»   » ನೂರು ಕೋಟಿ ಮೇಲೆ ಕಣ್ಣಿಟ್ಟ ನಟಿ ಪೂನಂ ಪಾಂಡೆ

ನೂರು ಕೋಟಿ ಮೇಲೆ ಕಣ್ಣಿಟ್ಟ ನಟಿ ಪೂನಂ ಪಾಂಡೆ

Posted By:
Subscribe to Filmibeat Kannada

ಎಲ್ಲರ ಕಣ್ಣು ಬಾಲಿವುಡ್ ನಟಿ, ಟ್ವಿಟ್ಟರ್ ರಾಣಿ ಪೂನಂ ಪಾಂಡೆ ಮೇಲೆ ಬಿದ್ದರೆ, ಅವರು ಮಾತ್ರ ನೂರು ಕೋಟಿ ಮೇಲೆ ಕಣ್ಣಾಕಿದ್ದಾರೆ. ಬಾಲಿವುಡ್ ನ ಸ್ಟಾರ್ ನಟರ ಚಿತ್ರಗಳೇ ನೂರು ಕೋಟಿ ಕ್ಲಬ್ ಸೇರಲು ಹರಸಾಹಸ ಪಡುತ್ತಿವೆ. ಇಂತಹ ಸಂದರ್ಭದಲ್ಲಿ ತಾನು ನೂರು ಕೋಟಿ ಕ್ಲಬ್ ಸೇರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಪೂನಂ.

ತಮ್ಮ 'ನಶಾ' (2013) ಚಿತ್ರವನ್ನು ಸರಿಯಾಗಿ ಪ್ರಚಾರ ಮಾಡಿದ್ದರೆ ಆಗಲೇ ತಾವು ನೂರು ಕೋಟಿ ಕ್ಲಬ್ ಸೇರುತ್ತಿದ್ದೆ. ಆದರೆ ನಿರ್ಮಾಪಕರು ಚಿತ್ರವನ್ನು ಸರಿಯಾಗಿ ಪ್ರೊಮೋಟ್ ಮಾಡದೆ ಚಿತ್ರ ನಿರೀಕ್ಷಿಸಿದಷ್ಟು ಸದ್ದು ಮಾಡಲಿಲ್ಲ ಎಂದು ಟ್ವೀಟಿಸಿ ತಮ್ಮ ಅಸಮಾಧಾನದ ಹೊಗೆಯನ್ನು ಉಗುಳಿದ್ದಾರೆ. [ಟ್ವಿಟ್ಟರ್ ಜೊತೆ ಪೂನಂ ಪಾಂಡೆ 10 ಕೋಟಿ ಡೀಲ್!]

ಈಗ ತಮಗೆ ಐನಾತಿ ನಿರ್ಮಾಪಕರೊಬ್ಬರು ಸಿಕ್ಕಿದ್ದು ಅವರೊಂದಿಗೆ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇನೆ. ಆ ನಿರ್ಮಾಪಕರಂತಲ್ಲಾ ಈ ನಿರ್ಮಾಪಕರು. ಈ ಚಿತ್ರ ಖಂಡಿತ ನೂರು ಕೋಟಿ ಕ್ಲಬ್ ಸೇರುತ್ತದೇ ನೋಡ್ತಾ ಇರಿ ಎಂದು ಕಣ್ಣು ಮಿಟುಕಿಸಿದ್ದಾರೆ ಪೂನಂ ಪಾಂಡೆ.

ನಶಾ ಚಿತ್ರ ನೂರು ಕೋಟಿ ಕ್ಲಬ್ ಸೇರಲಿಲ್ಲ

ನಶಾ ಚಿತ್ರವನ್ನು ಪ್ರಮೋಟ್ ಮಾಡಲು ನಿರ್ಮಾಪಕರ ಬಳಿ ಆಗ ದುಡ್ಡಿರಲಿಲ್ಲ. ಹಾಗಾಗಿ ಆ ಚಿತ್ರ ಬಾಕ್ಸ್ ಆಫೀಸಲ್ಲಿ ದುಡ್ಡು ಬಾಚಿದರೂ ನೂರು ಕೋಟಿ ಕ್ಲಬ್ ಸೇರಲಿಲ್ಲ. ಇದೀಗ ತಮಗೆ ತುಂಬಾ ಇಂಟರೆಸ್ಟಿಂಗ್ ಆಗಿರುವ ಸ್ಕ್ರಿಪ್ಟ್ ಸಿಕ್ಕಿದೆ. ಜೊತೆಗೆ ವಿಘ್ನೇಶ್ವರನ ಕೃಪೆಯೂ ಇದೆ ಎಂದಿದ್ದಾರೆ.

