ಮದುವೆ ಆಗಿ ಆರು ತಿಂಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ
ಗರ್ಭಿಣಿ ಆಗಿರುವ ವಿಷ್ಯಕ್ಕೆ ಭಾರಿ ಚರ್ಚೆಯಾಗಿದ್ದ ನಟಿ ನೇಹಾ ಧೂಪಿಯಾ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದ ಈ ವಿಷ್ಯವನ್ನ ನೇಹಾ ಧೂಪಿಯ ಪತಿ ಅಂಗದ್ ಬೇಡಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆ ಮೂಲಗಳ ಪ್ರಕಾರ ನವೆಂಬರ್ 18 ರಂದು ಭಾನುವಾರ ಬೆಳಿಗ್ಗೆ ನೇಹಾ ಧೂಪಿಯಾ ಮಗಿವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿತ್ತು.
ಅಂದ್ಹಾಗೆ, ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಈ ವರ್ಷ ಮೇ ತಿಂಗಳಲ್ಲಿ ದಿಢೀರ್ ಅಂತ ಮದುವೆ ಆಗಿದ್ದರು. ಆಗಸ್ಟ್ ತಿಂಗಳಲ್ಲಿ ಗರ್ಭಿಣಿ ಎಂಬ ವಿಚಾರವನ್ನ ಬಹಿರಂಗಪಡಿಸಿದರು. ನವೆಂಬರ್ ತಿಂಗಳಿಗೆ ನೇಹಾ ಮತ್ತು ಅಂಗದ್ ಮದುವೆ ಆಗಿ ಆರು ತಿಂಗಳು ಮಾತ್ರ ಆಗಿದೆ.

ಹೀಗಾಗಿ, ಮದುವೆ ಮುಂಚೆಯೇ ನೇಹಾ ಧೂಪಿಯಾ ಗರ್ಭಿಣಿಯಾಗಿದ್ದರು ಎಂದು ಹೇಳಲಾಗುತ್ತಿತ್ತು. ಬಟ್, ಈ ಬಗ್ಗೆ ಕುಟುಂಬಸ್ಥರು ಯಾರೊಬ್ಬರು ಕೂಡ ಸ್ಪಷ್ಟನೆ ನೀಡಿಲ್ಲ.
ಇದೀಗ, ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಬಾಲಿವುಡ್ ತಾರೆಯರು ಸಂತಸ ವ್ಯಕ್ತಪಡಿಸಿದ್ದು, ಟ್ವಿಟ್ಟರ್ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಕರಣ್ ಜೋಹರ್, ಕಾಜೋಲ್, ಈಶಾ ಗುಪ್ತಾ, ಆಯುಶ್ ಶರ್ಮಾ, ವಿಶ್ ಮಾಡಿದ್ದಾರೆ.


Click it and Unblock the Notifications











