»   » ನಟಿ ಮಧುರಿಮಾ ಹಾಟ್ ವೆಟ್ ಫೋಟೋಗಳು

ನಟಿ ಮಧುರಿಮಾ ಹಾಟ್ ವೆಟ್ ಫೋಟೋಗಳು

By: ರವಿಕಿಶೋರ್
Subscribe to Filmibeat Kannada

ಮುಂಬೈ ಮೂಲದ ಈ ತಾರೆ ಟಾಲಿವುಡ್, ಬಾಲಿವುಡ್ ನಲ್ಲಿ ಒಂದಷ್ಟು ದಿನ ಬಿಜಿಯಾಗಿದ್ದರು. ಈಗ ಖಾಲಿಯಾಗಿದ್ದಾರೆ. ಹಾಗಾಗಿ ಈ ಹಳೆ ಖಯಾಲಿ. ಅದೇನೋ ಈ ತಾರೆಗಳಿಗೆ ಆಗಾಗ ಈ ರೀತಿ ಪಬ್ಲಿಸಿಟಿಗಾಗಿ ಏನೋ ಒಂದು ಗಿಮ್ಮಿಕ್ ಮಾಡುತ್ತಿರುತ್ತಾರೆ.

ಈಗ ಮಧುರಿಮಾ ಎಂಬ ಈ ಬೆಡಗಿ ಕೂಡ ತಮ್ಮ ಹಾಟ್ ಫೋಟೋಗಳ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾರೆ. ಈಕೆಗೆ ಸೃಷ್ಟಿಕರ್ತ ಎಲ್ಲವನ್ನೂ ಕರುಣಿಸಿದ್ದಾನೆ. ರೂಪ ಇದೆ, ಒಳ್ಳೆಯ ಮೈಮಾಟ ಇದೆ. ಆದರೆ ಏನು ಮಾಡುವುದು ಅವಕಾಶಗಳೇ ಇಲ್ಲ.

ಚಿತ್ರೋದ್ಯಮದಲ್ಲಿ ಹೊಸ ತಾರೆಗಳ ಹವಾ ಶುರುವಾಗುತ್ತಿದ್ದಂತೆ ಈ ಹಳೆ ಬೆಡಗಿಯರನ್ನು ಮಾತನಾಡಿಸುವವರೇ ಇಲ್ಲ ಎಂಬಂತಾಗಿದೆ. ಆದರೆ ತಮ್ಮಲ್ಲಿ ಇನ್ನೂ ಕರೆಂಟ್ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಧುರಿಮಾ. ಸ್ಲೈಡ್ ಗಳಲ್ಲಿ ನೋಡಿ ಮಧುರಿಮಾ ಮಧುರ ಚಿತ್ರಗಳು.

ಮಧುರಿಮಾ ಪೂರ್ತಿ ಹೆಸರು ಮಧುರಿಮಾ ಬ್ಯಾನರ್ಜಿ. ಹುಟ್ಟಿದ್ದು ಮುಂಬೈನಲ್ಲಿ ಇಸವಿ ಮೇ 14, 1987. ಗಜಲ್, ಕಥಕ್ ಶೈಲಿಯ ನೃತ್ಯ ಶಿಕ್ಷಣವನ್ನೂ ಪಡೆದಿದ್ದಾರೆ. ಹಿಂದೂಸ್ಥಾನಿ ಸಂಗೀತವೂ ಗೊತ್ತು.

ಕಿರುತೆರೆಯಿಂದ ವೃತ್ತಿ ಜೀವನ ಆರಂಭ

ಕಿರುತೆರೆಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಮಧುರಿಮಾ ಕೆಲವು ಟೆಲಿ ಸೀರಿಯಲ್ ಗಳಲ್ಲೂ ಅಭಿನಯಿಸಿದ್ದಾರೆ. ಕೆಲ ಕಾಲ ಆಂಕರಿಂಗ್ ಸಹ ಮಾಡಿದ್ದರು.