ಪೂನಂ ಪಾಂಡೆ ಜೊತೆಗೆ ಮೂರು ಚಿತ್ರಗಳು

ದಿ ವರ್ಲ್ಡ್ ನೆಟ್ ವರ್ಕ್ಸ್ ಎಂಬ ಸಂಸ್ಥೆ ತಮ್ಮ ಮುಂದಿನ ಚಿತ್ರವನ್ನು ನಿರ್ಮಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರ ಇದಾಗಿದೆ ಎನ್ನುತ್ತಾರೆ ಪೂನಂ. ಇಂಟರ್ ನೆಟ್ ನಲ್ಲಿ ಪೂನಂಗೆ ಬೇರಾರು ಸಾಟಿ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಅವರೊಂದಿಗೆ ಮೂರು ಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ ದಿ ವರ್ಲ್ಡ್ ನೆಟ್ ವರ್ಕ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಕುಮಾರ್ ಎಂಜಿ.

ಇದೇ ಮೊದಲ ಬಾರಿಗೆ ಪೂನಂ ಜೊತೆಗೆ ಒಪ್ಪಂದ

ಇದರ ಜೊತೆಗೆ ಮುಂಬರುವ ಎರಡು ವರ್ಷಗಳಲ್ಲಿ ಒಟ್ಟು ಐದು ಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ. ಈ ಹಿಂದೆ ನಮ್ಮಲ್ಲಿ ಬಂಡವಾಳ ಹೂಡಲು ಸಾಕಷ್ಟು ಮಂದಿ ಬಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಪೂನಂ ಜೊತೆ ಚಿತ್ರವನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ ಕುಮಾರ್.

ಕಥೆ ಖಡಕ್ ಆಗಿದೆ, ಪ್ರಚಾರ ಜೋರಾಗಿರುತ್ತದೆ

ಇದೀಗ ಪೂನಂ ಜೊತೆಗಿನ ಚಿತ್ರದ ಕಥೆ ಬಹಳ ಸೊಗಸಾಗಿದೆ. ಜೊತೆಗೆ ಚಿತ್ರವನ್ನು ಸರಿಯಾದ ಪ್ರಚಾರ ನೀಡುತ್ತೇವೆ. ಪೂನಂ ಜೊತೆಗಿದ್ದಾರೆ ಎಂದರೆ ಈ ಬಾರಿ ನಾವು ಸುಲಭವಾಗಿ ನೂರು ಕೋಟಿ ಕ್ಲಬ್ ಸೇರುತ್ತೇವೆ ಎಂದು ಅಖಂಡ ವಿಶ್ವಾಸದಲ್ಲಿ ಹೇಳಿದ್ದಾರೆ ನಿರ್ಮಾಪಕರು.

ಲವ್ ಈಸ್ ಪಾಯಿಸನ್ ಯಾಕೆ ಮಕಾಡೆ ಮಲಗಿತು?

ಪೂನಂ ಪಾಂಡೆ ಸ್ಟೆಪ್ ಹಾಕಿದ್ದ ಕನ್ನಡ ಚಿತ್ರ 'ಲವ್ ಈಸ್ ಪಾಯಿಸನ್' ಚಿತ್ರ ಮಕಾಡೆ ಮಲಗಿತು. ಈ ಚಿತ್ರಕ್ಕೆ ಪೂನಂ ಪಾಂಡೆ ಸಾಕಷ್ಟು ಪ್ರಚಾರ ಕೊಟ್ಟರೂ ಪ್ರಯೋಜನವಾಗಲಿಲ್ಲ. ಚಿತ್ರ ಹತ್ತು ಕೋಟಿ ಕ್ಲಬ್ ಸಹ ಸೇರಲಿಲ್ಲ ಎಂಬುದು ದುರಂತ.

English summary
After a Sensational debut in Nasha (2013), Poonam Pandey is all set to begin shooting for her next. Interestingly, Sources have it that Poonam wanted to be very careful whom she chose to associate with as producers and had no qualms waiting. Poonam wanted the right script and the right people backing the film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada