For Quick Alerts
    ALLOW NOTIFICATIONS  
    For Daily Alerts

    'ಮಿಸ್ ಯೂ ಶಂಕರ್, ಬಹಳ ಬೇಗ ನಮ್ಮನ್ನು ಬಿಟ್ಟು ಹೋದ್ರಿ': ಹಿಂದಿ ನಟಿ ಭಾವನಾತ್ಮಕ ಪೋಸ್ಟ್

    |

    ಬಾಲಿವುಡ್ ನಟಿ ನೀನಾ ಗುಪ್ತಾ ಕನ್ನಡ ನಟ ಶಂಕರ್ ನಾಗ್‌ ಅವರನ್ನು ಸ್ಮರಿಸಿಕೊಂಡಿದ್ದಾರೆ. 1984ರಲ್ಲಿ ತೆರೆಕಂಡಿದ್ದ 'ಉತ್ಸವ್' ಚಿತ್ರದಲ್ಲಿ ಶಂಕರ್ ನಾಗ್ ಜೊತೆ ನೀನಾ ಗುಪ್ತಾ ನಟಿಸಿದ್ದರು. ಈ ಸಿನಿಮಾದ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನೀನಾ ''ಮಿಶ್ ಯೂ ಶಂಕರ್ ನಾಗ್'' ಎಂದು ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ.

    ನೀನಾ ಗುಪ್ತಾ ತಮ್ಮ ಆತ್ಮಕಥೆಯ ಮೂಲಕ ಸುದ್ದಿಯಲ್ಲಿದ್ದಾರೆ. 'ಸಚ್ ಕಹೂಂ ತೋ' ಹೆಸರಿನಲ್ಲಿ ಆತ್ಮಕಥೆ ಬರೆದಿರುವ ನೀನಾ ಗುಪ್ತಾ ಅದರಲ್ಲಿ ತಮ್ಮ ಜೀವನದ ಬಹಳ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸನ್ನಿವೇಶವೊಂದರಲ್ಲಿ ಕನ್ನಡ ನಟ ಶಂಕರ್ ನಾಗ್ ಜೊತೆ ನಟಿಸಿದ ವಿಚಾರವನ್ನು ಸಹ ಉಲ್ಲೇಖಿಸಿದ್ದಾರೆ. ಇದೀಗ, ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಶಂಕ್ರಣ್ಣನ ನೆನಪು ಮಾಡಿಕೊಂಡಿದ್ದಾರೆ. ಮುಂದೆ ಓದಿ...

    'ಶಂಕರ್‌ನಾಗ್ ಜೊತೆ ರೊಮ್ಯಾಂಟಿಕ್ ಸೀನ್ ಮಾಡಿದಾಗ': ನೀನಾ ಗುಪ್ತಾ ಹೇಳಿದ್ದೇನು?'ಶಂಕರ್‌ನಾಗ್ ಜೊತೆ ರೊಮ್ಯಾಂಟಿಕ್ ಸೀನ್ ಮಾಡಿದಾಗ': ನೀನಾ ಗುಪ್ತಾ ಹೇಳಿದ್ದೇನು?

    ನಮ್ಮನ್ನು ಬಿಟ್ಟು ಬೇಗ ಹೋದ್ರಿ

    ನಮ್ಮನ್ನು ಬಿಟ್ಟು ಬೇಗ ಹೋದ್ರಿ

    ಗಿರೀಶ್ ಕಾರ್ನಡ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಉತ್ಸವ್' ಸಿನಿಮಾದಲ್ಲಿ ನೀನಾ ಗುಪ್ತಾ ಮತ್ತು ಶಂಕರ್ ನಾಗ್ ನಟಿಸಿದ್ದರು. ಆ ಚಿತ್ರದ ಫೋಟೋವೊಂದನ್ನು ಶೇರ್ ಮಾಡಿರುವ ನೀನಾ ''ಉತ್ಸವ್ ಸಿನಿಮಾದ ಅದ್ಭುತ ಫೋಟೋ ಇದು. ಮಿಸ್ ಯೂ ಶಂಕರ್ ನಾಗ್. ಬಹಳ ಬೇಗ ನಮ್ಮನ್ನು ಬಿಟ್ಟು ಹೋದ್ರಿ'' ಎಂದು ಕ್ಯಾಪ್ಟನ್ ಹಾಕಿದ್ದಾರೆ.

    ಒಳ್ಳೆಯ ಸ್ನೇಹಿತ ಶಂಕರ್ ನಾಗ್

    ಒಳ್ಳೆಯ ಸ್ನೇಹಿತ ಶಂಕರ್ ನಾಗ್

    ''ಶಂಕರ್ ನಾಗ್ ಬಹಳ ಒಳ್ಳೆಯ ವ್ಯಕ್ತಿ. ತುಂಬಾ ಬೋಲ್ಡ್ ಆಗಿ ನಟಿಸುವ ದೃಶ್ಯವಿದ್ದರೂ ನನ್ನ ಬಳಿ ಯಾವ ಕ್ಷಣದಲ್ಲಿ ಕೆಟ್ಟದಾಗಿ ನಡೆದುಕೊಂಡಿಲ್ಲ. ತುಂಬಾ ಕಂಫರ್ಟ್ ಆಗಿ ರೊಮ್ಯಾಂಟಿಕ್ ಸೀನ್ ಮಾಡಿದ್ವಿ. ಆಮೇಲೆ ಶಂಕರ್ ನಾಗ್ ಮತ್ತು ನಾನು ಬಹಳ ಒಳ್ಳೆಯ ಸ್ನೇಹಿತರಾದ್ವಿ. ನನಗೆ ಜೀವನದಲ್ಲಿ ಒಬ್ಬ ಉತ್ತಮ ಸ್ನೇಹಿತ ಸಿಕ್ಕರು'' ಎಂದು ನೀನಾ ಗುಪ್ತಾ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

    ಇಂಟಿಮೇಟ್ ದೃಶ್ಯದಲ್ಲಿ ನಟನೆ

    ಇಂಟಿಮೇಟ್ ದೃಶ್ಯದಲ್ಲಿ ನಟನೆ

    ಉತ್ಸವ್ ಸಿನಿಮಾದಲ್ಲಿ ನಟ ಶಂಕರ್ ನಾಗ್ ಜೊತೆ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಬೇಕಿತ್ತು. ಶೂಟಿಂಗ್‌ಗೂ ಎರಡು ದಿನ ಮುಂಚೆ ಶಂಕರ್ ನಾಗ್ ಅವರನ್ನು ನಿರ್ದೇಶಕ ಗಿರೀಶ್ ಕಾರ್ನಡ್ ಪರಿಚಯ ಮಾಡಿಕೊಟ್ಟರು. ಅವರ ಜೊತೆಗಿನ ಸ್ನೇಹದಿಂದ ಇಂಟಿಮೇಟ್ ದೃಶ್ಯದಲ್ಲಿ ಕಂಫರ್ಟ್ ಆಗಿ ನಟಿಸಲು ಸಾಧ್ಯವಾಯಿತು ಎಂದು ನೀನಾ ಗುಪ್ತಾ ಹೇಳಿಕೊಂಡಿದ್ದರು.

    ನೀನಾ ಗುಪ್ತಾ - ಕಾಸ್ಟಿಂಗ್ ಕೌಚ್ - ಲೈಂಗಿಕ ಕಿರುಕುಳದ ವಿಚಾರವನ್ನ ಹಂಚಿಕೊಂಡ ನಟಿ! | Filmibeat Kannada
    ಅಪಘಾತದಲ್ಲಿ ಶಂಕರ್ ನಾಗ್ ನಿಧನ

    ಅಪಘಾತದಲ್ಲಿ ಶಂಕರ್ ನಾಗ್ ನಿಧನ

    ಕನ್ನಡದ ಖ್ಯಾತ ನಟ-ನಿರ್ದೇಶಕ ಶಂಕರ್ ನಾಗ್ ಬಹಳ ಚಿಕ್ಕ ವಯಸ್ಸಿನಲ್ಲಿ ಅಪಘಾತದಿಂದ ಸಾವನ್ನಪ್ಪಿದರು. 1990 ಸೆಪ್ಟೆಂಬರ್ 30 ರಂದು ಕಾರು ಅಪಘಾತದಲ್ಲಿ ನಿಧನರಾದರು. ಆಗ ಅವರ ವಯಸ್ಸು ಕೇವಲ 35 ವರ್ಷ ಮಾತ್ರ.

    English summary
    Bollywood Actress Neena Gupta shares photo of sandalwood actor Shankar Nag in instagram.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X