»   » ನರೇಂದ್ರ ಮೋದಿಗೆ ಮೇಘನಾ ಪಟೇಲ್ ನಗ್ನ ಪ್ರಚಾರ

ನರೇಂದ್ರ ಮೋದಿಗೆ ಮೇಘನಾ ಪಟೇಲ್ ನಗ್ನ ಪ್ರಚಾರ

By: ರವಿಕಿಶೋರ್
Subscribe to Filmibeat Kannada

ರಾಜಕೀಯಕ್ಕೂ ಬಣ್ಣದ ಜಗತ್ತಿಗೂ ಬಿಡಿಸಲಾಗದ ನಂಟು. ಇಲ್ಲಿರುವ ಫೋಟೋಗಳನ್ನು ನೋಡಿದರೆ ಅವರಿಬ್ಬರ ನಡುವಿನ ಅಂತರ ಅದೆಷ್ಟು ಹತ್ತಿರ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಅದರಲ್ಲೂ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯದೊಂದಿಗಿನ ಸಿನಿಮಾ ತಾರೆಗಳು ಜುಗಲ್ ಬಂಧಿ ಇನ್ನಷ್ಟು ಬಿರುಸಾಗುತ್ತದೆ.

ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗಾಳಿ ದೇಶದಲ್ಲಿ ಜೋರಾಗಿ ಬೀಸುತ್ತಿದೆ. ಅದು ಯಾವಾಗ ಬಿರುಗಾಳಿ, ಸುಂಟರಗಾಳಿ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ. ಆದರೆ ಈ ಗಾಳಿಗೆ ಈಗಾಗಲೇ ಸಾಕಷ್ಟು ಮಂದಿ ತತ್ತರಿಸಿದ್ದಾರೆ. ಆದರೆ ಕೆಲವರಂತೂ ಈ ಗಾಳಿಯ ಪ್ರಯೋಜವನ್ನೂ ಪಡೆದಿದ್ದಾರೆ.

ಗಾಳಿ ಬಂದಾಗ ತೂರಿಕೊಂಡವರಲ್ಲಿ ಬಹಳಷ್ಟು ಸಿನಿಮಾ ತಾರೆಗಳಿದ್ದಾರೆ. ಅವರಲ್ಲಿ ಮುಖ್ಯವಾಗಿ ನಟ ಸಲ್ಮಾನ್ ಖಾನ್ ತುಂಬ ಮುಂದಿದ್ದಾರೆ. ಶತ್ರುಘ್ನ ಸಿನ್ಹ, ಹೇಮಾ ಮಾಲಿನಿ, ನವಜೋತ್ ಸಿಂಗ್ ಸಿದ್ದು ಹಾಗೂ ಸ್ಮೃತಿ ಇರಾನಿ ಅವರು ಬಿಜೆಪಿಗೆ ಸಾಕಷ್ಟು ಪ್ರಚಾರ ನೀಡುತ್ತಿದ್ದಾರೆ. ಈಗ ಇದಕ್ಕೆ ಹೊಸ ಸೇರ್ಪಡೆ ಮೇಘನಾ ಪಟೇಲ್.

ಭಾರತೀಯ ಜನತಾ ಪಕ್ಷ ಹಾಗೂ ನರೇಂದ್ರ ಮೋದಿಗೆ ಪ್ರಚಾರ ನೀಡಲು ಮೇಘನಾ ಆಯ್ಕೆ ಮಾಡಿಕೊಂಡ ದಾರಿಯೇ ಸಂಪೂರ್ಣ ಭಿನ್ನ. ಎಲ್ಲರೂ ಹೊರಗಡೆ ಹೋಗಿ ಪ್ರಚಾರ ನೀಡಿದರೆ ಮೇಘನಾ ಅವರು ಬಾತ್ ರೂಮಿನಿಂದಲೇ ಪ್ರಚಾರ ಆರಂಭಿಸಿದ್ದಾರೆ!

