For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಅಧಿಕೃತ ಅಂತ್ಯಹಾಡಿದ ಕೊಂಕಣ ಸೇನ್ ಮತ್ತು ರಣವೀರ್ ಷೋರೆ

  |

  ಬಾಲಿವುಡ್ ನಟಿ, ನಿರ್ದೇಶಕಿ ಕೊಂಕಣ ಸೇನ್ ಶರ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 2010ರಲ್ಲಿ ನಟ ರಣವೀರ್ ಷೋರೆ ಜೊತೆ ಸಪ್ತಪದಿ ತುಳಿದಿದ್ದರು. 2020 ಫೆಬ್ರವರಿಯಲ್ಲಿ ಈ ಜೋಡಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದು ಬೇರೆ ಬೇರೆ ಆಗಿದ್ದಾರೆ.

  ಕೊಂಕಣ ಸೇನ್ ಮತ್ತು ರಣವೀರ್ ಷೋರೆ ಅವರದ್ದು ಪ್ರೇಮ ವಿವಾಹ. ಇಬ್ಬರು ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುವಾಗಲೆ ಪ್ರೀತಿ ಪ್ರಾರಂಭವಾಗಿತ್ತು. ನಂತರ 2010ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2011ರಲ್ಲಿ ಈ ದಂಪತಿಗೆ ಮೊದಲ ಮಗು ಜನಿಸಿದೆ. ಹರೂನ್ ಎನ್ನುವ ಮುದ್ದಾದ ಮಗನಿದ್ದಾನೆ.

  ವೈವಾಹಿಕ ಬದುಕಿಗೆ ಅಂತ್ಯ ಹಾಡಿದ ನಟಿ ಮಿನಿಶಾ ಲಂಬಾವೈವಾಹಿಕ ಬದುಕಿಗೆ ಅಂತ್ಯ ಹಾಡಿದ ನಟಿ ಮಿನಿಶಾ ಲಂಬಾ

  ಮದುವೆಯಾಗಿ ಕೇವಲ 5 ವರ್ಷದಲ್ಲಿಯೇ ಕೊಂಕಣ ಸೇನ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಬಳಿಕ ಇಬ್ಬರು ಬೇರೆ ಬೇರೆ ಆಗಿದ್ದಾರೆ. 5 ವರ್ಷಗಳಿಂದ ದೂರ ದೂರ ಆಗಿದ್ದ ಈ ಜೋಡಿ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದರು. ಇದೀಗ ಅಧಿಕೃತವಾಗಿ ದೂರ ದೂರ ಆಗಿದ್ದಾರೆ.

  ರಣವೀರ್ ಪ್ರಕರಣವನ್ನು ವಂದನಾ ಮತ್ತು ಕೊಂಕಣ ಪ್ರಕರಣವನ್ನು ಅಮೃತಾ ಸಾಥೆ ಪಾಠಲ್ ನಿರ್ವಹಿಸುತ್ತಿದ್ದಾರೆ ಈ ಬಗ್ಗೆ ಇಂಗ್ಲೀಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ ಅಮೃತಾ ಸಾಥೆ ಹೌದು, ಕೊಂಕಣ ಮತ್ತು ರಣವೀರ್ ಈಗ ವಿಚ್ಛೇದನ ಪಡೆದಿದ್ದಾರೆ. ಸೌಹಾರ್ದಯುತವಾಗಿ ಬೇರೆ ಬೇರೆಯಾಗಿದ್ದಾರೆ" ಎಂದು ಹೇಳಿದ್ದಾರೆ.

  ನಟಿ ಕೊಂಕಣ ಸೇನ್ ಮತ್ತು ರಣವೀರ್ ಷೋರೆ ಇಬ್ಬರು ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಟ್ರಾಫಿಕ್ ಸಿಗ್ನಲ್, ಮಿಕ್ಸ್ಡ್ ಡಬಲ್ಸ್, ಆಜಾ ನಚ್ಲೆ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಕೆ ಅಭಿನಯಿಸಿದೆ.

  English summary
  Bollywood Actress Konkona Sen and Ranvir Shorey officially granted divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X