»   » ನಟಿ ಪ್ರಿಯಾಂಕಾ ಚೋಪ್ರಾ ಮದುವೆಗೂ ಮುನ್ನ ತಾಯಿ!

ನಟಿ ಪ್ರಿಯಾಂಕಾ ಚೋಪ್ರಾ ಮದುವೆಗೂ ಮುನ್ನ ತಾಯಿ!

Posted By:
Subscribe to Filmibeat Kannada

ಮದುವೆಯಾದ ಮೇಲೆ ತಾಯಿಯಾಗಬೇಕೆಂದು ಹಂಬಲಿಸುವುದು ಹೆಣ್ಣಿನ ಸಹಜ ಗುಣಗಳಲ್ಲಿ ಒಂದು. ಆದರೆ ಮದುವೆಗೂ ಮುನ್ನವೇ ತಾಯಿಯಾಗಬೇಕೆಂದರೆ ಸಮಾಜ ಒಪ್ಪುತ್ತಾ? ಸಮಾಜ ಒಪ್ಪುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಮಾತ್ರ ಆ ಸಾಹಸಕ್ಕೆ ಕೈಹಾಕಿದ್ದಾರೆ.

ಇನ್ನೂ ಒಂದು ವರ್ಷ ಮದುವೆಯಾಗುವ ಯಾವುದೇ ಸೂಚನೆಯನ್ನೂ ಪ್ರಿಯಾಂಕಾ ಚೋಪ್ರಾ ನೀಡಿಲ್ಲದಿದ್ದರೂ, ತಾನು ತಾಯಿಯಾಗಬೇಕೆಂದಿದ್ದೇನೆ ಎಂದು ಹೇಳಿ ಬಾಲಿವುಡ್ ನಲ್ಲಿ ಬಾಂಬ್ ಸಿಡಿಸಿದ್ದಾರೆ. ಈ ವಿಷಯವನ್ನು ಸ್ವತಃ 'ಫಿಲ್ಮಫೇರ್' ಫೆಬ್ರವರಿ ಸಂಚಿಕೆಯಲ್ಲಿ ಅವರು ಬಹಿರಂಗಪಡಿಸಿದ್ದಾರೆ. [ಪ್ರಿಯಾಂಕಾ ಚೋಪ್ರಾ ಹಾಟ್ ವಿಡಿಯೋ ಭರ್ಜರಿ ಕ್ಲಿಕ್]

Actress Priyanka Chopra

ಈ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದ ಹೈಲೈಟ್ ಗಳಲ್ಲಿ ಪ್ರಿಯಾಂಕಾ ತಾಯಿಯಾಗುತ್ತಿರುವುದು ಒಂದು. ಮುಖಪುಟ ಲೇಖನದಲ್ಲಿ ಅವರ ಫೋಟೋ ಹಾಗೂ ತಾಯಿಯಾಗಬೇಕೆಂಬ ಅವರ ಹೇಳಿಕೆ ಎರಡೂ ಅಚ್ಚಾಗಿದ್ದು ಅಭಿಮಾನಿಗಳ ಹೃದಯದಲ್ಲಿ ಸುನಾಮಿ ಎಬ್ಬಿಸಿದೆ.

ಈ ಸಂದರ್ಶನದ ಸಂಪೂರ್ಣ ವಿವರಗಳು ತಿಳಿಯಬೇಕಾದರೆ ಫೆಬ್ರವರಿ 25ರ ತನಕ ಕಾಯಬೇಕು. ಏಕೆಂದರೆ ಫೆಬ್ರವರಿ ಫಿಲಂಫೇರ್ ಸಂಚಿಕೆ ಬಿಡುಗಡೆಯಾಗುತ್ತಿರುವುದೇ ಅಂದು. ಒನ್ ಸೈಡ್ ಲವ್ ನಲ್ಲಿರುವ ಪ್ರಿಯಾಂಕಾ ತಾಯಿಯಾಗುತ್ತಿರುವ ರಹಸ್ಯ ಸದ್ಯಕ್ಕೆ ಗುಟ್ಟಾಗಿಯೇ ಇದೆ.

ಇನ್ನು ಪ್ರಿಯಾಂಕಾ ಚೋಪ್ರಾ ಚಿತ್ರಗಳ ವಿಚಾರಕ್ಕೆ ಬಂದರೆ ಸದ್ಯಕ್ಕೆ ಅವರು 'ದಿಲ್ ದಡ್ ಕ್ನೆ ದೋ' ಹಾಗೂ 'ಬಾಜಿರಾವು ಮಸ್ತಾನಿ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇದೆಲ್ಲಾ ಪಕ್ಕಕ್ಕಿಟ್ಟರೆ ಬಾಲಿವುಡ್ ನಲ್ಲಿ ಅವರು ಸಿಡಿಸಿರುವ ಬಾಂಬ್ ಮಾತ್ರ ಭರ್ಜರಿಯಾಗಿದೆ. (ಏಜೆನ್ಸೀಸ್)

English summary
Priyanka, who looks stunning and hot in the cover of the February issue of Filmfare magazine in a Madison jacket and hot pants by the J brand, will reveal some secrets of her life in the issue as the cover reads: “Explosive! Priyanka Chopra defiant take on one-sided love and having a baby this year.”

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada