For Quick Alerts
  ALLOW NOTIFICATIONS  
  For Daily Alerts

  ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ ಎಡವಟ್ಟು: ಮೌನಿ ರಾಯ್ ಫೋಟೋ ಶೇರ್ ಮಾಡಿ ಕ್ಷಮೆ ಕೇಳಿದ NSE

  |

  ಬಾಲಿವುಡ್ ನ ಹಾಟ್ ನಟಿ, ಕೆಜಿಎಫ್ ಸಿನಿಮಾದ 'ಗಲಿ ಗಲಿ..' ಹಾಡಿಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೌನಿ ರಾಯ್ ಶನಿವಾರದಿಂದ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಸದ್ದು ಮಾಡುತ್ತಿದ್ದಾರೆ.

  ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎಡವಟ್ಟಿನಿಂದ ಮೌನಿ ಸುದ್ದಿಯಲ್ಲಿದ್ದಾರೆ. ಹೌದು, ಎನ್ ಎಸ್ ಇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೌನಿ ರಾಯ್ ಫೋಟೋಗಳನ್ನು ಶೇರ್ ಮಾಡಿದೆ. ಮೌನಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಟ್ವಿಟ್ಟರ್ ಖಾತೆಯಲ್ಲಿ ಮೌನಿ ರಾಯ್ ಫೋಟೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

  ಥೈಲ್ಯಾಂಡ್ ಬೀಚ್ ನಲ್ಲಿ ಹಾಟ್ ಅವತಾರತಾಳಿದ 'ಕೆಜಿಎಫ್' ಸುಂದರಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಚ ಎನ್ ಎಸ್ ಇ ತಕ್ಷಣ ಟ್ವೀಟ್ ಡಿಲೀಟ್ ಮಾಡಿದೆ. ಫೋಟೋ ಜೊತೆಗೆ 'ಟೆಂಪರೇಚರ್ ಹೆಚ್ಚಾಗುತ್ತಿದೆ' ಎಂದು ಕ್ಯಾಪ್ಷನ್ ನೀಡಿದ್ದರು. ಜೊತೆಗೆ ಸೆಕ್ಸಿ ದಿವಾ, ಬ್ಯೂಟಿಫುಲ್ ದಿವಾ, ಹಾಟ್ ಗರ್ಲ್ ಎಂದು ಹ್ಯಾಷ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದರು.

  ಈ ಪೋಸ್ಟ್ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅಲ್ಲದೆ ಅಕೌಂಟ್ ಹ್ಯಾಕ್ ಆಗಿರಬಹುದಾ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ ಫೋಟೋಗಳನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿ, ಹ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

  'ಇಂದು (ಶನಿವಾರ) ಮಧ್ಯಾಹ್ನ 12:25ಕ್ಕೆ ಎನ್ ಎಸ್ ಇ ಹ್ಯಾಂಡಲ್ ನಲ್ಲಿ ಅನಗತ್ಯ ಪೋಸ್ಟ್ ಇತ್ತು. ಇದು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಿರ್ವಹಿಸುವ ಸಂಸ್ಥೆ ಮಾಡಿದ ಮಾನವ ದೋಷ. ಯಾವುದೇ ಹ್ಯಾಕಿಂಗ್ ಅಲ್ಲ. ನಮ್ಮ ಫಾಲೋವರ್ಸ್ ಗೆ ಕ್ಷಮೆಯಾಚಿಸುತ್ತೇೆವೆ.' ಎಂದು ಟ್ವೀಟ್ ಮಾಡಿದ್ದಾರೆ.

  ಆದರೆ ನೆಟ್ಟಿಗರು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಅನ್ನು ಕಾಲೆಳೆಯುತ್ತಿದ್ದಾರೆ. ಟ್ಟಿಟ್ಟರ್ ಖಾತೆ ನಿರ್ವಹಿಸುತ್ತಿರುವವನು ಜಾಸ್ತಿ ಆಲ್ಕೋಹಾಲ್ ಸೇವನೆ ಮಾಡಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಅಂದಹಾಗೆ ಮೌನಿ ರಾಯ್ ಇತ್ತೀಚಿಗಷ್ಟೆ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅದೇ ಫೋಟೋಗಳನ್ನು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಕಪ್ಪು ಮತ್ತು ಗೋಲ್ಡ ಬಣ್ಣದ ಬಟ್ಟೆ ಧರಿಸಿರುವ ಮೌನಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

  English summary
  Bollywood Actress Mouni Roy raises temperature on National stock exchange.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X