»   » ಕಿಸ್ಸರ್ ಬಾಯ್ ಜೊತೆ ಲಿಪ್ ಲಾಕ್ ಕಥೆ ಬಿಚ್ಚಿಟ್ಟ ಕೃತಿ ಖರಬಂದ

ಕಿಸ್ಸರ್ ಬಾಯ್ ಜೊತೆ ಲಿಪ್ ಲಾಕ್ ಕಥೆ ಬಿಚ್ಚಿಟ್ಟ ಕೃತಿ ಖರಬಂದ

Posted By:
Subscribe to Filmibeat Kannada

'ಗೂಗ್ಲಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಬಬ್ಲಿ ಬಬ್ಲಿ ಆಗಿ ಕಾಣಿಸಿಕೊಂಡಿದ್ದ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಕೃತಿ ಖರಬಂದ ಅವರು ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಬಿಟೌನ್ ನ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಅವರ ಜೊತೆ ಹಾರರ್-ಥ್ರಿಲ್ಲರ್ 'ರಾಝ್-4' ನಲ್ಲಿ ಮಿಂಚುತ್ತಿರುವ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.[ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!]

ನಿರ್ದೇಶಕ ವಿಕ್ರಮ್ ಭಟ್ ನಿರ್ದೇಶನ ಮಾಡುತ್ತಿರುವ 'ರಾಝ್ 4' ಚಿತ್ರಕ್ಕಾಗಿ ರೋಮೆನಿಯಾದಲ್ಲಿ ಸತತ 60 ದಿನಗಳ ಕಾಲ ಶೂಟಿಂಗ್ ಮುಗಿಸಿ ಇದೀಗ ಬೆಂಗಳೂರಿಗೆ ವಾಪಸ್ಸಾಗಿರುವ ನಟಿ ಕೃತಿ ಖರಬಂದ ಅವರು 'ರಾಝ್ 4' ಚಿತ್ರದ ಶೂಟಿಂಗ್ ಬಗ್ಗೆ ಖ್ಯಾತ ದಿನಪತ್ರಿಕೆ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಇಲ್ಲಿಯವರೆಗೆ ಪಕ್ಕಾ ಸಂಪ್ರದಾಯಿಕ ಪಾತ್ರಗಳಲ್ಲಿ ಮಿಂಚುವ ಮೂಲಕ ಹುಡುಗರ ಮನಸ್ಸು ಗೆದ್ದಿದ್ದ ನಟಿ ಕೃತಿ ಅವರು ಈ ಚಿತ್ರದಲ್ಲಿ ಮಾತ್ರ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಂತೆ.[ಕೃತಿ ಕರಬಂಧಗೆ ಏರ್ ಪೋರ್ಟ್ ನಲ್ಲಿ ಆಗಿದ್ದೇನು?]

ಇವರ ಜೊತೆ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಹಾಗೂ ನಟ ಗೌರವ್ ಅರೋರ ಅವರು ಮಿಂಚಿದ್ದು ಇವರ ಜೊತೆ ಶೂಟಿಂಗ್ ಮಾಡುವಾಗ ಆದ ಅನುಭವಗಳ ಬಗ್ಗೆ 'ಗೂಗ್ಲಿ' ಬೆಡಗಿ ಹೇಳಿಕೊಂಡಿದ್ದಾರೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಬೋಲ್ಡ್ ಕ್ವೀನ್ ಆದ ಕೃತಿ

'ಚಿರು', 'ಗೂಗ್ಲಿ' ಮತ್ತು 'ಬೆಳ್ಳಿ' ಚಿತ್ರಗಳಲ್ಲಿ ಸಲ್ವಾರ್ ಹಾಗೂ ಸೀರೆ ಉಟ್ಟು ಪಕ್ಕಾ ಸಂಪ್ರದಾಯಸ್ಥ ಹುಡುಗಿಯಾಗಿದ್ದ ಕೃತಿ ಅವರು 'ರಾಝ್ 4' ನಲ್ಲಿ ಮಾತ್ರ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ.[ವಿಜಿ 'ಮಾಸ್ತಿ ಗುಡಿ'ಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್]

ಮೊದಲ ಬಾರಿಗೆ ಹಾರರ್-ಥ್ರಿಲ್ಲರ್ ಚಿತ್ರದಲ್ಲಿ

ಚಿತ್ರಕ್ಕಾಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಿರ್ಧಾರ ತಳೆದ ಕೃತಿ ಅವರು ಇದೇ ಮೊದಲ ಬಾರಿಗೆ ಹಾರರ್ ಥ್ರಿಲ್ಲಿಂಗ್ ಕಹಾನಿಯಲ್ಲಿ ಮಿಂಚಿದ್ದಾರೆ. 'ನಿಗೂಢ ಭಾವನೆ ವಾಸ್ತವವಾಗಿ ಮೂಡಿಬಂದಿದೆ. ನನ್ನ ಸಿನಿ ಜೀವನದಲ್ಲಿ ಈ ರೀತಿಯ ಚಿತ್ರದಲ್ಲಿ ನಾನೆಂದು ನಟಿಸಿರಲಿಲ್ಲ' ಎಂದು ಕೃತಿ ಖರಬಂದ ಹೇಳಿಕೊಂಡಿದ್ದಾರೆ.

ಲಿಪ್ ಲಾಕ್ ಸೀನ್

ಈ ಚಿತ್ರದಲ್ಲಿ ಕೃತಿ ಖರಬಂದ ಅವರು ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಮತ್ತು ನಟ ಗೌರವ್ ಅರೋರ ಅವರ ಜೊತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಚಲಿತಗೊಂಡ ಕೃತಿ

ಇಷ್ಟರವರೆಗೆ ಇಂತಹ ಸೀನ್ ಗಳಲ್ಲಿ ನಟಿಸದ ಕೃತಿ ಅವರು ಮೊದ ಮೊದಲು ಕೊಂಚ ಸಂಕೋಚ ಪಟ್ಟುಕೊಂಡಂರಂತೆ. .ಇದಕ್ಕೂ ಮೊದಲು ನಾನು ಯಾರೊಂದಿಗೂ ಇಷ್ಟೊಂದು ನಿಕಟವಾಗಿ ನಟಿಸಿರಲಿಲ್ಲ. ಮೊದ ಮೊದಲು ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಬೇಕಾದರೆ ಕೊಂಚ ವಿಚಲಿತವಾಗುತ್ತಿದೆ' ಎಂದಿದ್ದಾರೆ ಕೃತಿ.

ಶಾಟ್ ಬೇಗ ಓಕೆ ಮಾಡಿದ್ರಂತೆ ಕೃತಿ

'ಮೊದ-ಮೊದಲು ಸಂಕೋಚ ಆದರೂ ತದನಂತರ ಲೀಲಾಜಾಲವಾಗಿ ಅಭಿನಯಿಸಿದ್ದೇನೆ. ಮುಂದೆ 'ರಾಝ್-4' ರೀತಿಯ ಚಿತ್ರಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ಸುಲಭವಾಗಿ ನಟಿಸಬಲ್ಲೇ' ಎಂದು ಕೃತಿ ನುಡಿದಿದ್ದಾರೆ.

'ಮಾಸ್ತಿ ಗುಡಿ'ಯಲ್ಲೂ ನಾಯಕಿ

ಈಗಾಗಲೇ ದುನಿಯಾ ವಿಜಯ್ ಮತ್ತು ನಾಗಶೇಖರ್ ಅವರ 'ಮಾಸ್ತಿಗುಡಿ' ಚಿತ್ರಕ್ಕೆ ಆಯ್ಕೆಯಾಗಿರುವ ಕೃತಿ ಅವರು ಏಪ್ರಿಲ್ 27 ರಿಂದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿ ಸಮೀಪದ ದಟ್ಟಾರಣ್ಯದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.

ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಲ್ಲ

ನಿರ್ದೇಶಕ ಮಹೇಂದರ್ ಅವರ 'ಪಾಪು' ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಕೃತಿ ಅವರು 'ದಳಪತಿ' ಚಿತ್ರದ ಶೂಟಿಂಗ್ ಮುಗಿಸಿದ್ದು, ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. 'ರಾಝ್ 4' ಡಬ್ಬಿಂಗ್ ಹಾಗೂ ತಮಿಳು ಚಿತ್ರವೊಂದನ್ನು ಮುಗಿಸಿದ ನಂತರವೇ ಮುಂದಿನ ಪ್ರಾಜೆಕ್ಟ್ ಕಡೆ ಹೋಗಲಿದ್ದಾರಂತೆ.

English summary
Kannada Actress Kriti Kharbanda's Bold move in Hindi Movie 'Raaz 4'. Hindi Actor Imran Hashmi and Actor Gaurav Arora in the lead role. The movie is directed by Vikram Bhatt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada