»   » ಬಾಲಿವುಡ್ ಗೆ ಚೆಂಗನೆ ನೆಗೆದ ಬೆಳಗಾವಿ ಚಿಗರೆ ಲಕ್ಷ್ಮಿ ರೈ

ಬಾಲಿವುಡ್ ಗೆ ಚೆಂಗನೆ ನೆಗೆದ ಬೆಳಗಾವಿ ಚಿಗರೆ ಲಕ್ಷ್ಮಿ ರೈ

Posted By:
Subscribe to Filmibeat Kannada

ಇಷ್ಟು ವರ್ಷಗಳ ಕಾಲ ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ (ಹೊಸ ಹೆಸರು ರಾಯ್ ಲಕ್ಷ್ಮಿ) ಇದೀಗ ಬಾಲಿವುಡ್ ಗೆ ಚೆಂಗನೆ ನೆಗದಿದ್ದಾರೆ. ಅದರಲ್ಲೂ ಯಶಸ್ವಿ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ತಮಿಳಿನ ಎ ಆರ್ ಮುರುಗದಾಸ್ ಅವರ ಚಿತ್ರದಲ್ಲಿ ಎಂಬುದು ವಿಶೇಷ.

ಮುರುಗದಾಸ್ ಅವರ 'ಅಕಿರಾ' ಚಿತ್ರದಲ್ಲಿ ರಾಯ್ ಲಕ್ಷ್ಮಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಇದ್ದು, ರಾಯ್ ಅತಿಥಿ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿ ರೈ ಅವರಿಗೆ ಬೇಸರವೇನೂ ಇಲ್ಲ. ['ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು]

Actress Raai Laxmi makes her bollywood debut

ಅವರು ಮಾತನಾಡುತ್ತಾ, "ಈ ಚಿತ್ರದ ಅತಿಥಿ ಪಾತ್ರದ ಮೂಲಕ ತಾನು ಬಾಲಿವುಡ್ ಗೆ ಅಡಿಯಿಡುತ್ತಿದ್ದೇನೆ. ಆದರೆ ಬಹಳ ಗಮನಾರ್ಹ ಪಾತ್ರ. ಹಾಗಾಗಿಯೇ ಈ ಪಾತ್ರವನ್ನು ಅಂಗೀಕರಿಸಿದೆ. ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸುತ್ತಿದ್ದೇನೆ. ಇದುವರೆಗೂ ನಾನು ಮಾಡದಂತಹ ಪಾತ್ರವಿದು" ಎಂದಿದ್ದಾರೆ.

ಕಾಸ್ಟಿಂಗ್ ನಿರ್ದೇಶಕರೊಬ್ಬರು ನನ್ನ ಹೆಸರನ್ನು ಸೂಚಿಸಿದರಂತೆ, ಮುರುಗದಾಸ್ ಅವರಿಂದ ಕರೆಬಂತು. ಅವರ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಪಾತ್ರದ ಬಗ್ಗೆ ಅವರು ಹೇಳಿದಾಗ ನಾನು ನೋ ಹೇಳಲು ಸಾಧ್ಯವಾಗಲೇ ಇಲ್ಲ ಎನ್ನುತ್ತಾರೆ ಲಕ್ಷ್ಮಿ. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ದಕ್ಷಿಣದ ಚಿತ್ರಗಳಿಗೆ ಹೋಲಿಸಿದರೆ ಬಾಲಿವುಡ್ ಚಿತ್ರಗಳು ಭಿನ್ನವಾಗಿರುತ್ತವೆ ಎನ್ನುವ ರಾಯ್ ಲಕ್ಷ್ಮಿ ಅವರ ಪಾಲಿಗೆ 'ಅಕಿರಾ' ಚಿತ್ರ ಮೊದಲ ಮೆಟ್ಟಿಲು. ಮುಂದೆ ಈ ಚಿತ್ರ ಅವರಿಗೆ ಬಾಲಿವುಡ್ ನಲ್ಲಿ ಒಳ್ಳೆಯ ಆಫರ್ ಗಳನ್ನು ತಂದುಕೊಟ್ಟರೂ ಅಚ್ಚರಿಯಿಲ್ಲ. (ಏಜೆನ್ಸೀಸ್)

English summary
Sandalwood actess Raai Lakshmi will now be making her Bollywood debut in AR Murugadoss's Akira, which stars Sonakshi Sinha in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada