»   » ಇಷ್ಟಕ್ಕೂ ಬಟ್ಟೆ ತೊಟ್ಟಿದ್ದಾರೋ ಇಲ್ವೋ ಕತ್ರಿನಾ ಕೈಫ್!

ಇಷ್ಟಕ್ಕೂ ಬಟ್ಟೆ ತೊಟ್ಟಿದ್ದಾರೋ ಇಲ್ವೋ ಕತ್ರಿನಾ ಕೈಫ್!

By: ಉದಯರವಿ
Subscribe to Filmibeat Kannada

ಈ ಫೋಟೋ ನೋಡಿ ಥಟ್ ಅಂಥ ಹೇಳಿ, ಇಷ್ಟಕ್ಕೂ ಕತ್ರಿನಾ ಕೈಫ್ ಬಟ್ಟೆ ತೊಟ್ಟಿದ್ದಾರೋ ಇಲ್ವೋ. ಎರಡೆರಡು ಬಾರಿ ಕಣ್ಣಾಡಿಸಿದರೂ ಮೋಸ ಹೋಗುವುದು ಗ್ಯಾರಂಟಿ. ಮೊದಲ ನೋಟದಲ್ಲಿ ಬಟ್ಟೆ ಇಲ್ವಲ್ಲಾ ಅನ್ನಿಸುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಇದೆ ಅನ್ನಿಸುತ್ತದೆ. ಇನ್ನೂ ಸೂಕ್ಷ್ಮವಾಗಿ ನೋಡಿದರೆ ಇದ್ದೂ ಇಲ್ಲದಂತೆ ಅನ್ನಿಸುತ್ತದೆ!

ಏನು ಅಚ್ಚರಿಯಲ್ಲವೆ? ಈ ರೀತಿ ಅಚ್ಚರಿಗಳನ್ನು ಕೊಡುತ್ತಿರುವ ಬಾಲಿವುಡ್ ಚಿತ್ರ 'ಧೂಮ್ 3'. ಪಾರದರ್ಶಕ ಉಡುಗೆಗಳು ಆಯಿತು, ಬಣ್ಣಬಣ್ಣದ ಬಿಕಿನಿಗಳು ಬಂದವು, ಈಜುಡುಗೆಗಳು ಪಡ್ಡೆಗಳನ್ನು ಒದ್ದೆಮುದ್ದೆ ಮಾಡಿದವು. ಆದರೂ ಪ್ರೇಕ್ಷಕರು ಇನ್ನೂ ವೆರೈಟಿ ಬೇಕೆಂದರು.

ಬಿಚ್ಚಾಟ ಅತಿಯಾಗದಂತೆ ಸೆನ್ಸಾರ್ ಮಂಡಳಿ ನಿಯಮಗಳ ಚೌಕಟ್ಟಿನಲ್ಲಿ ಏನೆಲ್ಲಾ ಸಾಧ್ಯವೋ ಅಷ್ಟನ್ನೂ ಮಾಡಿದರು ನಿರ್ದೇಶಕರು. ಈಗ ನೋಡಿ ಇನ್ನೊಂದು ವೆರೈಟಿ ದೃಶ್ಯ. ಇದು ಇನ್ನೊಂಥರಾ ಪ್ರೇಕ್ಷಕರಿಗೆ ಬಲೆ ಬೀಸುವ ಟ್ರಿಕ್. ಧೂಮ್ 3 ಚಿತ್ರದ ಇನ್ನೊಂದಿಷ್ಟು ದೃಶ್ಯಗಳು ಸ್ಲೈಡ್ ನಲ್ಲಿ...

ಟ್ರೇಲರ್ ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್

ಈ ಟ್ರಿಕ್ ಅದೆಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಕಾದುನೋಡಬೇಕು. ಈಗಾಗಲೆ ಧೂಮ್ 3 ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದೆ. ಚಿತ್ರದಲ್ಲಿ ಅಮೀರ್ ಖಾನ್ ಗೆಟಪ್ ಇನ್ನೊಂದು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ.

ರು.150 ಕೋಟಿ ಬಜೆಟ್ ನ ಚಿತ್ರ

ಧೂಮ್ 3 ಚಿತ್ರದ ಬಜೆಟ್ ರು.150 ಕೋಟಿ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಆದಿತ್ಯ ಚೋಪ್ರಾ ನಿರ್ಮಾಪಕರು.

ತಾರಾಬಳಗದಲ್ಲಿ ಅಭಿಷೇಕ್ ಬಚ್ಚನ್

ಅಮೀರ್ ಖಾನ್, ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಕತ್ರಿನಾ ಕೈಫ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅತ್ಯಂತ ದುಬಾರಿ ಬಜೆಟ್ ನ ಚಿತ್ರ

ಧೂಮ್ ಸೀರೀಸ್ ನಲ್ಲಿ ಬರುತ್ತಿರುವ ಮೂರನೇ ಚಿತ್ರವಿದು. ಭಾರತೀಯ ಚಿತ್ರರಂಗಲ್ಲೇ ಅತ್ಯಂತ ದುಬಾರಿ ಬಜೆಟ್ ನ ಚಿತ್ರ ಎಂಬ ಗರಿಮೆಗೆ 'ಧೂಮ್ 3' ಚಿತ್ರ ಪಾತ್ರವಾಗಿದೆ.

ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ತೆರೆಕಾಣುತ್ತಿರುವ ಚಿತ್ರ

ಡಿಸೆಂಬರ್ 20, 2013ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, 2D ಹಾಗೂ ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ತೆರೆಕಾಣುತ್ತಿರುವ ಮೊದಲ ಬಾಲಿವುಡ್ ಚಿತ್ರವಿದು.

English summary
Here is actress Katrina Kaif stunning look in upcoming Hindi action thriller film Dhoom 3, written and directed by Vijay Krishna Acharya and produced by Aditya Chopra. Dhoom 3 will be released on 20 December 2013 in regular 2D and IMAX formats.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada