For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಅಭಿನಯಿಸ್ತಾರಂತೆ ನಟಿ ನರ್ಗೀಸ್ ಫಕ್ರಿ

  By ರಾಮ್ ಚಂದರ್
  |

  ಚಾಕೊಲೇಟ್ ಬಾಯ್ ರಣಬೀರ್ ಕಪೂರ್ ಜೊತೆಗಿನ 'ರಾಕ್ ಸ್ಟಾರ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ ನರ್ಗೀಸ್ ಫಕ್ರಿ. ಅಮೆರಿಕಾದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಹೆಜ್ಜೆ ಹಾಕಿದ ಈಕೆಗೆ ಹಿಂದಿ ಬರುತ್ತಿರಲಿಲ್ಲ. ಹಾಗಾಗಿ ಚೊಚ್ಚಲ ಚಿತ್ರಕ್ಕೆ ಡಬ್ಬಿಂಗ್ ಹೇಳಲು ಸಾಧ್ಯವಾಗಿರಲಿಲ್ಲ.

  ಈಗ ತಮ್ಮ ಎರಡನೇ ಚಿತ್ರಕ್ಕೆ ಪರ್ಫೆಕ್ಟ್ ಆಗಿದ್ದು 'ಮದ್ರಾಸ್ ಕೆಫೆ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಹೇಳಿಕೊಳ್ಳುವಷ್ಟರ ಮಟ್ಟಿಗೆ ಈಗ ನಗ್ರೀಸ್ ಪಳಗಿದ್ದಾರೆ. ಒನ್ಇಂಡಿಯಾ ಜೊತೆ ಮಾತನಾಡಿರುವ ಅವರು ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

  ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತೀರಾ ಎಂದು ಕೇಳಿದ್ದಕ್ಕೆ, "ಖಂಡಿತ ಅಭಿನಯಿಸಬೇಕು ಎಂಬ ಆಸೆ ತಮಗೂ ಇದೆ. ಆದರೆ ತಮಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು ದೊಡ್ಡ ಸಮಸ್ಯೆ" ಎಂದಿದ್ದಾರೆ. ತಾನು ಇನ್ನೂ ಹಿಂದಿ ಭಾಷೆಯನ್ನೇ ಸರಿಯಾಗಿ ಕಲಿತಿಲ್ಲ ಎನ್ನುತ್ತಾರೆ ನರ್ಗೀಸ್.

  ಕನ್ನಡ ಸೇರಿದಂತೆ ಯಾವುದೇ ದಕ್ಷಿಣ ಭಾರತದ ಚಿತ್ರದಲ್ಲಿ ಅಭಿನಯಿಸಲು ತಾನು ಸಿದ್ಧ. ಆದರೆ, ಭಾಷಾ ಸಮಸ್ಯೆಯೊಂದೇ ತನಗಿರುವ ದೊಡ್ಡ ಸಮಸ್ಯೆ ಎನ್ನುತ್ತಾರೆ. ಕರ್ನಾಟಕ ಮೂಲದ ಬಹಳಷ್ಟು ತಾರೆಗಳು ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ಹಿಂದೆ ಮುಂದೆ ನೋಡುವ ಕಾಲ ಇದು. ಇಂತಹ ದಿನಗಳಲ್ಲಿ ನರ್ಗೀಸ್ ಫಕ್ರಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತೀನಿ ಎಂದು ಹೇಳಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

  English summary
  Actress Nargis Fakhri is gearing up for her second movie in the full-fledged role in Madras Cafe and she has lent her own voice this time. The Bollywood actress spoke to Oneindia about the film and her interest to work in South films. When specifically asked whether she would accept if an offer from Sandalwood comes her away, Nargis Fakhri said that she loves to work here but the language is an issue to her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X