ಬಾಲಿವುಡ್ ಗೆ ಅಡಿಯಿಟ್ಟ ಭಾಮೆ

ಟಿವಿ ಸೀರಿಯಲ್ ಗಳ ಬಳಿಕ 'ಟಾಸ್: ಎ ಫ್ಲಿಪ್ ಆಫ್ ಡೆಸ್ಟಿನಿ' ಎಂಬ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟರು. ಬಳಿಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಮಧುರಿಮಾ ತಂದೆ ಮೆಕಾನಿಕಲ್ ಇಂಜಿನಿಯರ್

ಮಧುರಿಮಾ ತಂದೆ ಮೆಕಾನಿಕಲ್ ಇಂಜಿನಿಯರ್ ಆಗಿ ಇಂಡಿಯನ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ತಾಯಿ ವೈರಾಲಜಿ ಸಂಶೋಧನಾ ವಿಭಾಗದಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡಿ ಕಡೆಗೆ ಕಾದಂಬರಿಗಾರ್ತಿಯಾಗಿ ಬದಲಾದರು.

ಮಧುರಿಮಾ ನ್ಯಾಯಶಾಸ್ತ್ರ ಪದವೀಧರೆ

ಮಧುರಿಮಾ ನ್ಯಾಯಶಾಸ್ತ್ರದಲ್ಲಿ ಡಿಗ್ರಿ ಪಡೆದಿದ್ದಾರೆ. ಶಿಕ್ಷಣ ಮುಗಿದ ಕೂಡಲೆ ಸಿನಿಮಾ ಕ್ಷೇತ್ರದ ಕಡೆಗೆ ಹೊರಳಿದರು. ತನಗಿಂತಲೂ ವಯಸ್ಸಿನಲ್ಲಿ ನಾಲ್ಕು ವರ್ಷದ ಚಿಕ್ಕವಯಸ್ಸಿನ ತಮ್ಮನಿದ್ದಾನೆ.

ಚಿಕ್ಕಂದಿನಲ್ಲೇ ಸಂಗೀತದಲ್ಲಿ ಆಸಕ್ತಿ

ಚಿಕ್ಕಂದಿನಲ್ಲೇ ಸಂಗೀತದಲ್ಲಿ ಆಸಕ್ತಿ, ಡಾನ್ಸ್ ಅಂದರೆ ಎಲ್ಲಿಲ್ಲದ ಪ್ರೀತಿ ಮಧುರಿಮಾಗೆ. ಹಾಗಾಗಿಯೇ ಚಿಕ್ಕಂದಿನಲ್ಲೇ ಅಮ್ಮನ ಬಳಿ ಹಿಂದೂಸ್ಥಾನಿ ಸಂಗೀತ, ಗಜಲ್ ಕಲಿತರು.

ಬಳಿಕ ಕಥಕ್ ಡಾನ್ಸ್ ನಲ್ಲಿ ಶಿಕ್ಷಣ ಪಡೆದರು

ಬಳಿಕ ಕಥಕ್ ಡಾನ್ಸ್ ನಲ್ಲಿ ಶಿಕ್ಷಣ ಪಡೆದರು. ಈ ನಡುವೆ ತಂದೆಯ ಉದ್ಯೋಗ ಬದಲಾದ ಕಾರಣ ಕಥಕ್ ಡಾನ್ಸ್ ಮಧ್ಯಕ್ಕೆ ನಿಲ್ಲಿಸಿದರು.

ಸದ್ಯಕ್ಕೆ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ

ಸದ್ಯಕ್ಕೆ ಸಿನಿಮಾ ಅವಕಾಶಗಳಿಗಾಗಿ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ತಮ್ಮಲ್ಲಿ ಅಡಗಿರುವ ಅಂದಚೆಂದಗಳನ್ನು ತೆರೆದಿಟ್ಟು ನಿರ್ಮಾಪಕ, ನಿರ್ದೇಶಕರ ಕಣ್ಣಿಗೆ ಬೀಳುವ ಪ್ರಯತ್ನ ಮಾಡಿದ್ದಾರೆ.

English summary
Bollywood actress Madhurima is an Indian film actress. Following appearances in various television serials, she made her feature film debut in Toss: A Flip of Destiny (2009) and went on to act in several Telugu films.
Please Wait while comments are loading...