ಬಿಜೆಪಿ ಪರ ಮೇಘನಾ ಬಿಸಿಬಿಸಿ ಪ್ರಚಾರ

ಮೇಘನಾ ಅವರ ವಿಭಿನ್ನ ಪ್ರಚಾರ ವೈಖರಿಯನ್ನು ಬಿಜೆಪಿ ಪಕ್ಷ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತದೋ ಕಾದುನೋಡಬೇಕು. ಏಕೆಂದರೆ ಈಗಷ್ಟೇ ಮೇಘನಾ ಅವರು ತಮ್ಮ ಬಿಸಿಬಿಸಿ ಪ್ರಚಾರವನ್ನು ಆರಂಭಿಸಿದ್ದಾರೆ. ಬಹುಶಃ ಈ ಚಿತ್ರಪಟಗಳು ಇನ್ನೂ ಬಿಜೆಪಿ ಕಣ್ಣಿಗೆ ಬಿದ್ದಿರುವ ಸಾಧ್ಯತೆಗಳು ಬಹಳ ಕಮ್ಮಿ.

ಇದು ಪ್ರಚಾರವೋ ಅಪಪ್ರಚಾರವೋ?

ಮೇಘನಾ ಅವರ ಪ್ರಚಾರ ವೈಖರಿ ನೋಡಿದರೆ ಇವರು ಬಿಜೆಪಿಗೆ ಪ್ರಚಾರ ನೀಡುತ್ತಿದ್ದಾರೆ ಅಥವಾ ಅಪಪ್ರಚಾರ ನೀಡುತ್ತಿದ್ದಾರೋ ಎಂಬ ಗುಮಾನಿಯೂ ಬರುತ್ತದೆ. ಆದರೆ ಮೇಘನಾ ಅವರೇ ಇದನ್ನು ಪ್ರಚಾರ ಎಂದು ಹೇಳಿಕೊಂಡಿರುವುದರಿಂದ ನಾವೂ ಹಾಗೆಯೇ ಭಾವಿಸಬೇಕಾಗುತ್ತದೆ.

ಕಮಲದ ಹಾಸಿಗೆ ಮೇಲಿಂದಲೇ ಮೋದಿಗೆ ಜೈ

ಕಮಲದ ಹೂಗಳಲ್ಲೇ ತಮ್ಮ ಮೈಮಾಟವನ್ನು ಮುಚ್ಚಿಕೊಂಡು ಕಮಲ ಪಕ್ಷಕ್ಕೆ ಜೈ ಎಂದಿದ್ದಾರೆ ಮೇಘನಾ. ಈ ಬಗ್ಗೆ ಮಾತನಾಡಿರುವ ಮೇಘನಾ, "Narendra Modi is the Man of today. ಭಾರತೀಯ ರಾಜಕೀಯ ಇತಿಹಾಸದಲ್ಲಿ person of great prominence" ಎಂದಿದ್ದಾರೆ.

ಹೂವಿನ ಹಾಸಿಗೆ ಮೇಲೆ ಬಿಜೆಪಿಗೆ ಪ್ರಚಾರ

ಈಗಾಗಲೆ ಸಾಕಷ್ಟು ತಾರೆಗಳು ರಾಜಕೀಯಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ಆದರೆ ಮೇಘನಾ ಮಾತ್ರ ಹೂವಿನ ಹಾಸಿಗೆ ಹಾಸಿಕೊಂಡು ಬಿಜೆಪಿಗೆ ಪ್ರಚಾರ ನೀಡಿ ರಾಜಕೀಯಕ್ಕೆ ಇನ್ನೊಂದಿಷ್ಟು ಕಾವೇರಿಸಿದ್ದಾರೆ.

ಬಿಸಿಬಿಸಿ ಪ್ರಚಾರಕ್ಕೆ ಸದ್ಯಕ್ಕೆ ಅರ್ಧವಿರಾಮ

ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಇನ್ನಷ್ಟು ಮುಂದೆ ಹೋಗಬೇಕಾದರೆ ನರೇಂದ್ರ ಮೋದಿ ಅವರಿಗೆ ಓಟ್ ಮಾಡಿ. We all love you Mr Modi ಎಂದು ಹೇಳಿ ಸದ್ಯಕ್ಕೆ ತಮ್ಮ ಬಿಸಿಬಿಸಿ ಪ್ರಚಾರಕ್ಕೆ ಕಾಮ (ಅರ್ಧ ವಿರಾಮ) ಹಾಕಿದ್ದಾರೆ.

English summary
Bollywood actress Meghna Patel had done a photoshoot to show her support to Gujarat Chief Minister and BJP's prime ministerial candidate Narendra Modi by doing an artistic and aesthetic photo shoot with the lotus flowers all over the body. Lotus flower is the logo of the BJP.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada