For Quick Alerts
  ALLOW NOTIFICATIONS  
  For Daily Alerts

  ಜೂ.ಎನ್‌ಟಿಆರ್ ಸಹನಟಿಗೆ ಕಾಡುತ್ತಿದೆ ಖಿನ್ನತೆ: ಸಾಯುವ ಭೀತಿ!

  |

  ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸಾವಿಗೆ ಖಿನ್ನತೆಯೇ ಕಾರಣ ಎನ್ನಲಾಗುತ್ತಿದೆ.

  ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು | KL Rahul | Filmibeat Kannada

  ಸುಶಾಂತ್ ಸಿಂಗ್ ಸಾವಿನ ನಂತರ ಖಿನ್ನತೆ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಹಲವಾರು ನಟ-ನಟಿಯರು ಖಿನ್ನತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಜೂ.ಎನ್‌ಟಿಆರ್ ಜೊತೆ ನಟಿಸಿದ್ದ ನಟಿಯೊಬ್ಬರು ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದ್ದು, ತಾವು ಕೆಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ.

  ಊಸರವಳ್ಳಿ ಸಹನಟಿಗೆ ಖಿನ್ನತೆ

  ಊಸರವಳ್ಳಿ ಸಹನಟಿಗೆ ಖಿನ್ನತೆ

  ಜೂ.ಎನ್‌ಟಿಆರ್-ತಮನ್ನಾ ನಟಿಸಿದ್ದ 'ಊಸರವಳ್ಳಿ' ಸಿನಿಮಾದಲ್ಲಿ ಚಿತ್ರ ಪಾತ್ರ ನಿರ್ವಹಿಸಿದ್ದ ನಟಿ ಪಾಯಲ್ ಘೋಷ್ ಕಳೆದ ಐದು ವರ್ಷದಿಂದ ಖಿನ್ನತೆಯಿಂದ ಬಳಲುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

  ಸಾಯುವ ಭಯ ಕಾಡುತ್ತದೆಯಂತೆ

  ಸಾಯುವ ಭಯ ಕಾಡುತ್ತದೆಯಂತೆ

  ನನಗೆ ಸಾಯುವ ಭಯ ಕಾಡುತ್ತದೆ. ಆಗಾಗ ತೀವ್ರ ಆಘಾತಕ್ಕೆ ಒಳಗಾಗುತ್ತೇನೆ. 'ನನಗೆ ಸಾಯುವ ಭಯ ಕಾಡುತ್ತದೆ. ಯಾರೊ ಕೊಲ್ಲುತ್ತಾರೆ ಎನಿಸುತ್ತಾರೆ, ಕೂಡಲೆ ನಾನು ಕೋಕಿಲಾಬೆನ್ ಆಸ್ಪತ್ರೆಗೆ ಹೋಗುತ್ತೇನೆ' ಎಂದು ತಾವೆದುರಿಸುತ್ತಿರುವ ಸಮಸ್ಯೆ ಬಗ್ಗೆ ಬರೆದುಕೊಂಡಿದ್ದಾರೆ ಪಾಯಲ್.

  'ಕುಟುಂಬದವರು, ಸ್ನೇಹಿತರು ಸಹಾಯ ಮಾಡುತ್ತಾರೆ'

  'ಕುಟುಂಬದವರು, ಸ್ನೇಹಿತರು ಸಹಾಯ ಮಾಡುತ್ತಾರೆ'

  ಈ ರೀತಿಯ ಆಘಾತಗಳಾದಾಗ ನನಗೆ ನನ್ನ ಕುಟುಂಬದವರು, ಸ್ನೇಹಿತರು ಬೆಂಬಲ ಕೊಡುತ್ತಾರೆ. ನನ್ನ ಈ ಅಸಂಬಂಧ್ಧ ವರ್ತನೆಗಳನ್ನೆಲ್ಲಾ ಅವರು ಸಹಿಸಿಕೊಂಡು ಸಹಕರಿಸುತ್ತಿದ್ದಾರೆ. ನಾನು ಮಾನಸಿಕ ಆರೋಗ್ಯಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ನಟಿ.

  'ತಾಯಿ ಮತ್ತು ತಂಗಿಗೂ ಹೀಗೆ ಆಗುತ್ತದೆ'

  'ತಾಯಿ ಮತ್ತು ತಂಗಿಗೂ ಹೀಗೆ ಆಗುತ್ತದೆ'

  ಮುಂದುವರೆದು, 'ಈ ಮಾನಿಸಕ ಆಘಾತಗಳು ಅನುವಂಶಿಕವಾಗಿ ನನಗೆ ಬಂದಿವೆ. ನನ್ನ ತಾಯಿಗೂ ಹೀಗೆ ಆಗುತ್ತಿತ್ತು, ನನ್ನ ಸಹೋದರಿಗೂ ಆಗುತ್ತದೆ, ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ, ನಾನು ಸಂತೋಷವಾಗಿದ್ದೇನೆ. ನನ್ನ ಜೀವನವನ್ನು ನಾನು ಪ್ರೀತಿಸುತ್ತಿದ್ದೇನೆ' ಎಂದಿದ್ದಾರೆ ನಟಿ.

  ಜೂ.ಎನ್‌ಟಿಆರ್‌ ಬೆಂಬಲಕ್ಕೆ ನಿಂತಿದ್ದ ನಟಿ

  ಜೂ.ಎನ್‌ಟಿಆರ್‌ ಬೆಂಬಲಕ್ಕೆ ನಿಂತಿದ್ದ ನಟಿ

  ಜೂ.ಎನ್‌ಟಿಆರ್ ಅಭಿಮಾನಿಗಳ ಮೇಲೆ ಮೀರಾ ಚೋಪ್ರಾ ಗರಂ ಆಗಿದ್ದಾಗ, ಎನ್‌ಟಿಆರ್ ಬೆಂಬಲಕ್ಕೆ ನಿಂತಿದ್ದ ನಟಿ ಪಾಯಲ್ ಘೋಷ್, ಎನ್‌ಟಿಆರ್‌ ಗೆ ಮಹಿಳೆಯರನ್ನು ಗೌರವಿಸುವುದು ಗೊತ್ತು' ಎಂದಿದ್ದರು. ಅದಕ್ಕೆ ಘಟನೆಯನ್ನು ಉದಾಹರಣೆಯಾಗಿಯೂ ನೀಡಿದ್ದರು.

  English summary
  Actress Payal Ghosh said she is suffering from depression from past five years. She said she frequently had panic attacks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X