»   » ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 'ಮೊಹೆಂಜೋದಾರೊ' ಬೆಡಗಿ

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 'ಮೊಹೆಂಜೋದಾರೊ' ಬೆಡಗಿ

Posted By: Sonu Gowda
Subscribe to Filmibeat Kannada

ದಕ್ಷಿಣ ಭಾರತದಲ್ಲಿ ಮೋಡಿ ಮಾಡಿ ಇದೀಗ 'ಮೊಹೆಂಜೋದಾರೊ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಟ್ಟವರು ಕರಾವಳಿ ಬೆಡಗಿ ಕನ್ನಡತಿ ನಟಿ ಪೂಜಾ ಹೆಗ್ಡೆ ಅವರು.

ಇನ್ನು ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು ಚಿತ್ರದಲ್ಲಿ ನಟಿ ಪೂಜಾ ಮಾಡಿದ ಅದ್ಭುತ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ನಟನೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಕೂಡ ಹಾಡಿ ಹೊಗಳಿದ್ದರು.['ಮೊಹೆಂಜೋದಾರೊ'ದಲ್ಲಿ ಹೃತಿಕ್ ಪಟ್ಟದರಸಿಯಾದ ಪೂಜಾ ಹೆಗ್ಡೆ]

Actress Pooja Hegde diagnosed with dengue

ಈಗಾಗಲೇ 'ಮೊಹೆಂಜೋದಾರೊ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಪ್ರೊಮೋಷನ್ ನಲ್ಲಿ ಬಿಜಿಯಾಗಿದೆ. ನಟ ಹೃತಿಕ್ ರೋಷನ್ ಸೇರಿದಂತೆ ನಟಿ ಪೂಜಾ ಹೆಗ್ಡೆ ಅವರು ಕೂಡ ಪ್ರೊಮೋಷನ್ ನಲ್ಲಿ ಭಾಗವಹಿಸಬೇಕಿತ್ತು.

ಆದರೆ ನಟಿ ಪೂಜಾ ಹೆಗ್ಡೆ ಅವರಿಗೆ ಡೆಂಗ್ಯೂ ಜ್ವರ ಕಾಡುತ್ತಿರುವುದರಿಂದ ಚಿತ್ರದ ಯಾವುದೇ ಪ್ರೊಮೋಷನ್ ನಲ್ಲಿ ಭಾಗವಹಿಸುತ್ತಿಲ್ಲ. ಕೆಲ ದಿನಗಳ ಹಿಂದೆ ಮೆಡಿಕಲ್ ಚೆಕಪ್ ಮಾಡಿಸಿಕೊಂಡಿದ್ದ ಪೂಜಾ ಅವರಿಗೆ ಡೆಂಗ್ಯೂ ಜ್ವರ ಇರೋದು ಪಕ್ಕಾ ಆಗಿದೆ.

Actress Pooja Hegde diagnosed with dengue

ಆದ್ದರಿಂದ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದ ನಟಿ ಪೂಜಾ ಹೆಗ್ಡೆ ಅವರು ಸದ್ಯಕ್ಕೆ ಯಾವುದೇ ಪ್ರೊಮೋಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

English summary
'Mohenjo Daro' Actress Pooja Hegde is down with dengue and will have to miss out on promotional events. Pooja Hegde, the leading lady opposite Hrithik Roshan in 'Mohenjo Daro'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada