಬ್ಬರಿಗೊಬ್ಬರು ತಬ್ಬಿಕೊಂಡು ನಿಂತಿರುವಂತೆ ಸೃಷ್ಟಿ ಮಾಡಲಾಗಿದೆ. ಮಾತ್ರವಲ್ಲದೇ ಆ ಫೋಟೋ ಕುರಿತಂತೆ ತಪ್ಪಾಗಿ ಕಥೆಯನ್ನು ಸೃಷ್ಟಿಸಲಾಗಿದೆ' ಎಂದು ಹೃತಿಕ್ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.[ಹೃತಿಕ್-ಕಂಗನಾ ವಿವಾದದ ಬಗ್ಗೆ ಹೃತಿಕ್ ಮಾಜಿ ಪತ್ನಿ ಏನಂತಾರೆ?]

Actress Kangana's Ex Adhyayan rats on her 50-70 messages to Hrithik

'ಹೃತಿಕ್ ರೋಷನ್ ಬಗ್ಗೆ ಯೋಚಿಸಿದರೆ ಪಾಪ ಎನಿಸುತ್ತದೆ. ಹೃತಿಕ್ ಹಾಗೂ ಅವರ ಕುಟುಂಬದ ಬಗ್ಗೆ ಕರುಣೆ ಹುಟ್ಟುತ್ತಿದೆ. ಪ್ರಕರಣದಿಂದ ಅವರ ಮನಸ್ಸಿಗಾಗುತ್ತಿರುವ ನೋವು ನನಗೆ ಅರ್ಥವಾಗುತ್ತದೆ. ಹಾಗಂದ ಮಾತ್ರಕ್ಕೆ ಹೃತಿಕ್ ಎಲ್ಲಾ ರೀತಿಯಲ್ಲಿ ಸರಿಯಾಗಿದ್ದಾರೆ, ಬರೀ ಕಂಗನಾದೆ ಎಲ್ಲಾ ತಪ್ಪು ಅಂತಾನೂ ನಾನು ಹೇಳುವುದಿಲ್ಲ. ಆದರೆ ಹೃತಿಕ್ ಪರವಾಗಿ ಯಾರಾದರೂ ಮಾತನಾಡಬೇಕು ಅಂತೆನಿಸಿ ನಾನು ಮಾತನಾಡುತ್ತಿದ್ದೇನೆ' ಎಂದಿದ್ದಾರೆ ಸುಮನ್.[ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು]

'ಹೃತಿಕ್ ಗೆ ಕಂಗನಾಳ ಬಗ್ಗೆ ಯಾವುದೇ ಭಾವನೆ ಇರಲಿಲ್ಲ. ಆದರೆ ಕಂಗನಾಗೆ ಹೃತಿಕ್ ಎಂದರೆ ಇಷ್ಟವಿತ್ತು. 'ಕೈಟ್ಸ್' ಚಿತ್ರದ ಚಿತ್ರೀಕರಣಕ್ಕೆಂದು ಕಂಗನಾ ಲಾಸ್ ವೇಗಸ್ ಗೆ ಹೋಗಿದ್ದಳು. ಚಿತ್ರೀಕರಣ ಮುಗಿಸಿ ಬಂದಾಗಿನಿಂದಲೂ ಕಂಗನಾ ಹೃತಿಕ್ ಗುಂಗಲ್ಲೇ ಇದ್ದಳು' ಎಂದು ಸುಮನ್ ಹೊಸ ಬಾಂಬ್ ಸಿಡಿಸಿದ್ದಾರೆ.

'ಒಂದು ದಿನ ಕಂಗನಾಳ ಮೊಬೈಲನ್ನು ನೋಡಿದಾಗ ಹೃತಿಕ್ ಮೊಬೈಲ್ ನಿಂದ ಸುಮಾರು 50-70 ಸಂದೇಶಗಳು ಬಂದಿರುವುದನ್ನು ನೋಡಿದೆ. ಈ ಬಗ್ಗೆ ಕಂಗನಾಳನ್ನು ಕೇಳಿದಾಗ ಸಾಮಾನ್ಯ ಸಂದೇಶಗಳಷ್ಟೇ ಬೇರೇನು ಇಲ್ಲ ಅಂದಿದ್ದಳು'.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]

'ಇದನ್ನು ನಾನು ಕೂಡ ನಂಬಿದ್ದೆ. ಯಾಕೆಂದರೆ ಹೃತಿಕ್ ಹಾಗೂ ಕಂಗನಾ ಇಬ್ಬರೂ ಎಲ್ಲಿಯಾದರೂ ಜೊತೆಗೆ ಸೇರಿದಾಗ, ಹೃತಿಕ್, ಕಂಗನಾಳಿಂದ ಅಂತರ ಕಾಪಾಡುತ್ತಿದ್ದ. ಹೃತಿಕ್ ಗೆ ಕಂಗನಾ ಬಗ್ಗೆ ಯಾವುದೇ ಭಾವನೆಗಳಿರಲಿಲ್ಲ, ಹೀಗಾಗಿ ಕಂಗನಾ ಬಹಳ ಹತಾಶೆಯಲ್ಲಿದ್ದಳು' ಎಂದು ಅಧ್ಯಾಯನ್ ಸುಮನ್ ಅವರು ತಿಳಿಸಿದ್ದಾರೆ.

-
-
-
-
-
-
-
-
-
-
-
-
-
-
-
-
-
-
-
-
-
-
English summary
The brawl between Actress Kangana Ranaut and Actor Hrithik Roshan got much murkier after a recent ‘cosy’ picture of the two made the rounds and now, it seems things are going against the former. the 29-year-old actress’ former boyfriend Actor Adhyayan Suman too extended his support towards Hrithik.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada