For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್

  |

  ಬಾಲಿವುಡ್ ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ. ಅನುರಾಗ್ ಕಶ್ಯಪ್ ಅತ್ಯಾಚಾರವೆಸಗಿರುವುದಾಗಿ ಪಾಯಲ್ ದೂರಿನಲ್ಲಿ ಆರೋಪಿಸಿದ್ದಾರೆ.

  ಅನುರಾಗ್ ವಿರುದ್ಧ ಐಪಿಸಿ ಸೆಕ್ಷನ್ 376, 354, 341, 342ರ ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಪಾಯಲ್ ಪರ ವಕೀಲ ನಿತಿನ್ ಸತ್ಪೂಟ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ನಟಿ ಪಾಯಲ್ ಸೋಮವಾರ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿ ಮಹಿಳಾ ಕಾನ್ ಸ್ಟೆಬಲ್ ಇಲ್ಲದ ಕಾರಣ ದೂರು ನೀಡಿರಲಿಲ್ಲ.

  ಲೈಂಗಿಕ ಕಿರುಕುಳ ಆರೋಪ: ತನ್ನ ಹೆಸರನ್ನು ಎಳೆದು ತಂದ ಪಾಯಲ್ ವಿರುದ್ಧ ರಿಚಾ ಗರಂ

  ನಟಿ ಪಾಯಲ್ ಕಳೆದ ಶನಿವಾರ ಅನುರಾಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಪಾಯಲ್, ''ಅನುರಾಗ್ ಕಶ್ಯಪ್ ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡು, ಬಲವಂತ ಮಾಡಿದ್ದ. ಪ್ರಧಾನಿ ಮೋದಿ ಅವರು ದಯವಿಟ್ಟು ಆತನ ವಿರುದ್ಧ ಕ್ರಮ ತೆಗೆದುಕೊಳ್ಳಿ. ದೇಶಕ್ಕೆ ಆ ಸತ್ಯ ಏನು ಎಂಬುವುದು ಗೊತ್ತಾಗಲಿ. ಇದರಿಂದ ನನಗೆ ತೊಂದರೆಯಾಗಲಿದೆ ಎನ್ನುವ ಅರಿವು ನನಗಿದೆ. ನಾನು ಅಪಾಯಕ್ಕೆ ಸಿಲುಕಿಕೊಳ್ಳಲಿದ್ದೇನೆ. ನನಗೆ ಸಹಾಯ ಮಾಡಿ'' ಎಂದು ದೂರಿದ್ದರು.

  ಡಾಲಿ ಕೊಟ್ಟ ಲಿಪ್ ಕಿಸ್ ಗೆ ಥ್ಯಾಂಕ್ಸ್ ಹೇಳಿದ ತೆಲುಗು ನಟಿ ಇರಾ | Oneindia Kannada

  ಇದಕ್ಕೆ ಪ್ರತಿಕ್ರಿಯೆ ನೀಡದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಪಾಯಲ್ ಆರೋಪವನ್ನು ತಳ್ಳಿಹಾಕಿದ್ದರು. ಆಧಾರರಹಿತ ಆರೋಪ ಎಂದಿದ್ದರು. ಅಲ್ಲದೆ ಮಾಜಿ ಪತ್ನಿ ಕಲ್ಕಿ ಕೊಚ್ಚಿನ್ ಸಹ ಅನುರಾಗ್ ಬೆಂಬಲಕ್ಕೆ ನಿಂತಿದ್ದರು. ನಟಿ ತಾಪ್ಸಿ ಪನ್ನು, ಸ್ವರ ಭಾಸ್ಕರ್, ರಾಧಿಕಾ ಆಪ್ಟೆ ಸೇರಿದಂತೆ ಅನೇಕರು ಅನುರಾಗ್ ಪರವಾಗಿ ಮಾತನಾಡುತ್ತಿದ್ದಾರೆ.

  English summary
  Actress Payal Ghosh files a rape complaint against Director Anurag Kashyap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X