»   » 'ಆಸ್ಕರ್ ಪ್ರಶಸ್ತಿ'ಯಲ್ಲಿ ಮಿಂಚಲು ಪಿಗ್ಗಿ ಮಾಡಿದ ಖರ್ಚೆಷ್ಟು?

'ಆಸ್ಕರ್ ಪ್ರಶಸ್ತಿ'ಯಲ್ಲಿ ಮಿಂಚಲು ಪಿಗ್ಗಿ ಮಾಡಿದ ಖರ್ಚೆಷ್ಟು?

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಅವರು ಸದ್ಯಕ್ಕೆ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆದ ನಟಿ. ಈ ಮೊದಲು ಹಾಲಿವುಡ್ ನಟ ಲಿಯೋನಾರ್ಡೋ ಡಿಕಾಪ್ರಿಯೋ ಅವರ ಜೊತೆ ಹಾಲಿವುಡ್ ಸಿನಿಮಾದಲ್ಲಿ ಮಿಂಚುವ ಮೂಲಕ ಸುದ್ದಿ ಮಾಡಿದ್ದ ನಟಿ ಪಿಗ್ಗಿ ಇದೀಗ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಭಾರಿ ಸುದ್ದಿ ಮಾಡಿದ್ದಾರೆ.

ಫೆಬ್ರವರಿ 29, ಸೋಮವಾರದಂದು ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ಅವರು ಸಖತ್ತಾಗಿ ಮಿಂಚುತ್ತಿದ್ದರು. ಜೊತೆಗೆ ಅವರು ಧರಿಸಿದ್ದ ಬಟ್ಟೆಯಂತೂ ಎಲ್ಲರ ಕಣ್ಣು ಕುಕ್ಕುತ್ತಿತ್ತು.[ಆಸ್ಕರ್ ಅಂಗಳದಲ್ಲಿ ಪ್ರಿಯಾಂಕಾ ಛೋಪ್ರಾಗೆ ಹೊಸ ಪಾತ್ರ]

38 ವರ್ಷದ ಚೆಲುವೆ ಪಿಕ್ಕಿ ಅವರು ಅತ್ಯಂತ ಬೆಲೆಬಾಳುವ ಸುಂದರ ಗೌನ್ ನಲ್ಲಿ ತಮ್ಮ ಒನಪು ವಯ್ಯಾರಗಳಿಂದ ಇನ್ನಷ್ಟು ಹಾಟ್ ಆಗಿ ರೆಡ್ ಕಾರ್ಪೆಟ್ ನಲ್ಲಿ ಮಿಂಚುತ್ತಿದ್ದರು.[ಲಿಯಾನಾರ್ಡೋ ಡಿಕಾಪ್ರಿಯೋಗೆ ಕೊನೆಗೂ ಆಸ್ಕರ್ ಸಿಕ್ತು!]

ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕ ಚೋಪ್ರಾ ಅವರು ಅಷ್ಟಕ್ಕೂ ತಮ್ಮ ಗೌನ್ ಗೆ ಹಾಗೂ ಜ್ಯುವೆಲ್ಲರಿಗಳಿಗೆ ಎಷ್ಟು ಖರ್ಚು ಮಾಡಿರಬಹುದು ಗೊತ್ತಾ? ಎಷ್ಟು ಅಂತ ನಾವು ಹೇಳ್ತೀವಿ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

ಕೇಂದ್ರ ಬಿಂದುವಾದ ಪ್ರಿಯಾಂಕ

ಇದೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಿಂಚಿದ್ದ ಮಾಜಿ ವಿಶ್ವಸುಂದರಿ ಪಿಗ್ಗಿ ಅವರು ತಮ್ಮ ಉಡುಪು ಹಾಗೂ ತಮ್ಮ ವಯ್ಯಾರದಿಂದ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಕರ್ಷಕವಾಗಿ ಕಾಣುತ್ತಿದ್ದ ಪಿಗ್ಗಿ

ಬೆಳ್ಳಗಿನ ತೆಳುವಾದ ಆಫ್ ಶೋಲ್ಡರ್ ಗೌನ್ ಹಾಗೂ ಅದಕ್ಕೆ ತಕ್ಕಂತೆ ಮ್ಯಾಚ್ ಆಗುವ ವಜ್ರದ ಆಭರಣಗಳನ್ನು ಧರಿಸಿದ್ದ ಪಿಗ್ಗಿ ಅವರು ಅತ್ಯಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದರು.

ಅರೇಬಿಕ್-ಹಾಲಿವುಡ್ ಸ್ಟೈಲ್

ಕಾಸ್ಟ್ಯೂಮ್ ಡಿಸೈನರ್ ಜುಹೈರ್ ಮುರಾದ್ ಸಿದ್ಧಪಡಿಸಿದ್ದ ಕಲಾತ್ಮಕವಾದ ಆಫ್ ಶೋಲ್ಡರ್ ಗೌನ್ ಗೆ ಪಿಗ್ಗಿ ಧರಿಸಿದ್ದ ವಜ್ರದ ಆಭರಣಗಳು ಹೆಚ್ಚು ಮೆರಗು ತಂದಿದ್ದವು. ಅರೇಬಿಕ್-ಹಾಲಿವುಡ್ ಶೈಲಿಯ ಸಂಗಮವೆನಿಸಿದ ಗೌನ್ ಅನ್ನು ನಟಿ ಪ್ರಿಯಾಂಕ ಅವರಿಗಾಗಿಯೇ ಡಿಸೈನರ್ ಜುಹೈರ್ ಅವರು ತಯಾರು ಮಾಡಿದ್ದರು.

ವಜ್ರದ ಆಭರಣಗಳ ಬೆಲೆ ಎಷ್ಟು

ಇನ್ನು ನಟಿ ಪ್ರಿಯಾಂಕ ಅವರು ಧರಿಸಿದ್ದ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 8 ಮಿಲಿಯನ್ ಡಾಲರ್ ಅಂದರೆ ನಮ್ಮ ಭಾರತದ ರೂಪಾಯಿಗಳಲ್ಲಿ, ರೂ.54 ಕೋಟಿ, 77 ಲಕ್ಷ.

ಅತ್ಯಾಕರ್ಷವಾದ ವಜ್ರದ ಉಂಗುರ

ನಟಿ ಪ್ರಿಯಾಂಕ ಅವರು ಧರಿಸಿದ್ದ ವಜ್ರದ ಕಿವಿಯೋಲೆ ಮತ್ತು ವಜ್ರದ ಉಂಗುರಗಳು ಕೂಡ ತುಂಬಾ ಅತ್ಯಾಕರ್ಷಕವಾಗಿದ್ದವು. ಇನ್ನು ಪಿಗ್ಗಿ ಅವರಿಗೆ ತಮ್ಮ ಆಭರಣಗಳು ಎಷ್ಟು ಅಮೂಲ್ಯ ಹಾಗೂ 'ನನಗೆ ನಾನು ದೇವತೆ ಎಂಬ ಭಾವನೆ ಮೂಡುತ್ತಿದೆ' ಎಂದು ಪಿಗ್ಗಿ ಅವರು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಹುಡುಗಿಯರಿಗೆ ಡೈಮಂಡ್ ಫ್ರೆಂಡ್ಸ್ ಇದ್ದಂತೆ

ಇನ್ನು ಆಕರ್ಷಕ ವಜ್ರದ ಆಭರಣ ಧರಿಸಿ ಮಿಂಚುತ್ತಿದ್ದ ಪಿಗ್ಗಿ ಅವರು 'ಡೈಮಂಡ್ಸ್ ಗಳು ಹುಡುಗಿಯರಿಗೆ ಅತ್ಯುತ್ತಮ ಗೆಳೆಯರು ಇದ್ದಂತೆ' ಎಂದು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.

English summary
Hindi Actress Priyanka Chopra made her debut at the 'Oscars 2016' red carpet and our desi girl looked stunning in a white 'Zuhair Murad strapless gown'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada